Friday , November 15 2019
Breaking News
Home / ವಿಶೇಷ / ತನ್ನ 40 ನೇ ವಯಸ್ಸಿನಲ್ಲಿ ನಿಧನರಾದ ಈ ಫೆಲಸ್ತೀನಿಯನ್ ಮಹಿಳೆ ಹೆತ್ತ ಮಕ್ಕಳ ಸಂಖ್ಯೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ತನ್ನ 40 ನೇ ವಯಸ್ಸಿನಲ್ಲಿ ನಿಧನರಾದ ಈ ಫೆಲಸ್ತೀನಿಯನ್ ಮಹಿಳೆ ಹೆತ್ತ ಮಕ್ಕಳ ಸಂಖ್ಯೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ಸಂದೇಶ ಇ-ಮ್ಯಾಗಝಿನ್: ಜಗತ್ತಿನ ಅತ್ಯಂತ ಗರ್ಭ ಫಲವತ್ತಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಫೆಲಸ್ತೀನಿಯನ್ ಮಹಿಳೆ ರವಿವಾರ ನಿಧನರಾಗಿದ್ದಾರೆ. ಮಹಿಳೆಯ ನಿಧನ ವಾರ್ತೆಯನ್ನು ಆಕೆಯ ಪತಿ ಗಾಝಾದ ಅಲ್ ಅನ್ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ. ವರದಿಯ ಪ್ರಕಾರ ಈ ಮಹಿಳೆ ತನ್ನ ಜೀವಿತಕಾಲದಲ್ಲಿ ಒಟ್ಟು 16 ಹೆರಿಗೆಯಲ್ಲಿ ಸುಮಾರು 69 ಮಕ್ಕಳನ್ನು ಹೆತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆಯ ಸಾವಿಗೆ ಕಾರಣವೇನೆಂದು ತಿಳಿದಿಲ್ಲವಾದರೂ ಹೆಚ್ಚಿನ ಪ್ರಸವದ ಕಾರಣ ಪ್ರಸವ ಸಂಬಂಧ ರೋಗದಿಂದಾಗಿ ಸಾವನ್ನಪ್ಪಿರಬಹುದು ಎಂದು ಸಂಶಯಿಸಲಾಗಿದೆ. ತನ್ನ 40 ನೇ ವಯಸ್ಸಿನಲ್ಲಿ ಮಕ್ಕಳನ್ನು ಹೆತ್ತು ಸಾವನ್ನಪ್ಪಿದ್ದಾಗಿ ವಾರ್ತಾ ಸಂಸ್ಥೆ ವರದಿ ಮಾಡಿದೆ. ಕೊನೆಯ ಹೆರಿಗೆಯಲ್ಲಿ ಆಕೆ ಹೆತ್ತ ಮಕ್ಕಳ ಸಂಖ್ಯೆ ಎಷ್ಟು ಮಾಧ್ಯಮಗಳು ಬಹಿರಂಗಪಡಿಸಿಲ್ಲ.

ಆದಾಗ್ಯೂ ಮಹಿಳೆಯೊಬ್ಬರು ಇಷ್ಟೊಂದು ಮಕ್ಕಳನ್ನು ಹೆತ್ತಿರುವುದು ಇದು ಮೊದಲ ಬಾರಿ ಏನಲ್ಲ, ರಷ್ಯನ್ ಮಹಿಳೆ ವಸ್ಸಿಲ್‌ಯೇವಾ(1725-1765) ಎಂಬವರು ಎರಡು ಶತಮಾನಗಳ ಹಿಂದೆಯೇ 27 ಹೆರಿಗೆಯಲ್ಲಿ 69 ಮಕ್ಕಳನ್ನು ಹೆತ್ತಿದ್ದು, ಗಿನ್ನೆಸ್ ವಲ್ಡ್ ರೆಕಾರ್ಡ್‌ ಪುಟದಲ್ಲಿ ಹೆಸರು ಪಡೆದುಕೊಂಡಿದ್ದಾರೆ.

Check Also

ನನ್ನ ಉಮ್ಮಾ: ಹಿಂದೂ ವ್ಯಕ್ತಿ ತನ್ನ ಮುಸ್ಲಿಂ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಪೋಸ್ಟ್ ವೈರಲ್

ಸಂದೇಶ ಇ-ಮ್ಯಾಗಝಿನ್: ಕೇರಳದ ಮಲಪ್ಪುರಂನ ಕಾಳಿಕಾವ್‌ನ ಅನಿವಾಸಿ ಭಾರತೀಯರಾದ ಶ್ರೀಧರನ್ ಅವರ ಫೇಸ್‌ಬುಕ್ ಪೋಸ್ಟ್, “ನನ್ನ ಉಮ್ಮಾ (ತಾಯಿ) ಅಲ್ಲಾಹನ …

Leave a Reply

Your email address will not be published. Required fields are marked *