Friday , April 3 2020
Breaking News
image Courtesy: Twitter
Home / ವೀಡಿಯೋ / ಸಣ್ಣ ಮಗುವನ್ನು ಪೀಡಿಸಿ ‘ಜೈ ಶ್ರೀ ರಾಮ್’ ಹೇಳಲು ಒತ್ತಾಯಿಸುವ ವೀಡಿಯೋ ವೈರಲ್

ಸಣ್ಣ ಮಗುವನ್ನು ಪೀಡಿಸಿ ‘ಜೈ ಶ್ರೀ ರಾಮ್’ ಹೇಳಲು ಒತ್ತಾಯಿಸುವ ವೀಡಿಯೋ ವೈರಲ್

ಸಂದೇಶ ಇ-ಮ್ಯಾಗಝಿನ್: ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಮಾತು ಬಾರದ ಸಣ್ಣ ಮಗುವನ್ನು ಪೀಡಿಸಿ ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸುವ ವೀಡಿಯೋವೊಂದು ವೈರಲ್ ಆಗಿದೆ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ1.26 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವೀಡಿಯೋದಲ್ಲಿ ಮಾತು ಬಾರದ ಸಣ್ಣ ಹಸುಳೆಯ ಕೈಯನ್ನು ಕುರ್ಚಿಗೆ ಕಟ್ಟಿ ಹಾಕಲಾಗಿದ್ದು, ಜೈ ಶ್ರೀ ರಾಮ್ ಹೇಳುವಂತೆ ಒತ್ತಾಯಿಸಲಗುತ್ತಿದೆ. ಆದರೆ ಮಗು ಅಳುತ್ತಾ ಇರುವುದು ಕಂಡು ಬಂದಿದೆ. ವಿಜೈತ ಸಿಂಗ್ ಎಂಬ ಹೆಸರಿನ ನೆಟಿಜನ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ‘ಮಕ್ಕಳನ್ನು ಸಹ ಬಿಡುವುದಿಲ್ಲ’ ಎಂದು ಬರೆದಿದ್ದಾರೆ. ವೀಡಿಯೋ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆ ದಾರರು ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಕೃತ್ಯ ಯಾರೇ ಮಾಡಿದ್ದರು. ಅಂತಹ ವ್ಯಕ್ತಿಯನ್ನು ಬಂಧಿಸಿ ಕಾನೂನಿನ ಮುಂದೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಇದು ಯಾವ ಸ್ಥಳದಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿಲ್ಲ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹಲವಾರು ವೀಡಿಯೋಗಳು ವೈರಲ್ ಆಗುತ್ತಿದ್ದು, ಇತ್ತೀಚೆಗೆ ಜಾರ್ಖಂಡ್‌ನಲ್ಲಿ ತಬ್ರೆಜ್ ಅನ್ಸಾರಿ ಎಂಬ ಯುವಕನ್ನು ದುಷ್ಟರ ಗುಂಪೊಂದು ಮಾಬ್ ಲಿಂಚಿಂಗ್ ಮಾಡಿ ಹತ್ಯೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತಬ್ರೇಜ್ ಅನ್ಸಾರಿಯನ್ನು ಥಳಿಸುವಾಗ ‘ಜೈ ಶ್ರೀ ರಾಮ್’ ಹೇಳಲು ಒತ್ತಾಯಿಸಲಾಗಿತ್ತು.

Check Also

ಕೋರ್ಟ್ ವಿಚರಣೆಯನ್ನು ತಪ್ಪಿಸಿ ಈದ್ ಆಚರಿಸಿದ ಸಾಧ್ವಿ ಪ್ರಜ್ಞಾ

ಸಂದೇಶ ಇ-ಮ್ಯಾಗಝಿನ್: ಭೋಪಾಲ್ ಸಂಸದೆ ಹಾಗೂ ಮಾಲೇಗಾಂವ್ ಸ್ಪೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತೊಮ್ಮೆ ವಿವಾದದ …

Leave a Reply

Your email address will not be published. Required fields are marked *