Friday , November 15 2019
Breaking News
Home / ರಿಯಲ್ ಹೀರೋಸ್ / ಸಹರಿ ಉಣ್ಣದೆ ಉಪವಾಸವಿದ್ದು ಉಗ್ರರ ಸದೆಬಡೆದಿದ್ದ ಯೋಧ ಇಕ್ಬಾಲ್ ಅಹ್ಮದ್

ಸಹರಿ ಉಣ್ಣದೆ ಉಪವಾಸವಿದ್ದು ಉಗ್ರರ ಸದೆಬಡೆದಿದ್ದ ಯೋಧ ಇಕ್ಬಾಲ್ ಅಹ್ಮದ್

ಸಂದೇಶ ಇ-ಮ್ಯಾಗಝಿನ್: ಅದು 2017 ರ ಜೂನ್ ತಿಂಗಳು ಮುಸ್ಲಿಮರ ಪವಿತ್ರ ಉಪವಾಸದ ಮಾಸ ರಂಝಾನ್ ತಿಂಗಳು ನಡೆಯುತ್ತಿತ್ತು. ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ನಲ್ಲಿ ಕಮಾಂಡರ್ ಆಗಿದ್ದ ಇಕ್ಬಾಲ್ ಅಹ್ಮದ್ ಎಂದಿನಂತೆ ಉಪವಾಸ ವೃತ ಆಚರಿಸಲು ಸಹರಿ ಉಣ್ಣಲು ಬೆಳಗಿನ ಜಾವ 4 ರ ಸುಮಾರಿಗೆ ಎದ್ದಿದ್ದರು. ಊಟದ ತುತ್ತು ಬಾಯಿಗೆ ಇಡಬೇಕು ಅನ್ನುವಷ್ಟರಲ್ಲಿ ಕಮಾಂಡರ್ ಇಕ್ಬಾಲ್ ಅಹ್ಮದ್ ಅವರ ವಯರ್ ಲೆಸ್ ಸದ್ದು ಮಾಡಿತು. ಉತ್ತರ ಕಾಶ್ಮೀರದ ಬಂಡಿಪೊರಾ ಪ್ರದೇಶದಲ್ಲಿ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಕ್ಯಾಂಪ್ ಮೇಲೆ ನಾಲ್ವರು ಭಯೋತ್ಪಾದಕರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಸಹರಿ ಊಟವನ್ನು ಅಲ್ಲೇ ಬಿಟ್ಟ ಇಕ್ಬಾಲ್ ಅಹ್ಮದ್ ತನ್ನ ರೈಫಲ್ ಕೈಗೆತ್ತಿಕೊಂಡು ಭಯೋತ್ಪಾದಕರು ದಾಳಿ ಮಾಡಿದ್ದ ಪ್ರದೇಶಕ್ಕೆ ಹೋದರು. ಸುದೀರ್ಘ ಕಾಳಗದಲ್ಲಿ ಇಕ್ಬಾಲ್ ಅಹ್ಮದ್ ಅವರ ಸಹವರ್ತಿ ಚೇತನ್ ಕೊಲ್ಲಲ್ಪಟ್ಟರು.

ಆದರೆ ಸಹರಿ ಉಣ್ಣದೆ ಉಪವಾಸ ವೃತಾಚರಣೆ ಮಾಡಿದ್ದ ಇಕ್ಬಾಲ್ ಅಹ್ಮದ್ ಭಯೋತ್ಪಾದಕರನ್ನು ಮುಗಿಸುವ ವರೆಗೂ ಸುಸ್ತಾಗಲಿಲ್ಲ. ಸಹ್ರಿ ಉಣ್ಣದೆ ಉಪವಾಸ ಪ್ರಾರಂಭಿಸಿ ಭಯೋತ್ಪಾದಕರ ಮೇಲೆ ದಾಳಿ ನಡೆಸಿದ ಇಕ್ಬಾಲ್ ರವರ ಎದೆಗಾರಿಕೆಯಿಂದ ಭಾರೀ ದೊಡ್ಡ ಅನಾಹುತ ತಪ್ಪಿತ್ತು. ಆ ಸಮಯದಲ್ಲಿ ಇಕ್ಬಾಲ್ ಅಹ್ಮದ್ ಅವರ ಸಾಧನೆಯನ್ನು ಕೊಂಡಾಡಿದ್ದ ಸಿಆರ್‌ಪಿಎಫ್ ಒಂದು ಭಯಾನಕ ದುರಂತ ತಪ್ಪಿಸಿದ್ದಕ್ಕಾಗಿ ಇಕ್ಬಾಲ್ ಅಹ್ಮದ್ ಮತ್ತವರ ಸಹ ಸೈನಿಕರಿಗೆ ಧನ್ಯವಾದಗಳನ್ನು ತಿಳಿಸಿತ್ತು.

Check Also

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ …

Leave a Reply

Your email address will not be published. Required fields are marked *