Tuesday , April 7 2020
Breaking News
Home / ಕ್ರೀಡೆ / ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಸೈಮನ್ ಟೌಫೆಲ್ ಹಾಗೂ ಕ್ರಿಕೆಟ್ ದಿಗ್ಗಜ ಮಾಜಿ ಆಟಗಾರರು ಸೇರಿದಂತೆ ಅನೇಕರು ಪಂದ್ಯದ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ ಆರು ರನ್ ನೀಡಿರುವ ಅಂಪೈರ್‌ಗಳು ಗಂಭೀರ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಿವಾದದ ಬಗ್ಗೆ ಮೌನ ಮುರಿದ ಐಸಿಸಿ ವಕ್ತಾರರು, ನೀತಿಗೆ ವಿರುದ್ಧವಾಗಿರುವುದರಿಂದ ಅಂಪೈರ್ ತೆಗೆದುಕೊಂಡ ನಿರ್ಧಾರದ ಬಗ್ಗೆ ಸಂಸ್ಥೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಿಯಮ ಸಂಖ್ಯೆ 19.8 ರ ಪ್ರಕಾರ, ಫೀಲ್ಡರ್‌ ಓವರ್ ಥ್ರೋ ಅಥವಾ ಉದ್ದೇಶ ಪೂರ್ವಕವಾಗಿ ತಾನು ಹಿಡಿದ ಚೆಂಡನ್ನು ಚೌಂಡರಿ ಲೈನ್ ದಾಟಿಸಿದರೆ, ಆ ರನ್ ಬ್ಯಾಟಿಂಗ್ ತಂಡಕ್ಕೆ ನೀಡುತ್ತಾರೆ. ಇಲ್ಲಿ ಬ್ಯಾಟ್ಸ್ ಮನ್ ಎರಡು ರನ್ ಅದಾಗಲೇ ಪೂರ್ಣ ಗೊಳಿಸಿದ್ದ ಕಾರಣ ಆ ಎರಡು ರನ್ ಹಾಗೂ ಓವರ್ ಥ್ರೋ ಬೌಂಡರಿ ಸೇರಿ ಅಂಪಾಯರ್ ಗಳು ಆರು ರನ್ ಇಂಗ್ಲೇಂಡ್ ತಂಡಕ್ಕೆ ನೀಡಿರಬಹುದು ಎಂದು ಅಂದಾಜಿಸಲಾಗಿದೆ.

ಮೊನ್ನೆ ಕ್ರಿಕೆಟ್ ಹುಟ್ಟೂರು ಲಾರ್ಡ್ಸ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಫೀಲ್ಡರ್ ಮಾರ್ಟಿನ್ ಗುಪ್ಟಿಲ್ ಅವರು ತಮ್ಮ ಕಡೆ ಬರುತ್ತಿದ್ದ ಬೆನ್ ಸ್ಟೋಕ್ಸ್ ಹೊಡೆದ ಚೆಂಡನ್ನು ಕೀಪರ್‌ ಕಡೆಗೆ ಎಸೆದಿದ್ದು, ಆದರೆ ಆಕಸ್ಮಿಕವಾಗಿ ಚೆಂಡು ಕ್ರೀಸಿನ ಕಡೆಗೆ ಬರುತ್ತಿದ್ದ ಸ್ಟೋಕ್ಸ್ ಅವರ ಬ್ಯಾಟಿಗೆ ಬಡಿದು ಬೌಂಡರಿ ದಾಟಿತ್ತು. ಈ ಪ್ರಕರಣದಲ್ಲಿ ಅಂಪಾಯರ್ ಇಂಗ್ಲೇಂಡ್‌ಗೆ 6 ರನ್ ನೀಡಿದ್ದರು. ಇದೇ ಕಾರಣದಿಂದ ಮ್ಯಾಚ್ ಟೈ ಆಗಿ ಕಪ್ ನ್ಯೂಝಿಲ್ಯಾಂಡ್ ಕೈ ತಪ್ಪಲು ಕಾರಣವಾಯಿತು.

Check Also

ವಲ್ಡ್ ಕಪ್: ವಿಜಯೋತ್ಸವದಿಂದ ದೂರ ಉಳಿದ ಇಬ್ಬರು ಆಟಗಾರರು

ಸಂದೇಶ ಇ-ಮ್ಯಾಗಝಿನ್: ಲಂಡನ್‌ನ ಲಾರ್ಡ್ಸ್‌ನಲ್ಲಿ ಭಾನುವಾರ ನಡೆದ ಐಸಿಸಿ ವಿಶ್ವಕಪ್ 2019 ರ ಫೈನಲ್‌ನಲ್ಲಿ ಪಂದ್ಯ ಟೈ ಆದ ನಂತರ …

Leave a Reply

Your email address will not be published. Required fields are marked *