Sunday , September 22 2019
Breaking News
Home / ರಾಷ್ಟ್ರೀಯ / ಪಶ್ಚಿಮ ಬಂಗಾಲ: ಮದರಸಾ ಪರೀಕ್ಷೆಯಲ್ಲಿ ಮೆರಿಟ್‌ನಲ್ಲಿ ಉತ್ತೀರ್ಣರಾದ ಮೂವರು ಹಿಂದೂ ವಿದ್ಯಾರ್ಥಿನಿಯರು

ಪಶ್ಚಿಮ ಬಂಗಾಲ: ಮದರಸಾ ಪರೀಕ್ಷೆಯಲ್ಲಿ ಮೆರಿಟ್‌ನಲ್ಲಿ ಉತ್ತೀರ್ಣರಾದ ಮೂವರು ಹಿಂದೂ ವಿದ್ಯಾರ್ಥಿನಿಯರು

ಸಂದೇಶ ಇ-ಮ್ಯಾಗಝಿನ್: ಭಾರತದಲ್ಲಿ ರಾಜಕೀಯವಾಗಿ ಹಿಂದೂ-ಮುಸ್ಲಿಮರನ್ನು ಒಡೆಯುವ ಕೆಲಸ ಎಷ್ಟು ಚುರುಕಾಗಿ ನಡೆಯುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ಅವಸ್ಥೆಯಲ್ಲೂ ಕೆಲವು ಜನರು ಹಿಂದೂ ಮುಸ್ಲಿಮ್ ಸಧ್ಬಾವನೆ ಬೆಳೆಸುತ್ತಿದ್ದಾರೆ ಎಂಬುದು ಖುಷಿಯ ಸಂಗತಿ.

ಭಾರತದಲ್ಲಿ ಮದರಸಾ ಎಂಬುದನ್ನು ಇತ್ತೀಚೆಗೆ ಭಯೋತ್ಪಾದನೆಯೊಂದಿಗೆ ಜೋಡಿಸುವ ಅಥವಾ ಭಯೋತ್ಪಾದನೆಯ ತರಬೇತಿ ಕೊಡುವ ಕೇಂದ್ರ ಎಂದು ಬಿಂಬಿಸಲು ಪ್ರಯತ್ನ ನಡೆಯುತ್ತಿದೆ. ವಾಸ್ತವದಲ್ಲಿ ಮದರಸಾಗಳು ಇಸ್ಲಾಮ್ ಧರ್ಮದ ಬುನಾದಿಯಾದ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಬಗ್ಗೆ ಕಲಿಸುವ ಒಂದು ಪಾಠ ಶಾಲೆ. ಈ ಇಸ್ಲಾಮಿಕ್ ಪಾಠ ಶಾಲೆಗಳಲ್ಲಿ ಹಿಂದೂ ಮಕ್ಕಳು ಕಲಿಯುತ್ತಾರೆ ಎಂದರೆ ನಂಬ್ತೀರಾ? ಹೌದು ನಂಬಲೇ ಬೇಕು!

ಪಶ್ಚಿಮ ಬಂಗಾಳದ ಪೂರ್ವ ಬರ್ಧಮನ್‌ನ ಮುಸ್ಲಿಮ್ ಬಾಹುಳ್ಯದ ಪ್ರದೇಶದಲ್ಲಿರುವ ಅಂಗೋರ್ ದಂಗಾ ಮದರಸಾದಲ್ಲಿ ಮೂವರು ಹಿಂದೂ ವಿದ್ಯಾರ್ಥಿನಿಯರು ಪಶ್ಚಿಮ ಬಂಗಾಳ ಮದರಸಾ ಬೋರ್ಡ್ ಪರೀಕ್ಷೆಯಲ್ಲಿ 90 % ಅಂಕ ಗಳಿಸಿದ್ದಾರೆ.

ಟೆಲಿಗ್ರಾಫ್ ಪತ್ರಿಕೆಯಲ್ಲಿ ಬಂದ ವರದಿಯ ಪ್ರಕಾರ, ಪೀಯೂ ಪಿಯಾ ಶಾ, ಸಾಥಿ ಮೋದಕ್ ಹಾಗೂ ಅರ್ಪಿತಾ ಸಾಹಾ ಎಂಬ ಮೂವರು ಹಿಂದೂ ವಿದ್ಯಾರ್ಥಿನಿಯರು ಮದರಸಾ ಪರೀಕ್ಷೆಯಲ್ಲಿ ಒಟ್ಟು 800 ಅಂಕಗಳಲ್ಲಿ ಅನುಕ್ರಮವಾಗಿ 730, 730 ಹಾಗೂ 739 ಅಂಕ ಗಳಿಸಿದ್ದಾರೆ.

ಪಿಯೂ ಪಿಯಾಳ ತಂದೆ ರಾಮೇಶ್ವರ್ ಅವರ ಪ್ರಕಾರ ‘ಮುಸ್ಲಿಮ್ ಮಕ್ಕಳು ಶಾಲೆಯಲ್ಲಿ ಮದರಸಾ ಪಠ್ಯ ಇಲ್ಲದೇ ಇದ್ದರೂ ಶಾಲೆಗೆ ಹೋಗುತ್ತಾರೆ. ಮತ್ತೆ ನಾವು ಹಿಂದೂಗಳು ನಮ್ಮ ಮಕ್ಕಳನ್ನು ಮದರಸಾಗೆ ಕಲಿಸುವುದರಲ್ಲಿ ತಪ್ಪೇನು? ಎಂದು ಕೇಳುತ್ತಾರೆ.

ಮದರಸಾದಲ್ಲಿ ಅಧ್ಯಾಪಕರು ನಮ್ಮೊಂದಿಗೆ ಬಹಳ ಉತ್ತಮ ರೀತಿಯಲ್ಲಿ ವರ್ತಿಸುತ್ತಾರೆ. ನಮಗೆ ಕಲಿಕೆಯ ಎಲ್ಲಾ ವಿಷಯದಲ್ಲೂ ಸಹಾಯ ಮಾಡುತ್ತಾರೆ ಎಂದು ಹಿಂದೂ ವಿದ್ಯಾರ್ಥಿನಿಯರು ಹೇಳಿದ್ದಾರೆ. ಪಿಯೂ ಪಿಯಾ ಶಾ ಹಾಗೂ ಸಾಥಿ ಐಎ‌ಎಸ್ ಪರೀಕ್ಷೆ ಬರೆಯುವ ಕನಸು ಹೊತ್ತಿದ್ದಾರೆ. ಮತ್ತು ಅರ್ಪಿತಾ ನರ್ಸ್ ಆಗುವ ಕನಸು ಹೊಂದಿದ್ದಾಳೆ.

ಪಶ್ಚಿಮ ಬಂಗಾಳದ ಮದರ್ಸ ಮಂಡಳಿಯ ಅಧ್ಯಕ್ಷ ಅಬು ಖಾರ್ ಕಮರುದ್ದೀನ್ ಮಾತನಾಡಿ ‘ಹಿಂದೂ ವಿದ್ಯಾರ್ಥಿಗಳು ಮದರಸಾದಲ್ಲಿ ಕಲಿಯುತ್ತಿರುವುದು ಅಭಿಮಾನದ ಸಂಕೇತ. ಕಳೆದ ವರ್ಷದಿಂದ ಈ ವರ್ಷಕ್ಕೆ ಹಿಂದೂ ವಿದ್ಯಾರ್ಥಿಗಳಲ್ಲಿ ಮದರಸಾಗೆ ಬರುವ ವಿದ್ಯಾರ್ಥಿಗಳ ಸಂಖ್ಯೆಯು 4 ಪ್ರತಿಶತದಷ್ಟು ಹೆಚ್ಚಾಗಿದೆ ಎಂದರು.

Check Also

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಯೋಧ ಆರಿಫ್ ಖಾನ್ ಹುತಾತ್ಮ

001ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನ ಸೋಮವಾರ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಜಮ್ಮು ಕಾಶ್ಮೀರದ ರಾಜೋರಿಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. …

Leave a Reply

Your email address will not be published. Required fields are marked *