Monday , August 26 2019
Breaking News
Home / ರಾಷ್ಟ್ರೀಯ / ED ಅಧಿಕಾರಿಗಳು ಅವರ ರಾಜಕೀಯ ನಾಯಕರನ್ನು ಮೆಚ್ಚಿಸಲು ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ: ಝಾಕಿರ್ ನಾಯ್ಕ್

ED ಅಧಿಕಾರಿಗಳು ಅವರ ರಾಜಕೀಯ ನಾಯಕರನ್ನು ಮೆಚ್ಚಿಸಲು ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ: ಝಾಕಿರ್ ನಾಯ್ಕ್

ಸಂದೇಶ ಇ-ಮ್ಯಾಗಝಿನ್: ದೇಶ ತೊರೆದಿರುವ NRI ಇಸ್ಲಾಮಿಕ್ ಪ್ರಭೋಧಕ ಡಾ. ಝಾಕಿರ್ ನಾಯ್ಕ್ ಅವರ ವಿರುದ್ಧ ನಿನ್ನೆ ಜಾರಿ ನಿರ್ದೇಶನಾಲಯ (ED) ಯಾವುದೇ ಆದಾಯವಿಲ್ಲದಿದ್ದರೂ ಕಳೆದ 6 ವರ್ಷಗಳಿಂದ ತಮ್ಮ ಇಂಡಿಯನ್ ಬ್ಯಾಂಕ್ ಅಕೌಂಟ್‌ಗೆ 49.20 ಕೋಟಿ ವರ್ಗಾವಣೆ ಮಾಡಿದ್ದಾರೆ ಎಂದು ಸಲ್ಲಿಸಿರುವ ಚಾರ್ಜ್ ಶೀಟ್ ಸಂಪೂರ್ಣ ಪೂರ್ವಾಗ್ರಹದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ. “ನಾನು ಅನೇಕ ರೀತಿಯ ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಿರುವ ವ್ಯಕ್ತಿ ಎಂದು ಎಲ್ಲಾ ಸರ್ಕಾರಿ ಸಂಸ್ಥೆಗಳಿಗೂ ಗೊತ್ತಿದೆ. ಇದು ನನ್ನ ಆದಯ ತೆರಿಗೆಯಲ್ಲಿ ನಾನು ಯಾವತ್ತೂ ತೋರಿಸುತ್ತಿರುವಂತಹ ವಿಷಯವಾಗಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ಒತ್ತಡದಲ್ಲಿರುವಂತೆ ಕಾಣುತ್ತಿದೆ. ರಾಜಕೀಯ ನಾಯಕರಿಗೆ ಅವರ ಗುರಿ ಸಾಧಿಸಬೇಕು. ಅದಕ್ಕಾಗಿ ಅಧಿಕಾರಿಗಳು ಅವರ ನಾಯಕರನ್ನು ಮೆಚ್ಚಿಸಲು ನನ್ನ ವಿರುದ್ಧ ಸುಳ್ಳು ಹೇಳುತ್ತಿದ್ದಾರೆ ಎಂದು ಝಾಕಿರ್ ನಾಯ್ಕ್ ಆರೋಪಿಸಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಢಾಕಾದಲ್ಲಿ ನಡೆದ ಸ್ಫೋಟದಲ್ಲಿ ಭಾಗಿಯಾಗಿದ್ದ ಭಯೋತ್ಪಾದಕನೊಬ್ಬ ಡಾ. ಝಾಕಿರ್ ನಾಯ್ಕ್ ಅವರ ಭೋಧನೆಯಿಂದ ಪ್ರಭಾವಿತನಾಗಿದ್ದ ಎಂಬ ಆರೋಪ ಕೇಳಿ ಬಂದ ನಂತರ ಡಾ. ನಾಯ್ಕ್ ದೇಶ ತೊರೆದಿದ್ದರು. ಆ ಬಳಿಕ ಸರಕಾರ ಅವರ ವಿರುದ್ಧ ಮನಿ ಲಾಂಡ್ರಿಂಗ್ ಆರೋಪ ಹೊರಿಸಿತ್ತು. ಮಲೇಷ್ಯಾದ ಶಾಶ್ವತ ಪೌರತ್ವ ಹೊಂದಿರುವ ಡಾ. ಝಾಕಿರ್ ನಾಯ್ಕ್ ಸದ್ಯಕ್ಕೆ ಮಲೇಷ್ಯಾದಲ್ಲಿ ನೆಲೆಸುತ್ತಿದ್ದಾರೆ.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *