Monday , July 22 2019
Breaking News
Home / ಟೆಕ್ನಾಲಜಿ / ಈ ರೀತಿ ವಾಟ್ಸಾಪ್ ಬಳಸುವವರನ್ನು ಸದ್ಯದಲ್ಲೇ ಬ್ಯಾನ್ ಮಾಡಲಿದೆ ವಾಟ್ಸಾಪ್

ಈ ರೀತಿ ವಾಟ್ಸಾಪ್ ಬಳಸುವವರನ್ನು ಸದ್ಯದಲ್ಲೇ ಬ್ಯಾನ್ ಮಾಡಲಿದೆ ವಾಟ್ಸಾಪ್

ಸಂದೇಶ ಇ-ಮ್ಯಾಗಝಿನ್: ವಾಟ್ಸಾಪ್ ಎಂಬುದು ಆನ್ರಾಯ್ಡ್ ಹಾಗೂ ಐಓಎಸ್ ಎರಡೂ ಆಪರೇಟಿಂಗ್ ಸಿಸ್ಟಮ್ ನಲ್ಲಿ ಮೊಬೈಲ್ ಬಳಸುವ ಬಳಕೆದಾರರ ನೆಚ್ಚಿನ ಮೆಸೆಂಜರ್ ಆಗಿದೆ. ವಿಶ್ವದಲ್ಲಿ ಬೇರೆ ಯಾವುದೇ ಮೆಸೆಂಜರ್ ಆಪ್‌ಗಳಿಗೆ ಇಲ್ಲದ ಬೇಡಿಕೆ ಈ ಆಪ್‌ಗೆ ಇದೆ. ಆದರೆ ಇದೀಗ ಬಂದಿರುವ ಅಪ್ಡೇಟ್ ಪ್ರಕಾರ ಕೆಲವೊಂದು ಬಳಕೆದಾರರು ಅಧಿಕ ಪ್ರಸಂಗ ತೋರಿಸಿ ತನ್ನ ಆಪ್ ಬಳಸುತ್ತಿರುವುದು ವಾಟ್ಸಾಪ್ ಗಮನಕ್ಕೆ ಬಂದಿದೆ. ಆದುದರಿಂದ ಇಂತಹವರನ್ನು ವಾಟ್ಸಾಪ್ ಸದ್ಯದಲ್ಲೇ ಬ್ಯಾನ್ ಮಾಡುವುದಾಗಿ ತಿಳಿಸಿದೆ. ಇದರಲ್ಲಿ ಮುಖ್ಯವಾಗಿ ವಾಟ್ಸಾಪ್ ನ ನಕಲಿ ವರ್ಶನ್ ಬಳಸುತ್ತಿರುವ ಬಳಕೆದಾರರು ಹಾಗೂ ಥರ್ಡ್ ಪಾರ್ಟಿ ಆಪ್ ಬಳಸಿ ವಾಟ್ಸಾಪ್ ಅನ್ನು ಬದಲಾಯಿಸುವ ಮುಖ್ಯವಾಗಿ ವಾಟ್ಸಾಪ್‌ನ ಬಣ್ಣ, ಆಡಿಯೋ ಕ್ಲಾರಿಟಿ, ಫೈಲ್ ಕಳುಹಿಸುವ ಕ್ಷಮತೆ ಇದನ್ನೆಲ್ಲ ತಮಗೆ ಬೇಕಾದ ಹಾಗೆ ಬದಲಾಯಿಸುವ ಥರ್ಡ್ ಪಾರ್ಟಿ ಆಪ್‌ಗಳು ಆಪ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದನ್ನು ಬಳಾಸುತ್ತಿರುವವರನ್ನೂ ಕೂಡ ವಾಟ್ಸಾಪ್ ಬ್ಯಾನ್ ಮಾಡಲಿದೆ.

ಇಂತಹ ಆಪ್ ಗಳನ್ನು ಬಳಸುವುದರಿಂದ ತನ್ನ ಸುರಕ್ಷತೆಗೆ ಧಕ್ಕೆ ಬರುತ್ತೆ ಎಂದು ವಾಟ್ಸಾಪ್ ಮನಗಂಡಿದ್ದು, ಇದನ್ನು ವಾಟ್ಸಾಪ್ ತನ್ನ FAQ ಪೇಜ್‌ನಲ್ಲೂ ತಿಳಿಸಿದೆ. ಇನ್ನು ಮುಂದೆ ಅಂತಹದ್ದಕ್ಕೆಲ್ಲ ಅವಕಾಶ ಕೊಡಲಾರೆ ಎಂದಿರುವ ವಾಟ್ಸಾಪ್ ಅಂತಹ ಬಳಕೆದಾರರನ್ನು ಟೆಂಪರರಿ ಹಾಗೂ ಪರ್ಮನೆಂಟ್ ಬ್ಯಾನ್ ಮಾಡುವುದಾಗಿ ತಿಳಿಸಿದೆ.

Check Also

ನಡೆದಾಡಲು ಸಾಧ್ಯವಾಗದ ಪತ್ನಿಗಾಗಿ ಆತ ನಿರ್ಮಿಸಿದ ರಿಮೋಟ್ ಕಂಟ್ರೋಲ್ ಬೆಡ್

001ಸಂದೇಶ ಇ-ಮ್ಯಾಗಝಿನ್: ರೋಗದಿಂದಾಗಿ ನಡೆದಾಡಲು ಸಾಧ್ಯವಾಗದ ತನ್ನ ಪತ್ನಿಗಾಗಿ ತಮಿಳುನಾಡಿನ ವ್ಯಕ್ತಿಯೋರ್ವ ರಿಮೋಟ್ ಕಂಟ್ರೋಲ್ ಬೆಡ್ ನಿರ್ಮಿಸಿದ್ದಾರೆ. ಈ ಒಂದು …

Leave a Reply

Your email address will not be published. Required fields are marked *