Tuesday , April 7 2020
Breaking News
Home / ಕ್ರೀಡೆ / ವಲ್ಡ್ ಕಪ್: ವಿಜಯೋತ್ಸವದಿಂದ ದೂರ ಉಳಿದ ಇಬ್ಬರು ಆಟಗಾರರು

ವಲ್ಡ್ ಕಪ್: ವಿಜಯೋತ್ಸವದಿಂದ ದೂರ ಉಳಿದ ಇಬ್ಬರು ಆಟಗಾರರು

ಸಂದೇಶ ಇ-ಮ್ಯಾಗಝಿನ್: ಲಂಡನ್‌ನ ಲಾರ್ಡ್ಸ್‌ನಲ್ಲಿ ಭಾನುವಾರ ನಡೆದ ಐಸಿಸಿ ವಿಶ್ವಕಪ್ 2019 ರ ಫೈನಲ್‌ನಲ್ಲಿ ಪಂದ್ಯ ಟೈ ಆದ ನಂತರ ಸೂಪರ್ ಓವರ್ ನಲ್ಲೂ ಟೈ ಆಗಿದ್ದು, ನಂತರ ಇಂಗ್ಲೆಂಡ್ ತಂಡವು ಹೆಚ್ಚು ಬೌಂಡರಿ ಎಣಿಕೆ (26-17) ಆಧಾರದ ಮೇಲೆ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಮೊದಲ ಬಾರಿಗೆ ಎತ್ತಿದ ಕ್ರಿಕೆಟ್ ಜನಕರು 27 ವರ್ಷಗಳ ನಂತರ ಈ ಬಾರಿ ಪಂದ್ಯಾವಳಿಯ ಫೈನಲ್‌ ಹಂತಕ್ಕೆ ತಲುಪಿದ್ದರು. ಪಂದ್ಯ ಗೆದ್ದ ಬಳಿಕ ಟ್ರೋಫಿ ನೀಡುವಾಗ ಶಾಂಪೇನ್ ಚಿಮ್ಮಿಸಲಾಯಿತು. ನಾಯಕ ಇಯೊನ್ ಮೋರ್ಗಾನ್ ಟ್ರೋಫಿಯನ್ನು ಎತ್ತಿದ ಕೆಲವೇ ಸೆಕೆಂಡುಗಳ ನಂತರ ಇಂಗ್ಲೆಂಡ್ ಓಪನರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೋವ್ ಸಹ ಆಟಗಾರರ ಮೇಲೆ ಶಾಂಪೇನ್ ಚಿಮ್ಮಿಸಲು ಪ್ರಾರಂಭಿಸುತ್ತಿದ್ದಂತೆ ತಂಡದ ಇಬ್ಬರು ಪ್ರಮುಖ ಆಟಗಾರರಾದ ಸ್ಪಿನ್ನರ್ ಆದಿಲ್ ರಶೀದ್ ಮತ್ತು ಆಲ್ರೌಂಡರ್ ಮೊಯೀನ್ ಅಲಿಯವರು ಸ್ಥಳದಿಂದ ದೂರ ಹೋಗಿ ನಿಂತರು.

ಈ ಇಬ್ಬರು ಮುಸ್ಲಿಮ್ ಆಟಗಾರರು ಧಾರ್ಮಿಕ ನಂಬಿಕೆಗಳು ಇಸ್ಲಾಂನಲ್ಲಿ ಅನುಮತಿಸದ ಮದ್ಯ ಸೇವನೆ ಮತ್ತು ಅದರ ಚಿಮ್ಮುವಿಕೆಗೆ ಅಂತರ ಕಾಯ್ದು ಕೊಳ್ಳಲು ಈ ಇಬ್ಬರು ಆಟಗಾರರು ಈ ರೀತಿ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *