Saturday , April 4 2020
Breaking News
Home / ಟೆಕ್ನಾಲಜಿ / ಅಚಾತುರ್ಯದಿಂದ ಡಿಸೇಲ್ ಕಾರಿ‌ಗೆ ಪೆಟ್ರೋಲ್ ತುಂಬಿಸಿದಾಗ ಈ ರೀತಿ ಮಾಡಿ ನಿಮ್ಮ ವಾಹನವನ್ನು ರಕ್ಷಿಸಿ

ಅಚಾತುರ್ಯದಿಂದ ಡಿಸೇಲ್ ಕಾರಿ‌ಗೆ ಪೆಟ್ರೋಲ್ ತುಂಬಿಸಿದಾಗ ಈ ರೀತಿ ಮಾಡಿ ನಿಮ್ಮ ವಾಹನವನ್ನು ರಕ್ಷಿಸಿ

ಸಂದೇಶ ಇ-ಮ್ಯಾಗಝಿನ್: ಇವತ್ತಿನ ದಿನಗಳಲ್ಲಿ ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ನೀವು ಪೆಟ್ರೋಲ್ ಪಂಪ್‌ಗೆ ಹೋದರೆ ಅಲ್ಲಿರುವ ವಾಹನಗಳ ಉದ್ದನೆಯ ಲೈನಿನಲ್ಲಿ ಕಂಫ್ಯೂಸ್ ಆಗಿ ಡೀಸೆಲ್ ಹಾಕ ಬೇಕಾದವರು ಕಣ್ತಪ್ಪಿನಿಂದಾಗಿ ಪೆಟ್ರೋಲ್ ಹಾಕಿಸಿ ಕೊಂಡಿರುವ ಎಷ್ಟೋ ಉದಾಹರಣೆಗಳಿಗೆ. ಲಕ್ಷ ಲಕ್ಷ ಕೊಟ್ತು ನೀವು ಕಾರು ಖರೀದಿ ಮಾಡಿರುತ್ತೀರಿ. ಇಂತಹದ್ದರಲ್ಲಿ ಈ ಫ್ಯೂಲ್ ಚೇಂಜ್ ನಿಂದಾಗುವ ಮೇಜರ್ ಪರಿಣಾಮದಿಂದಾಗಿ ನಿಮ್ಮ ವಾಹನ ಹಾಳಾಗುವ ಸಾಧ್ಯತೆ ಇದೆ. ಏಕೆಂದರೆ ಪ್ರತಿಯೊಂದು ಇಂಜಿನ್ ಕೂಡ ನಿರ್ದಿಷ್ಟ ಇಂಧನವನ್ನು ಗುರಿಯಾಗಿಸಿ ಡಿಸೈನ್ ಮಾಡಿರಲಾಗುತ್ತದೆ. ಆದುದರಿಂದ ಇದೊಂದು ಸಾಧಾರಣ ಸಮಸ್ಯೆ ಅಲ್ಲ. ಇದಕ್ಕಾಗಿ ನೀವು ಯಾವ ರೀತಿಯ ಕ್ರಮಗಳನ್ನು ಕೈಗೊಂಡು ಆಗುವಂತಹ ನಷ್ಟವನ್ನು ತಗ್ಗಿಸಬಹುದು ಎಂದು ಈ ಮೂಲಕ ನಿಮಗೆ ಕೆಲವೊಂದು ಟಿಪ್ಸ್‌ಗಳನ್ನು ನೀಡುತ್ತಿದ್ದೇವೆ.

1. ಎರಡು ಲೀಟರ್ ಅಥವಾ ಕಡಿಮೆ ತುಂಬಿಸಿದ್ದಲ್ಲಿ,
ಡೀಸೆಲ್ ಕಾರಿನಲ್ಲಿ ಕಣ್ತಪ್ಪಿನಿಂದಾಗಿ ಎರಡು ಲೀಟರ್ ಅಥವಾ ಅದಕ್ಕಿಂತ ಕಡಿಮೆ ಪೆಟ್ರೋಲ್ ತುಂಬಿಸಿದ್ದಲ್ಲಿ, ಇದು ನಿಮ್ಮ ಕಾರಿನ ಇಂಧನ ಟಾಂಕಿಯ 5% ಅಥವಾ ಅದಕ್ಕಿಂತ ಕಡಿಮೆ ಆಗಿರುತ್ತದೆ. ಈ ಸಂದರ್ಭದಲ್ಲಿ ಒಂದಾ ನೀವು ನಿಮ್ಮ ಕಾರಿನ ಇಂಧನ ಟಾಂಕಿಯನ್ನು ಸಂಪೂರ್ಣ ಖಾಲಿ ಮಾಡಿ ಆ ನಂತರ ಡೀಸೆಲ್ ತುಂಬಿಸ ಬಹುದು. ಇದಕ್ಕಾಗಿ ಮೆಕ್ಯಾನಿಕ್‌ನ ಅಗತ್ಯತೆ ಬೀಳಬಹುದು. ಇಲ್ಲದಿದ್ರೆ ತೊಂದ್ರೆ ಏನೂ ಇಲ್ಲ. ಬರೀ 5% ಮಾತ್ರ ಆಗಿರುವ ಕಾರಣ ಉಳಿದ ಫುಲ್ ಟ್ಯಾಂಕ್ ಅನ್ನು ಡೀಸೆಲ್ ನಿಂದ ತುಂಬಿಸಿ. ಇದರಿಂದಾಗಿ ನಿಮ್ಮ ಕಾರಿನಲ್ಲಿ ಹೊಗೆಯ ಸಮಸ್ಯೆ ಸ್ವಲ್ಪ ಇರಬಹುದಾದರೂ ಅಂತಹ ಯಾವುದೇ ಮೇಜರ್ ಸಮಸ್ಯೆ ಆಗಲಾರದು.

