Monday , July 22 2019
Breaking News
Home / ರಾಷ್ಟ್ರೀಯ / ದೆಹಲಿ: ಮಸೀದಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ಸಂಸದನ ಆಗ್ರಹ

ದೆಹಲಿ: ಮಸೀದಿಗಳ ವಿರುದ್ಧ ಕ್ರಮಕ್ಕೆ ಬಿಜೆಪಿ ಸಂಸದನ ಆಗ್ರಹ

ಸಂದೇಶ ಇ-ಮ್ಯಾಗಝಿನ್: ಪಶ್ಚಿಮ ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ದೆಹಲಿಯ ಉಪರಾಜ್ಯ ಪಾಲರಿಗೆ ಪತ್ರ ಬರೆದು ದೆಹಲಿಯಲ್ಲಿ ಮತ್ತು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಮಸೀದಿಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಮತ್ತು ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ದೂರಿದ್ದಾರೆ. ನಿರ್ದಿಷ್ಟವಾಗಿ ನನ್ನ ಕ್ಷೇತ್ರದಲ್ಲಿ ಮತ್ತು ದೆಹಲಿಯ ಕೆಲವು ಕಡೆಗಳಲ್ಲಿ ಈ ಪ್ರವೃತ್ತಿ ಕಂಡು ಬರುತ್ತಿದ್ದು, ಇಲ್ಲಿ ಸರಾಕಾರಿ ಭೂಮಿ , ನಿರ್ಜನ ಪ್ರದೇಶ ಹಾಗೂ ರಸ್ತೆಗಳನ್ನು ಅತಿಕ್ರಮಿಸಿ ಮಸೀದಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ದೆಹಲಿಯ ಉಪರಾಜ್ಯಪಾಲ ಅನಿಲ್ ಬಾಯಿಜಾಲ್ ಅವರಿಗೆ ಬರೆದ ಪತ್ರದಲ್ಲಿ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ತಿಳಿಸಿದ್ದಾರೆ. ಇದನ್ನು ಗಮನಿಸದೆ ಬಿಟ್ಟರೆ ಸಮಸ್ಯೆಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ ಎಂದು ಅವರು ಅಧಿಕಾರಿಗಳಿಗೆ ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.

ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಸಮಸ್ಯೆಯ ಬಗ್ಗೆ ಪರಿಣಾಮ ಕಾರಿ ಕ್ರಮ ಕೈಗೊಳ್ಳುವಿರಾಗಿ ನಾನು ಆಶಿಸುತ್ತೇನೆ. ಸಮಸ್ಯೆಯನ್ನು ಗಮನಿಸದೇ ಬಿಟ್ಟಲ್ಲಿ ಮುಂದೆ ಗಂಭೀರ ಅನಾಹುತಗಳಾಗುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.

Check Also

ಮಾಬ್ ಲಿಂಚಿಂಗ್‌ಗೆ ಬಲಿಯಾಗುತ್ತಿದ್ದ ಮುಸ್ಲಿಮ್ ವ್ಯಕ್ತಿಯನ್ನು ರಕ್ಷಿಸಿದ ಹಿಂದೂ ಕುಟುಂಬ

002ಸಂದೇಶ ಇ-ಮ್ಯಾಗಝಿನ್: ಜೈ ಶ್ರೀ ರಾಮ್ ಎಂದು ಜಪಿಸಲು ನಿರಾಕರಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳ ಗುಂಪೊಂದು ಥಳಿಸಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ …

Leave a Reply

Your email address will not be published. Required fields are marked *