Monday , July 22 2019
Breaking News
Home / ಟೆಕ್ನಾಲಜಿ / ಈ ಚುನಾವಣೆಯ ಸಮಯದಲ್ಲಿ ವಾಟ್ಸಾಪ್ ಭಾರತೀಯರಿಗೆ ಕಿರಿಕಿರಿ ಮುಕ್ತವಾಗಲು ನೀಡುತ್ತಿದೆ ಈ ಹೊಸ ಫೀಚರ್

ಈ ಚುನಾವಣೆಯ ಸಮಯದಲ್ಲಿ ವಾಟ್ಸಾಪ್ ಭಾರತೀಯರಿಗೆ ಕಿರಿಕಿರಿ ಮುಕ್ತವಾಗಲು ನೀಡುತ್ತಿದೆ ಈ ಹೊಸ ಫೀಚರ್

ಸಂದೇಶ ಇ-ಮ್ಯಾಗಝಿನ್: ಭಾರತದಲ್ಲಿ ಚುನಾವಣೆಯ ಸಮಯ ವಾದ ಕಾರಣ ಈಗ ಸೋಶಿಯಲ್ ಮೀಡಿಯಾಗಳಾದ ವಾಟ್ಸಾಪ್ ಫೇಸ್ಬುಕ್‌ಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ್ದೇ ಕಾರುಬಾರು. ನಿಮ್ಮ ಅನುಮತಿ ಇಲ್ಲದೆ ನಿಮ್ಮನ್ನು ರಾಜಕೀಯ ಪಕ್ಷಗಳ ವಾಟ್ಸಾಪ್ ಗ್ರೂ‌ಪ್‌ಗೆ ಸೇರಿಸಲಾಗುತ್ತಿದೆ. ಇದರಿಂದ ನಿಮಗೆ ಕಿರಿಕಿರಿ ಅನಿಸಬಹುದು. ಇದನ್ನು ತಪ್ಪಿಸಲು ವಾಟ್ಸಾಪ್ ಹೊಸ ಫೀಚರ್ ಬಿಡುಗಡೆ ಮಾಡಿದೆ. ಇನ್ನು ಮುಂದೆ ನಿಮ್ಮ ಅನುಮತಿ ಇಲ್ಲದೆ ಯಾರೂ ನಿಮ್ಮನ್ನು ಯಾವ ಗ್ರೂಪಿಗೂ ಸೇರಿಸಲಾಗುವುದಿಲ್ಲ. ಇದು ಚುನಾವಣೆ ಸಮಯ ಮಾತ್ರವಲ್ಲದೆ ಅನಗತ್ಯ ಗ್ರೂಪ್ ಮಾಡಿ ಕಿರಿಕಿರಿ ಮಾಡುವ ನಿಮ್ಮ ಕೆಲವು ಸ್ನೇಹಿತರಿಂದಲೂ ಇದರಿಂದಾಗಿ ನಿಮಗೆ ಮುಕ್ತಿ ದೊರೆಯಲಿದೆ. ಫೇಸ್ಬುಕ್ ಒಡೆತನದ ವಾಟ್ಸಾಪ್ ಮೆಸೆಂಜರ್ ಈ ಹೊಸ ಫೀಚರ್ ಅನ್ನು ಬರುವ ವಾರ ವಿಶ್ವದಾದ್ಯಂತ ಲಾಂಚ್ ಮಾಡಲಿದೆ.

ಸೆಟ್ಟಿಂಗ್ ಹೇಗೆ?
ಸೆಟ್ಟಿಂಗ್ಸ್‌ಗೆ ಹೋದರೆ ಅಲ್ಲಿ ನಿಮಗೆ ಆಪ್ಶನ್ ಕಾಣಿಸುತ್ತೆ. ಮೊದಲನೇಯದು “ನೋ ಬಡಿ” ಎರಡನೇಯದು “ಮೈ ಕಾಂಟೆಕ್ಟ್” ಮೂರನೇಯದು “ಎವರೀವನ್”. ನಿಮ್ಮ ಅನುಮತಿ ಇಲ್ಲದೆ ಯಾರೂ ನಿಮ್ಮನ್ನು ಗ್ರೂಪಿಗೆ ಸೇರಿಸಬಾರದು ಎಂದಾದರೆ “ನೋ ಬಡಿ” ಆಯ್ಕೆ ಮಾಡಿಕೊಳ್ಳಿರಿ.

Check Also

ಅಚಾತುರ್ಯದಿಂದ ಡಿಸೇಲ್ ಕಾರಿ‌ಗೆ ಪೆಟ್ರೋಲ್ ತುಂಬಿಸಿದಾಗ ಈ ರೀತಿ ಮಾಡಿ ನಿಮ್ಮ ವಾಹನವನ್ನು ರಕ್ಷಿಸಿ

004ಸಂದೇಶ ಇ-ಮ್ಯಾಗಝಿನ್: ಇವತ್ತಿನ ದಿನಗಳಲ್ಲಿ ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ನೀವು ಪೆಟ್ರೋಲ್ ಪಂಪ್‌ಗೆ ಹೋದರೆ ಅಲ್ಲಿರುವ …

Leave a Reply

Your email address will not be published. Required fields are marked *