Friday , May 24 2019
Breaking News
Home / ಕ್ರೀಡೆ / ಕ್ರಿಕೆಟ್: ಈ ಎರಡು ದೇಶಗಳಿಗೆ ದೊರೆಯಿತು ಐಸಿಸಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಮಾನ್ಯತೆ

ಕ್ರಿಕೆಟ್: ಈ ಎರಡು ದೇಶಗಳಿಗೆ ದೊರೆಯಿತು ಐಸಿಸಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಮಾನ್ಯತೆ

ಸಂದೇಶ ಇ-ಮ್ಯಾಗಝಿನ್: ಐಸಿಸಿ ಪುರುಷರ ಕ್ರಿಕೆಟ್ ವಿಶ್ವ ಕಪ್ ಲೀಗ್ 2 ನಲ್ಲಿ ಹಾಂಗಾಂಗ್-ಅಮೇರಿಕಾ(USA) ಮಧ್ಯೆ ನಡೆದ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವನ್ನು 84 ರನ್ನುಗಳಿಂದ ಸೋಲಿಸಿರುವ ಅಮೇರಿಕಾ ತಂಡವು ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ತಂಡದ ಮಾನ್ಯತೆ ಪಡೆದಿದೆ. ಅಮೇರಿಕಾವಲ್ಲದೆ ಒಮಾನ್ ತಂಡಕ್ಕೂ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ತಂಡದ ಮಾನ್ಯತೆ ದೊರೆತಿದ್ದು, ಒಮಾನ್ ತಂಡವೂ ಕೂಡ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಮುನ್ನಡೆಯುತ್ತಿದೆ. ಮಂಗಳವಾರ ಐಸಿಸಿ ಈ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿದ್ದು,ಕ್ರಿಕೆಟ್ ಶಿಶುವಾಗಿರುವ ಈ ಎರಡೂ ದೇಶಗಳಿಗೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡುವ ಅರ್ಹತೆ ನೀಡಲಾಗಿದೆ ಎಂದು ಘೋಷಿಸಿದೆ.

ಒಮಾನ್ ಹಾಗೂ ಅಮೇರಿಕಾದಲ್ಲಿ ಜನರಿಗೆ ಕ್ರಿಕೆಟ್ ಆಟದ ಬಗ್ಗೆ ಅಷ್ಟಾಗಿ ಒಲವು ಇಲ್ಲದ ಕಾರಣ ಇನ್ನು ಮುಂದೆಯಾದರೂ ಈ ದೇಶದಲ್ಲಿ ಕ್ರಿಕೆಟ್ ಬೆಳೆಯುವ ಸಾಧಯ್ತೆ ಇದೆ ಎಂದು ಅಂದಾಜಿಸಲಾಗಿದೆ. ಇದೀಗ ನಡೆಯುತ್ತಿರುವ ಪಂದ್ಯವು ಲೀಗ್ 2 ಪಂದ್ಯವಾಗಿದ್ದು, ಮೇ 30 ಅಧಿಕೃತ ವಿಶ್ವಕಪ್ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ.

Check Also

ಈ ಕಾರಣದಿಂದಾಗಿ ಧೋನಿ ಇಮ್ರಾನ್ ತಾಹಿರ್ ವಿಕೆಟ್ ಪಡೆದ ತಕ್ಷಣ ಆಲಂಗಿಸುವುದಿಲ್ಲವಂತೆ

004ಸಂದೇಶ ಇ-ಮ್ಯಾಗಝಿನ್: ಇಂಡಿಯನ್ ಪ್ರೀಮಿಯರ್ ಲೀಗ್‍ನ 12 ನೇ ಆವೃತ್ತಿಯ ಬುಧವಾರ ನಡೆದ ಚೆನ್ನೈ ಹಾಗೂ ದೆಹಲಿ ನಡುವಿನ ಪಂದ್ಯದಲ್ಲಿ …

Leave a Reply

Your email address will not be published. Required fields are marked *