Tuesday , April 7 2020
Breaking News
Home / ಕ್ರೀಡೆ / ಅಂಪೈರ್ ಬಳಿ ನಮಗೆ ಆ ನಾಲ್ಕು ರನ್ ಬೇಡ ಅಂದಿದ್ದರಂತೆ ಬೆನ್ ಸ್ಟೋಕ್

ಅಂಪೈರ್ ಬಳಿ ನಮಗೆ ಆ ನಾಲ್ಕು ರನ್ ಬೇಡ ಅಂದಿದ್ದರಂತೆ ಬೆನ್ ಸ್ಟೋಕ್

ಸಂದೇಶ ಇ-ಮ್ಯಾಗಝಿನ್: ಕ್ರಿಕೆಟ್ ವಲ್ಡ್ ಕಪ್ 2019 ವಿವಾದದಲ್ಲಿ ಅಂತ್ಯ ಗೊಂಡ ಬಗ್ಗೆ ಕ್ರೀಡಾ ಅಭಿಮಾನಿಗಳಿಗೆ ಒಂದು ಕಡೆ ಬೇಸರವಿದ್ದರೂ, ಇದರಿಂದಾಗಿ ಉಭಯ ತಂಡಗಳ ಕೆಲವು ಆಟಗಾರರ ಅಸಾಧಾರಣ ಪ್ರಾಮಾಣಿಕತೆ ಮತ್ತು ಕ್ರೀಡಾಪಟುತ್ವ ಬೆಳಕಿಗೆ ಬಂದಿರುವುದರ ಬಗ್ಗೆ ಸಂತೋಷವೂ ಇದೆ. ಮೊನ್ನೆಯಿಂದ ತಮ್ಮ ತಂಡದ ಅರ್ಹವಲ್ಲದ ಸೋಲನ್ನು ಒಪ್ಪಿಕೊಂಡು ಯಾವುದೇ ಜಗಳವಿಲ್ಲದೆ ಮೈದಾನವನ್ನು ತೊರೆದಿದ್ದ ಮತ್ತು ಆ ಬಳಿಕ ಪತ್ರಿಕಾ ಗೋಷ್ಟಿಯಲ್ಲೂ ಎಲ್ಲೂ ಯಾರನ್ನೂ ದೂರದೆ ತಮ್ಮ ಅದ್ಭುತ ಕ್ರೀಡಾ ಸ್ಪೂರ್ತಿಯನ್ನು ಮೆರೆದ ನ್ಯೂಝಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರ ಬಗ್ಗೆ ಎಲ್ಲ ಕಡೆ ಪ್ರಶಮ್ಸೆ ಕೆಲಿ ಬರುತಿತ್ತು. ಆದರೆ ಇದೀಗ ಸ್ವಲ್ಪ ತಡವಾಗಿ ಇಂಗ್ಲೇಂಡ್ ಆಟಗಾರ ಬೆನ್ ಸ್ಟೋಕ್ ಅವರ ಪ್ರಾಮಾಣಿಕತೆಯೂ ಬಹಿರಂಗವಾಗಿದೆ.

ಮಾರ್ಟಿನ್ ಗಪ್ಟಿಲ್ ಅವರು ಥ್ರೋ ಮಾಡಿದ ಚೆಂಡು ಬೆನ್ ಸ್ಟೋಕ್ ಅವರ ಬ್ಯಾಟಿಗೆ ತಾಗಿ ಬೌಂಡರಿ ಗಡಿ ದಾಟಿತ್ತು. ಇದರಿಂದ ಅಂಪಾಯರ್ ಇಂಗ್ಲೇಂಡ್ ತಂಡಕ್ಕೆ 6 ರನ್ ನೀಡಿದ್ದರು. ಈ ರನ್ ನ್ಯೂಝಿಲ್ಯಾಂಡ್ ಸೋಲಿಗೆ ಕಾರಣವಾಯಿತು ಎನ್ನಬಹುದು. ಆದರೆ ಬೆನ್ ಸ್ಟೋಕ್ ಅಂಪಾಯರ್ ಬಳಿಕ ನಮಗೆ ಆ ರನ್ ಬೇಡ ನಮ್ಮಿಂದ ನಾಲ್ಕು ರನ್ ಕಳೆಯುವಂತೆ ಅಂಪಾಯರ್ ಬಳಿ ಕೇಳಿ ಕೊಂಡಿದ್ದರು ಎನ್ನಲಾಗಿದೆ.

ಚೆಂಡು ತನ್ನ ಬ್ಯಾಟಿಗೆ ಆಕಸ್ಮಿಕವಾಗಿ ತಾಗಿ ಬೌಂಡರಿ ಗಡಿ ದಾಟಿದ ಸಮಯದಲ್ಲಿ ಮೈದಾನದಲ್ಲಿ ಬ್ಯಾಟ್ ಎಸೆದು ಸ್ಟೋಕ್ಸ್ ಕ್ಷಮೆ ಕೇಳುವುದು ಕಂಡು ಬಂದಿತ್ತು. ಅದರ ಬಳಿಕ ಅಂಪಾಯರ್ ಬಳಿ ತೆರಳಿ ನಮಗೆ ಆ ರನ್ ಬೇಡ ಎಂದು ಅಂಪಾಯರ್ ಜೊತೆ ವಿನಂತಿಸಿದ್ದರು ಎನ್ನಲಾಗಿದೆ. ಆದರೆ ಅಂಪಾಯರ್ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಈ ವಿಷಯವನ್ನು ಇಂಗ್ಲೇಂದ್ ತಂಡದ ಆಟಗಾರ ಜಿಮ್ಮಿ ಆಂಡರ್ ಸನ್ ಬಹಿರಂಗಪಡಿಸಿದ್ದಾರೆ.

Check Also

ವಲ್ಡ್ ಕಪ್: ವಿಜಯೋತ್ಸವದಿಂದ ದೂರ ಉಳಿದ ಇಬ್ಬರು ಆಟಗಾರರು

ಸಂದೇಶ ಇ-ಮ್ಯಾಗಝಿನ್: ಲಂಡನ್‌ನ ಲಾರ್ಡ್ಸ್‌ನಲ್ಲಿ ಭಾನುವಾರ ನಡೆದ ಐಸಿಸಿ ವಿಶ್ವಕಪ್ 2019 ರ ಫೈನಲ್‌ನಲ್ಲಿ ಪಂದ್ಯ ಟೈ ಆದ ನಂತರ …

Leave a Reply

Your email address will not be published. Required fields are marked *