Friday , May 24 2019
Breaking News
Home / ಕಿರು ಬರಹ / ತನ್ನ ಮಕ್ಕಳ ಮಧ್ಯೆ ತಾರತಮ್ಯ ಮಾಡಿದ ವ್ಯಕ್ತಿಗೆ ಪ್ರವಾದಿ(ಸ) ಹೇಳಿದ್ದೇನು ಗೊತ್ತೇ..!

ತನ್ನ ಮಕ್ಕಳ ಮಧ್ಯೆ ತಾರತಮ್ಯ ಮಾಡಿದ ವ್ಯಕ್ತಿಗೆ ಪ್ರವಾದಿ(ಸ) ಹೇಳಿದ್ದೇನು ಗೊತ್ತೇ..!

ಬರಹ: ಮಹಮ್ಮದ್ ಇರ್ಷಾದ್ ಅಕ್ಕರಂಗಡಿ

ನುಅ ಮಾನ್ ಬಿನ್ ಬಶೀರ್(ರ) ಹೇಳುತ್ತಾರೆ; ನನ್ನ ತಂದೆ ನನಗೆ ಸ್ವಲ್ಪ ಉಡುಗೊರೆ ನೀಡಿದರು. ನನ್ನ ತಾಯಿ ಅಮ್ರ ಬಿಂತಿ ರವಾಹ ಹೇಳಿದರು; “ತಾವು ಇದಕ್ಕೆ ಪ್ರವಾದಿ (ಸ.ಅ)ರನ್ನು ಸಾಕ್ಷಿಯಾಗಿ ಮಾಡಿದರೆ ನನಗೆ ಸಂತೋಷವಾದೀತು.”

Image result for gift

ನನ್ನ ತಂದೆ ಪ್ರವಾದಿ (ಸ.ಅ)ರ ಬಳಿಗೆ ತೆರಳಿ ಹೇಳಿದರು; “ಯಾ ರಸೂಲಲ್ಲಾಹ್(ಸ.ಅ) ನಾನು ನನ್ನ ಪತ್ನಿ ಅಮ್ರಾಳಿಗೆ ಜನಿಸಿದ ನನ್ನ ಪುತ್ರನಿಗೆ ಸ್ವಲ್ಪ ಉಡುಗೊರೆ ಕೊಟ್ಟಿದ್ದೆನೆ.
ಅಮ್ರಾ ಹೇಳಿದಳು, ಇದಕ್ಕೆ ತಾವು ಪ್ರವಾದಿ (ಸ.ಅ)ರನ್ನು ಸಾಕ್ಷಿಯಾಗಿ ಮಾಡಿದರೆ ನನಗೆ ಸಂತೋಷವಾದೀತು.”

ಲೋಕಪ್ರವಾದಿಯು(ಸ.ಅ)) ಕೇಳಿದರು ನೀವು ನಿಮ್ಮ ಎಲ್ಲ ಮಕ್ಕಳಿಗೂ ಇಷ್ಟೇ ಕೊಟ್ಟಿರುವಿರಾ?

ನನ್ನ ತಂದೆಯವರು ಇಲ್ಲವೆಂದಾಗ ಪ್ರವಾದಿ(ಸ.ಅ) ಹೇಳಿದರು; “ಅಲ್ಲಾಹನನ್ನು ಭಯಪಡಿರಿ ಮತ್ತು ಮಕ್ಕಳ ಮಧ್ಯೆ ನ್ಯಾಯಪಾಲಿಸಿರಿ.”

ಇದನ್ನು ಕೇಳಿ ನನ್ನ ತಂದೆ ಮರಳಿ ಬಂದು ಉಡುಗೊರೆಯನ್ನು ನನ್ನಿಂದ ವಾಪಸು ಪಡೆದರು. (ಈ ಹದೀಸ್ ಸಹೀಹ್ ಅಲ್ ಬುಖಾರಿಯಲ್ಲಿ ವರದಿಯಾಗಿದೆ. ಹದೀಸ್ ಸಂ:1096)

Check Also

fire

ನಮ್ಮೊಳಗಿನ ರಾಜಕೀಯ ದ್ವೇಷದ ಅಗ್ನಿಜ್ವಾಲೆ ಎಷ್ಟು ಉರಿಯುತ್ತಿದೆ ಎಂದರೆ,

000ನಮಗೆ ನಮ್ಮ ಪಕ್ಷಕ್ಕಿಂತಲೂ ಇತರ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಮೂಗು ತೂರಿಸುವ ಚಾಳಿ. ಕೈಯಲ್ಲಿದ್ದ ಬಿರಿಯಾಣಿಯನ್ನು ಮಲಿನಗೊಳಿಸಿ, ಕಡ್ಲೆವಲಕ್ಕಿ ಪಡೆಯುವ ತವಕ. …

Leave a Reply

Your email address will not be published. Required fields are marked *