Tuesday , April 7 2020
Breaking News
Home / ಭಾರತೀಯ ಮುಸ್ಲಿಮರು / CAB ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಆಗುತ್ತಲೇ ಇಸ್ಲಾಮ್ ಧರ್ಮ ಸ್ವೀಕರಿಸಿದ ಸಾಮಾಜಿಕ ಕಾರ್ಯಕರ್ತ

CAB ಮಸೂದೆ ಸಂಸತ್ತಿನಲ್ಲಿ ಅಂಗೀಕಾರ ಆಗುತ್ತಲೇ ಇಸ್ಲಾಮ್ ಧರ್ಮ ಸ್ವೀಕರಿಸಿದ ಸಾಮಾಜಿಕ ಕಾರ್ಯಕರ್ತ

ಸಂದೇಶ ಇ-ಮ್ಯಾಗಝಿನ್: ದೇಶಾದ್ಯಂತ ತೀವ್ರ ವಿರೋಧದ ನಡುವೆಯೂ ಬಿಜೆಪಿ ಸರಕಾರ ಪೌರತ್ವ ಮಸೂದೆ ಲೋಕಸಭೆ ಹಾಗೂ ರಾಜ್ಯ ಸಭೆಯ ಉಭಯ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಇದರ ಮಧ್ಯೆಯೇ ಈಶಾನ್ಯ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಹಾಗೂ ದೇಶಾದ್ಯಂತ ಚಿಂತಕರು ವಿಚಾರವಾದಿಗಳು ಮುಸ್ಲಿಮ್ ಸಂಘಟನೆಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸಿದೆ.

ಆದರೆ ಕೇರಳದ ಸಾಮಾಜಿಕ ಕಾರ್ಯಕರ್ತ ವಿಕಾಸ್ ಎಜಿ ಎಂಬವರು ಸಂಸತ್ತಿನಲ್ಲಿ CAB ಮಸೂದೆ ಅಂಗೀಕಾರವಾದ ಆದ ಕೆಲವೇ ಕ್ಷಣಗಳಲ್ಲಿ ವಿಕಾಸ್ ಎಜಿ ಯವರು ತಮ್ಮ ಫೇಸ್ಬುಕ್ ಮುಖಾಂತರ ಇವತ್ತಿನಿಂದ ನಾನು ಮುಸ್ಲಿಮ್ ಎಂದು ಸಾರಿದ್ದಾರೆ. ಅದರೊಂದಿಗೆ ‘ನಾರೇ ತಖ್‌ಬೀರ್ ಅಲ್ಲಾಹು ಅಕ್ಬರ್’ ಎಂಬ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಆದಾಗ್ಯೂ ನಾನು ಇಸ್ಲಾಮ್ ಧರ್ಮ ಸ್ವೀಕರಿಸಿದ್ದು ಒಂದು ರಾಜಕೀಯ ನಿರ್ಧಾರವಲ್ಲ, ನಾನು ಕೆಲವು ಸಮಯದ ಹಿಂದೆಯೇ ಇಸ್ಲಾಮಿನ ಬಗ್ಗೆ ಕಲಿಯಲು ಪ್ರಾರಂಭಿಸಿದ್ದೆ. ಹಲವಾರು ಇಸ್ಲಾಮಿಕ್ ವಿದ್ವಾಂಸರನ್ನೂ ನಾನೂ ಈ ಮಧ್ಯೆ ಭೇಟಿಯಾಗಿದ್ದೆ. ಇದು ನಾನು ಮನಸಾರೆ ಕೈ ಗೊಂಡ ತೀರ್ಮಾನವಾಗಿದೆ ಎಂದು ವಿಕಾಸ್ ತಿಳಿಸಿದ್ದಾರೆ.

“ಇನ್ನು ಮುಂದೆ ಇಸ್ಲಾಮ್ ನನ್ನ ಧರ್ಮವಾಗಿದ್ದು, ಇದು ಪರಮ ದಯಾಮಯನೂ ಕರುಣಾನಿಧಿಯೂ ಆದ ಸೃಷ್ಟಿಕರ್ತನ ಧರ್ಮವಾಗಿದೆ. ಇದನ್ನು ನಾನು ಇವತ್ತೇ ಹೇಳಬೇಕು ಎಂದು ಮೊದಲೇ ತೀರ್ಮಾನಿಸಿದ್ದೆ. ಆದರೆ ಅಲ್ಲಾಹನ ಇಚ್ಛೆಯಂತೆ ನಾನು ಹೇಳುವ ಅದೇ ಹೊತ್ತಿಗೆ, ಸಂಸತ್ತಿನಲ್ಲಿ CAB ಮಸೂದೆ ಅಂಗೀಕಾರ ಪಡೆದಿದೆ ಅಲ್ಲಾಹು ಅಕ್ಬರ್” ಎಂದು ವಿಕಾಸ್ ಫೇಸ್ಬುಕ್ ನಲ್ಲಿ ಹೇಳಿದ್ದಾರೆ.

Check Also

ಮಲಪ್ಪುರಂ: ನಿಖಾಬ್‌ಗೆ ನಿಷೇಧ ಹೇರಿದ ಮುಸ್ಲಿಮ್ ಶಿಕ್ಷಣ ಸಂಸ್ಥೆ

ಸಂದೇಶ ಇ-ಮ್ಯಾಗಝಿನ್: ದೇಶದ ಸುರಕ್ಷತೆಯ ದೃಷ್ಟಿಯಿಂದ ಬುರ್ಖ ನಿಷೇಧ ಮಾಡಬೇಕು ಎಂದು ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಶಿವ …

Leave a Reply

Your email address will not be published. Required fields are marked *