Saturday , April 4 2020
Breaking News
Home / ವೀಡಿಯೋ / ರಮದಾನ್‌ನಲ್ಲಿ ಜನರ ಹೃದಯಗೆದ್ದ ಮಕ್ಕಾದ ಈ ಪೊಲೀಸ್ ಅಧಿಕಾರಿಯ ಮಹತ್ಕಾರ್ಯ ನೋಡಿ

ರಮದಾನ್‌ನಲ್ಲಿ ಜನರ ಹೃದಯಗೆದ್ದ ಮಕ್ಕಾದ ಈ ಪೊಲೀಸ್ ಅಧಿಕಾರಿಯ ಮಹತ್ಕಾರ್ಯ ನೋಡಿ

ಸಂದೇಶ ಇ-ಮ್ಯಾಗಝಿನ್: ಮೆಕ್ಕಾದ ಗ್ರ್ಯಾಂಡ್ ಮಸೀದಿಗೆ ರಮದಾನ್‌ನಲ್ಲಿ ಉಮ್ರಾ ತೀರ್ಥಯಾತ್ರೆಗೆ ಹೋಗುವ ಮುಸ್ಲಿಮರ ಸಂಖ್ಯೆ ಸಿಕ್ಕಾ ಪಟ್ಟೆ ಹೆಚ್ಚಾಗಿದೆ. ಆದರೆ ಈ ಜನದಟ್ಟನೆಯ ಮಧ್ಯೆ ಕೆಲವರು ಅವರ ಧಾರ್ಮಿಕ ಕರ್ತವ್ಯಗಳನ್ನು ಪೂರ್ಣಗೊಳಿಸಲು ಇತರರಿಗಿಂತ ಹೆಚ್ಚು ಕಷ್ಟ ಪಡುತ್ತಿದ್ದಾರೆ. ಮುಖ್ಯವಾಗಿ ದೈಹಿಕವಾಗಿ ತೊಂದರೆಗೊಳಗಾದ ಜನರು ಅಂದರೆ ಆರೋಗ್ಯ ಸರಿ ಇಲ್ಲದವರು, ವೃದ್ಧರು, ಅಂಗವಿಕಲರು ಮುಂತಾದವರು. ಪ್ರತೀ ವರ್ಷವೂ ಈ ಸಮಯದಲ್ಲಿ ಮತ್ತು ಹಜ್ ಸಮಯದಲ್ಲಿ ಸೌದಿ ಅರೇಬಿಯಾ ಸರಕಾರವು ಈ ಹರಮ್ ಪರಿಸರದಲ್ಲಿ ಇಂತಹ ಭೌತಿಕ ಅಡೆತಡೆಗೆ ಒಳಗಾದ ಜನರಿಗೆ ಸಹಾಯ ಮಾಡಲು ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಈ ಬಾರಿಯೂ ಅನೇಕ ಮಂದಿ ಹೆಚ್ಚುವರಿ ಪೊಲೀಸರು ರಮದಾನ್ ಪ್ರಯುಕ್ತ ಕಾರ್ಯನಿರತರಾಗಿದ್ದಾರೆ. ಈ ಪೊಳೀಸರ ಪೈಕಿ ಒಬ್ಬರು ಇದೀಗ ಜಗತ್ತಿನ ಹೃದಯ ಗೆದ್ದಿದ್ದಾರೆ. ಈ ಪೊಲೀಸ್ ಒಬ್ಬ ವೃದ್ಧ ಅಂಗವಿಕಲ ವ್ಯಕ್ತಿಯನ್ನು ಎತ್ತಿಕೊಂಡು ಮೆಟ್ಟಿಲು ಹತ್ತುತ್ತಿದ್ದಾರೆ. 7 ಸೆಕೆಂಡುಗಳ ವೀಡಿಯೋದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಜನರು ಭಾವನಾತ್ಮಕ ಕಮೆಂಟುಗಳ ಹೊಳೆಯನ್ನೇ ಹರಿಸಿ ಪೊಲೀಸ್ ಸಿಬ್ಬಂದಿಯನ್ನು ಹರಸಿದ್ದಾರೆ.

Check Also

ತನ್ನ ಉಳಿತಾಯದ ಹಣದಲ್ಲಿ ಹಜ್‌ಗೆ ಹೊರಟ ತಂದೆಗೆ ಮಕ್ಕಳು ಮಾಡಿದರು ಈ ಸ್ಥಿತಿ

ಸಂದೇಶ ಇ-ಮ್ಯಾಗಝಿನ್: ಪಾಕಿಸ್ತಾನದ ಸಿಂಧ್‌ನಲ್ಲಿ ತಂದೆಯು ಹಣವನ್ನು ಪುತ್ರರಿಗೆ ಕೊಡುವ ಬದಲು ಹಜ್‌ಗಾಗಿ ಬಳಸಿದ್ದಕ್ಕಾಗಿ ವೃದ್ಧ ತಂದೆಯನ್ನು ಪುತ್ರರು ಥಳಿಸಿದ …

Leave a Reply

Your email address will not be published. Required fields are marked *