Friday , May 24 2019
Breaking News
Home / ಕ್ರೀಡೆ / WWE ಸ್ಟಾರ್ ಮುಸ್ತಫಾ ಅಲಿ ಪವಿತ್ರ ರಂಝಾನ್ ತಿಂಗಳ ಅವಧಿಯ ಅವರ ದಿನಚರಿಯನ್ನು ಹಂಚಿಕೊಂಡಿದ್ದಾರೆ

WWE ಸ್ಟಾರ್ ಮುಸ್ತಫಾ ಅಲಿ ಪವಿತ್ರ ರಂಝಾನ್ ತಿಂಗಳ ಅವಧಿಯ ಅವರ ದಿನಚರಿಯನ್ನು ಹಂಚಿಕೊಂಡಿದ್ದಾರೆ

ಸಂದೇಶ ಇ-ಮ್ಯಾಗಝಿನ್: ಖ್ಯಾತ WWE ಸ್ಟಾರ್ ಮುಸ್ತಫಾ ಅಲಿಯವರು ರಂಝಾನ್ ತಿಂಗಳ ಅವಧಿಯಲ್ಲಿ ಪ್ರೊಫೆಶನಲ್ ಕುಸ್ತಿ ಪಟುವಾದ ತಮ್ಮ ದಿನಚರಿ ಹೇಗಿರುತ್ತೆ ಎಂಬುದನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ರಂಝಾನ್ ತಿಂಗಳು ನನಗೆ ಅತಿ ಮುಖ್ಯವಾಗಿದೆ ಎಂದ ಮುಸ್ತಫ ಅಲಿ, ಯಾವುದಾದರೂ ನಮಗೆ ಅತಿ ಮುಖ್ಯವಾದರೆ ಅದನ್ನು ಗಳಿಸಲು ನಾವು ಎಂತಹ ಬಲಿದಾನಕ್ಕೂ ಸಿದ್ಧವಾಗಬೇಕಾಗುತ್ತದೆ. ರಮದಾನ್ ಕೂಡ ಇದೇ ಅರ್ಥದಲ್ಲಿ ನಾನು ನೋಡುತ್ತೇನೆ. ಈ ಸಮಯದಲ್ಲಿ ನಾವು ತಿಂದಿಲ್ಲ ಎಂಬುದಕ್ಕಿಂತ ಹೆಚ್ಚಾಗಿ ಆಹಾರ ಸಿಗದೆ ಜಗತ್ತಿನಲ್ಲಿ ಕಷ್ಟಪಡುವ ಜನರ ಬಗ್ಗೆ ಚಿಂತಿಸುತ್ತೇನೆ ಎಂದಿದ್ದಾರೆ. 2003 ರಿಂದ WWE ಯಲ್ಲಿ ರೆಸ್ಲರ್ ಆಗಿರುವ ಚಿಕಾಗೋ ಮೂಲದ ಅಲಿ ವಿಶ್ವದ ಶ್ರೇಷ್ಟ 500 ಬಾಕ್ಸರ್‌ಗಳ ಸಾಲಿನಲ್ಲಿ 112 ನೇ ಸ್ಥಾನವನ್ನು ಹೊಂದಿದ್ದಾರೆ. ರಂಝಾನ್ ದಿನಗಳಲ್ಲಿ ಪಂದ್ಯವಿದ್ದರೆ ಇಫ್ತಾರ್ ಬಳಿಕ ಪಾಲ್ಗೊಳ್ಳುತ್ತೇನೆ ಮತ್ತು ಈ ಸಮಯದಲ್ಲಿ ಟ್ರೈನಿಂಗ್ ಇದ್ದರೆ ರಾತ್ರಿ ಸಮಯದಲ್ಲಿ ಮಾತ್ರ ಭಾಗವಹಿಸುತ್ತೇನೆ. ಫಜ್ರ್ ನಮಾಝ್‌ಗೆ ಮುಂಚಿತವಾಗಿ ಟ್ರೈನಿಂಗ್ ನಿಲ್ಲಿಸಿ ಉಪವಾಸ ಆಚರಿಸುತ್ತೇನೆ ಎಂದಿದ್ದಾರೆ.

Check Also

ಕ್ರಿಕೆಟ್: ಈ ಎರಡು ದೇಶಗಳಿಗೆ ದೊರೆಯಿತು ಐಸಿಸಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಮಾನ್ಯತೆ

001ಸಂದೇಶ ಇ-ಮ್ಯಾಗಝಿನ್: ಐಸಿಸಿ ಪುರುಷರ ಕ್ರಿಕೆಟ್ ವಿಶ್ವ ಕಪ್ ಲೀಗ್ 2 ನಲ್ಲಿ ಹಾಂಗಾಂಗ್-ಅಮೇರಿಕಾ(USA) ಮಧ್ಯೆ ನಡೆದ ಪಂದ್ಯದಲ್ಲಿ ಹಾಂಗ್ …

Leave a Reply

Your email address will not be published. Required fields are marked *