Sunday , September 22 2019
Breaking News
Home / ರಾಷ್ಟ್ರೀಯ / ಧಾರ್ಮಿಕ ವಿಶ್ವಾಸದ ಕಾರಣ ನೀಡಿ ಮತ್ತೊಂದು ಮಹತ್ವದ ತ್ಯಾಗ ಮಾಡಿ ಝೈರಾ ವಾಸಿಂ

ಧಾರ್ಮಿಕ ವಿಶ್ವಾಸದ ಕಾರಣ ನೀಡಿ ಮತ್ತೊಂದು ಮಹತ್ವದ ತ್ಯಾಗ ಮಾಡಿ ಝೈರಾ ವಾಸಿಂ

ಸಂದೇಶ ಇ-ಮ್ಯಾಗಝಿನ್: ‘ದಂಗಲ್’ ಖ್ಯಾತಿಯ ನಟಿ ಝೈರಾ ವಾಸಿಂ ಇತ್ತೀಚೆಗೆ ತನ್ನ ಧಾರ್ಮಿಕ ವಿಶ್ವಾಸ ನಶಿಸುತ್ತಿದೆ ಎಂದು ಹೇಳಿ ಬಾಲಿವುಡ್ ನಿಂದ ನಿರ್ಗಮಿಸುವುದಾಗಿ ಹೇಳಿದ್ದರು. ಇದೀಗ ಮತ್ತೊಂದು ವರದಿಯ ಪ್ರಕಾರ ಕಾಶ್ಮೀರಿ ಮೂಲದ ನಟಿ ಝೈರಾ ವಾಸಿಂ ಬಿಗ್ ಬಾಸ್ 13 ರ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಬಿಗ್ ಬಾಸ್ ತನ್ನ ಸೀಸನ್ 13 ನಲ್ಲಿ ಭಾಗವಹಿಸಲು ಝೈರಾಗೆ 1.2 ಮಿಲಿಯನ್ ಆಫರ್ ಮಾಡಿದ್ದು ಝೈರಾ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಝೈರಾ ವಾಸಿಮ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು. ಇದೀಗ ಬಿಗ್ ಬಾಸ್ ನೀಡಿದ 1.2 ಮಿಲಿಯನ್ ಆಫರನ್ನು ತಿರಸ್ಕರಿಸಿರುವ ಝೈರಾ ತನ್ನ ವಿರುದ್ಧ ಹರಡಲಾಗಿದ್ದ ಗಾಳಿ ಸುದ್ದಿಗೆ ತಿಲಾಂಜಲಿ ಹಾಡಿದ್ದಾರೆ.

ಧಾರ್ಮಿಕ ಕಾರಣಕ್ಕಾಗಿ ಈ ಪ್ರಸ್ತಾಪವನ್ನು ಝೈರಾ ತಿರಸ್ಕರಿಸಿದ್ದಾರೆ ಎಂದು ‘ದ ಖಬ್ರಿ’ ವರದಿ ಮಾಡಿದೆ. ಕಳೆದ ಭಾನುವಾರ ತಮ್ಮ ಅಧಿಕೃತ ಫೇಸ್ಬುಕ್ ಖಾತೆಯ ಮೂಲಕ ಬಾಲಿವುಡ್ ನಿಂದ ನಿರ್ಗಮಿಸುವುದಾಗಿ ಘೋಷಿಸಿದ್ದರು. ಝೈರ ಅವರ ಈ ನಿರ್ಧಾರದ ಬಾಲಿವುಡ್ ನಲ್ಲಿ ಪರ ವಿರೋಧ ಚರ್ಚೆ ಗೆ ಕಾರಣ ವಾಗಿದ್ದವು.

Check Also

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಆರಿಫ್ ಖಾನ್ ಹುತಾತ್ಮ

001ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನ ಸೋಮವಾರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಜಮ್ಮು ಕಾಶ್ಮೀರದ ರಾಜೋರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. …

Leave a Reply

Your email address will not be published. Required fields are marked *