Friday , April 3 2020
Breaking News
Kaaba in Mecca Saudi Arabia
Home / ಗಲ್ಫ್ ವಿಶೇಷ / ಮೇ 29 ರ ಮಧ್ಯಾಹ್ನ 2.18ರಂದು ಕಾಬಾ ಪರಿಸರದಲ್ಲಿ ಯಾರಿಗೂ ನೆರಳಿರಲಿಲ್ಲ-ಕಾರಣವೇನು ನೋಡಿ

ಮೇ 29 ರ ಮಧ್ಯಾಹ್ನ 2.18ರಂದು ಕಾಬಾ ಪರಿಸರದಲ್ಲಿ ಯಾರಿಗೂ ನೆರಳಿರಲಿಲ್ಲ-ಕಾರಣವೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಮೇ 29 ರಂದು ಬುಧವಾರದಿನ ಮಧ್ಯಾಹ್ಮ 2.18 ನಿಮಿಷಕ್ಕೆ ಮಕ್ಕಾದ ಕಾಬಾ ಪರಿಸರದಲ್ಲಿದ್ದ ಯಾರಿಗೂ ನೆರಳಿರಲಿಲ್ಲ. ಇದಕ್ಕೆ ಕಾರಣವೇನೆಂದರೆ ಈ ಸಮಯದಲ್ಲಿ ಸೂರ್ಯ ಪವಿತ್ರ ಕಾಬಾ ಭವನದ ಮಧ್ಯದಲ್ಲಿ ಬಂದಿತ್ತು ಎನ್ನುವುದಾಗಿದೆ.

ಮಕ್ಕಾದ ಕಾಬಾ ಭವನವು ಭೂಮಿಯ ಮಧ್ಯ ಭಾಗದಲ್ಲಿದ್ದು, ಭೂಮಧ್ಯ ರೇಖೆ ಇದೇ ಜಾಗದಲ್ಲಿ ಸಂಧಿಸುತ್ತದೆ. ಆ ಕಾರಣದಿಂದಾಗಿ ಈ ಜಾಗವನ್ನು ಭೂಮಿಯ ಕೇಂದ್ರ ಬಿಂದು ಎಂದು ಕರೆಯುತ್ತಾರೆ. ಈ ಕಾರಣದಿಂದಾಗಿ ಸೂರ್ಯನ ಸುತ್ತ ಭೂಮಿ ತಿರುಗುತ್ತಾ ಈ ಸ್ಥಳದ ನೇರದಲ್ಲಿ ಸೂರ್ಯನನ್ನು ಹಾದು ಹೋಗುವಾಗ ಕಾಬಾ ಪರಿಸರದಲ್ಲಿ ಈ ಝೀರೋ ನೆರಳಿನ ಸ್ಥಿತಿ ನಿರ್ಮಣವಾಗುತ್ತದೆ.

ಈ ಸ್ಥಿತಿ ವರ್ಷದಲ್ಲಿ ಎರಡು ಬಾರಿ ಉಂಟಾಗುತ್ತದೆ ಎಂದು ಮಕ್ಕಾದ ಖಗೋಳ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಮಯ ಇನ್ನೊಂದು ವಿಶೇಷತೆ ಏನೆಂದರೆ ಈ ಸಮಯದಲ್ಲಿ ಜಗತ್ತಿನಾದ್ಯಂತ ಮುಸ್ಲಿಮರು ಅಭಿಮುಖವಾಗಿ ನಮಾಝ್ ನಿರ್ವಹಿಸುವ ಕಾಬಾದ ಧಿಕ್ಕನ್ನು ಗುರುತಿಸುವ ಸಮಯವಾಗಿದೆ ಇದು.

ಈ ಸಮಯದಲ್ಲಿ ವಿಶ್ವದ ಮೂಲೆ ಮೂಲೆಯಲ್ಲಿ ಕಾಬಾದ ಸರಿಯಾದ ದಿಕ್ಕನ್ನು ಯಾವ ರೀತಿ ಗುರುತಿಸಲು ಈ ಕ್ರಮವನ್ನು ಅನುಸರಿಸಲಾಗುತ್ತದೆ, ಮೊದಲಿಗೆ ಒಂದು ಕೋಲನ್ನು ಭೂಮಿಯಲ್ಲಿ ಹೂಳುತ್ತಾರೆ. ಬಳಿಕ ಅದರ ನೆರಳಿನ ತುದಿಯನ್ನು ಮಾರ್ಕ್ ಮಾಡುತ್ತಾರೆ. ಕೋಲಿನ ತಳಭಾಗದಿಂದ ಆ ನೆರಳಿನ ತುದಿಯ ಮಾರ್ಕ್ ಮಾಡಿರುವ ಬಿಂದುವಿಗೆ ಗೆರೆ ಎಳೆಯುತ್ತಾರೆ. ಈ ರೇಖೆಯು ಪೂರ್ವದಿಂದ ಪಶ್ಚಿಮಕ್ಕೆ ದಿಕ್ಕನ್ನು ಸೂಚಿಸುತ್ತದೆ. ಈ ನೆರಳಿನ ರೇಖೆಗೆ ವಿರುದ್ಧವಾಗಿ 90 ಡಿಗ್ರಿಯಲ್ಲಿ ಎಳೆಯುವ ರೇಖೆಯು ಕಾಬಾದ ದಿಕ್ಕನ್ನು ಸೂಚಿಸುತ್ತದೆ.

ಇದೀಗ ಅತ್ಯಾಧುನಿಕ ಧಿಕ್ಸೂಚಿ ಮುಂತಾದ ಸಾಧನಗಳ ಮೂಲಕ ಕಾಬಾದ ಧಿಕ್ಕನ್ನು ನಿರ್ಧರಿಸಬಹುದಾಗಿದೆಯಾದರೂ ಹಿಂದಿನ ಕಾಲದಿಂದಲೂ ನಡೆದುಕೊಂಡ ಪದ್ಧತಿ ಇದಾಗಿದೆ. ಮುಸ್ಲಿಮರು ನಮಾಝ್ ನಿರ್ವಹಿಸಲು ನಿರ್ಮಿಸುವ ಮಸೀದಿಕೂಡ ಇದೇ ಧಿಕ್ಕಿಗೆ ಅಭಿಮುಖವಾಗಿ ಕಟ್ಟುತ್ತಾರೆ. ಮಕ್ಕಾದ ಪವಿತ್ರ ಕಾಬಾದಲ್ಲಿ ಮುಂದಿನ ಜುಲೈ 16 ರಂದು ಮತ್ತೆ ಝೀರೋ ನೆರಳು ಸ್ಥಿತಿ ನಿರ್ಮಾಣವಾಗಲಿದೆ.

Check Also

ಆಕೆ ತನ್ನ ಮಕ್ಕಳ ಹೊಟ್ಟೆ ತುಂಬಿಸಲು ಮದೀನಾದ ಬೀದಿಯಲ್ಲಿ ಟೀ ಮಾರುತ್ತಾಳೆ

ಸಂದೇಶ ಇ-ಮ್ಯಾಗಝಿನ್: ಇದು ಅಸಹಾಯಕ ತಾಯಿಯೊಬ್ಬಳ ನೈಜ ಜೀವನಗಾಥೆ. ಪತಿ ಮರಣ ಹೊಂದಿದ ನಂತರ ತನ್ನ ಸಣ್ಣವರಾದ ಆರು ಮಕ್ಕಳನ್ನು …

Leave a Reply

Your email address will not be published. Required fields are marked *