Monday , September 16 2019
Breaking News
Home / ರಿಯಲ್ ಹೀರೋಸ್ / ಪರ್ಸ್ ಕಳೆದು ಹೋಗಿ ಸಂಕಷ್ಟದಲ್ಲಿ ಪ್ರಯಾಣಿಕ; ಮಾನವೀಯತೆ ಮೆರೆದ ಬಸ್ ಕಂಡಕ್ಟರ್

ಪರ್ಸ್ ಕಳೆದು ಹೋಗಿ ಸಂಕಷ್ಟದಲ್ಲಿ ಪ್ರಯಾಣಿಕ; ಮಾನವೀಯತೆ ಮೆರೆದ ಬಸ್ ಕಂಡಕ್ಟರ್

ನಾನು 21/8/19 ರಂದ ಕಾರ್ಯ ನಿಮಿತ್ತ ಮಂಗಳೂರಿಗೆ ಪ್ರಯಾಣಿಸಿದ್ದೆ ವಾಪಸ್ ಪುತ್ತೂರಿಗೆ ಹಿಂತಿರುಗಲು ಮಹೇಶ್ ಬಸ್ ಹತ್ತಿದೆ ಕಂಡಕ್ಟರ್ ಟಿಕೇಟ್ ನೀಡಿದರು ನಾನು ಹಣ ನೀಡಲು ಜೇಬಿಗೆ ಕೈ ಹಾಕಿದಾಗ ನನ್ನ ಜೇಬಲ್ಲಿ ಪರ್ಸ್ ಇರಲಿಲ್ಲ ಪರ್ಸ್ ಎಲ್ಲೋ ಕಳೆದು ಹೋಗಿತ್ತು.

ನನಗೆ ಪರ್ಸ್ ಕಳೆದು ಹೋದ ದುಖ ಒಂದು ಕಡೆಯಾದರೆ ಪ್ರಯಾಣಿಕರ ಎದುರಲ್ಲಿ ಕಂಡಕ್ಟರ್ ನನ್ನನ್ನು ಯಾವ ರೀತಿ ಹೀಯಾಳಿಸಬಹುದು ಎನ್ನುವ ಆತಂಕ ಇನ್ನೂಂದು ಕಡೆ ಇವೆಲ್ಲವನ್ನೂ ಹತ್ತಿರದಿಂದ ಗಮನಿಸುತ್ತಿದ್ದ ಕಂಡಕ್ಟರ್ ಹತ್ತಿರ ಎಲ್ಲವನ್ನೂ ವಿವರಿಸಿದೆ ಆಗ ಕಂಡಕ್ಟರ್ ಸಾರ್ ನನ್ನ ಬೆನ್ನು ತಟ್ಟಿ ಹೇಳಿದ ಒಂದು ಮಾತು ಈಗಲೂ ನನ್ನ ಕಣ್ಣಂಚಿನಲ್ಲಿ ನೀರು ಜಿಣುಗುಟ್ಟುತ್ತಿದೆ ನಿನ್ನ ಟಿಕೇಟ್ ಹಣ ನಾನು ಹಾಕುತ್ತೇನೆ (ಮೂಜಿ ದಿನತ ಬದ್ ಕ್ ಡ್ ದುಡ್ಡುಗು ಬೆಲೆ ಕೊರಿಯೆರೆ ಬಲ್ಲಿ ಪ್ರೀತಿಗ್ ಮಾನವೀಯತೆಗ್ ಬೆಲೆ ಕೊರೊಡು)
ಮೂರು ದಿನದ ಬದುಕಿನಲ್ಲಿ ದುಡ್ಡಿಗೆ ಬೆಲೆ ಕೊಡಬಾರದು ಪ್ರೀತಿಗೆ ಮಾನವೀಯತೆಗೆ ಬೆಲೆಕೊಡಬೇಕು ಎಂದು ಅದೂ ಅಲ್ಲದೆ ನಾನೋರ್ವ ಮುಸ್ಲೀಂಮನಾಗಿದ್ದೆ ಅವರು ಹಿಂದೂವಾಗಿದ್ದರು ಜಾತಿ ಜಾತಿ ಎಂದು ಬಡಿದಾಡಿಕೊಳ್ಳುವ ಈ ಜಿಲ್ಲೆಯಲ್ಲಿ ಮಾನವೀಯತೆಯು ಜೀವಂತವಾಗಿದೆ ಎಂಬುದಕ್ಕೆ ಇದು ಸಾಕ್ಷಿ.

* ಸಮೀರ್ ಪುತ್ತೂರು*

Check Also

ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

000ಸಂದೇಶ ಇ-ಮ್ಯಾಗಝಿನ್: ನನ್ನನ್ನು ಅಪಾರವಾಗಿ ಕಾಡಿದ ಈ ವ್ಯಕ್ತಿಯ ಬಗ್ಗೆ ಬರೆಯಬೇಕು ಅಂತ ಬಯಸಿದೆ. ಇವರ ಹೆಸರು ಬಾಷಾ, 82 …

Leave a Reply

Your email address will not be published. Required fields are marked *