2. ಎರಡು ಲೀಟರ್ ಗಿಂತ ಹೆಚ್ಚು ತುಂಬಿಸಿದ್ದಲ್ಲಿ,
ಎರಡು ಲೀಟರ್ ಗಿಂತ ಹೆಚ್ಚು ಪೆಟ್ರೋಲನ್ನು ನಿಮ್ಮ ಡೀಸೆಲ್ ಕಾರಿನಲ್ಲಿ ಕಣ್ತಪ್ಪಿನಿಂದಾಗಿ ತುಂಬಿಸಿದ್ದಲ್ಲಿ, ಯಾವುದೇ ಕಾರಣಕ್ಕೂ ನಿಮ್ಮ ಕಾರಿನ ಇಂಜಿನ್ ಚಾಲನೆ ಮಾಡಬೇಡಿ. ಹತ್ತಿರದ ಗ್ಯಾರೇಜ್‌ನ ಮೆಕಾನಿಕ್ ಗೆ ಮಾಹಿತಿ ನೀಡಿ ಆತನನ್ನು ಕರೆತಂದು ಆತನಿಂದ ನಿಮ್ಮ ಕಾರಿನಲ್ಲಿರುವ ಪೆಟ್ರೋಲನ್ನು ಸಂಪೂರ್ಣ ಖಾಲಿ ಮಾಡಿಸಿ. ಸ್ಪಾರ್ಕ್ ಪ್ಲಗ್ ಅನ್ನು ಕ್ಲೀನ್ ಮಾಡಿಸಿ. ಇದೀಗ ಸಮಸ್ಯೆ ಪರಿಹಾರ ಆಯಿತು.

3. ಇಂಜಿನ್ ಸ್ಟಾರ್ಟ್ ಮಾಡಿದ್ದಲ್ಲಿ,
ಎರಡು ಲೀಟರ್ ಗಿಂತ ಹೆಚ್ಚು ಪೆಟ್ರೋಲ್ ತುಂಬಿಸಿದ್ದು, ಆನಂತರ ನೀವು ಇಂಜಿನ್ ಕೂಡ ಸ್ಟಾರ್ಟ್ ಮಾಡಿದ್ದೇ ಆದಲ್ಲಿ ಇದೀಗ ಮೇಜರ್ ಸಮಸ್ಯೆ ಆಯಿತು. ನೀವು ಕೂಡಲೆ ಇಂಜಿನ್ ಅನ್ನು ಸ್ಟಾಪ್ ಮಾಡಿ. ಮೆಕಾನಿಕ್ ಅನ್ನು ಕರೆದು ಟ್ಯಾಂಕ್ ಖಾಲಿ ಮಾಡಿಸಿ. ಸ್ಪಾರ್ಕ್ ಪ್ಲಗ್ ಕ್ಲೀನ್ ಮಾಡಿಸಿ. ಇನ್ನೂ ಸಮಸ್ಯೆಯಾದರೆ ಪ್ಯೂಲ್ ಫಿಲ್ಟರನ್ನು ಬದಲಾಯಿಸಿ. ಮತ್ತೂ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ನುರಿತ ಮೆಕಾನಿಕ್‌ನನ್ನು ಕರೆದು ನಿಮ್ಮ ಇಂಜಿನ್ ಬಿಚ್ಚಿಸಿ ಪರಿಹಾರ ಕಂಡು ಕೊಳ್ಳಬೇಕಾಗಬಹುದು.

Check Also

ನಡೆದಾಡಲು ಸಾಧ್ಯವಾಗದ ಪತ್ನಿಗಾಗಿ ಆತ ನಿರ್ಮಿಸಿದ ರಿಮೋಟ್ ಕಂಟ್ರೋಲ್ ಬೆಡ್

ಸಂದೇಶ ಇ-ಮ್ಯಾಗಝಿನ್: ರೋಗದಿಂದಾಗಿ ನಡೆದಾಡಲು ಸಾಧ್ಯವಾಗದ ತನ್ನ ಪತ್ನಿಗಾಗಿ ತಮಿಳುನಾಡಿನ ವ್ಯಕ್ತಿಯೋರ್ವ ರಿಮೋಟ್ ಕಂಟ್ರೋಲ್ ಬೆಡ್ ನಿರ್ಮಿಸಿದ್ದಾರೆ. ಈ ಒಂದು …

Leave a Reply

Your email address will not be published. Required fields are marked *