Monday , August 26 2019
Breaking News
Home / ಗಲ್ಫ್ ಸುದ್ದಿ / ಒಮಾನ್: ರಮದಾನ್‌ನಲ್ಲಿ ಸಾರ್ವಜನಿಕವಾಗಿ ತಿಂದರೆ ಇಷ್ಟು ತಿಂಗಳು ಜೈಲು ಗ್ಯಾರಂಟಿ

ಒಮಾನ್: ರಮದಾನ್‌ನಲ್ಲಿ ಸಾರ್ವಜನಿಕವಾಗಿ ತಿಂದರೆ ಇಷ್ಟು ತಿಂಗಳು ಜೈಲು ಗ್ಯಾರಂಟಿ

ಸಂದೇಶ ಇ-ಮ್ಯಾಗಝಿನ್: ಸುಲ್ತಾನೇಟ್ ಆಫ್ ಒಮಾನ್‍ನಲ್ಲಿ ಮೇ 7 ರಿಂದ ಪವಿತ್ರ ರಮದಾನ್ ತಿಂಗಳು ಪ್ರಾರಂಭವಾಗಿದ್ದು, ಈ ರಮದಾನ್ ಉಪವಾಸ ವೃತದ ಸಮಯದಲ್ಲಿ ಯಾರಾದರೂ ಸಾರ್ವಜನಿಕವಾಗಿ ತಿನ್ನುವುದು ಕುಡಿಯುವುದು ಅಥವಾ ಉಪವಾಸ ತೊರೆಯುವುದು ಕಂಡು ಬಂದಲ್ಲಿ ಅಂತವರ ವಿರುದ್ಧ ಒಮಾನ್ ಪೀನಲ್ ಕೋಡ್ ಆರ್ಟಿಕಲ್ 49 ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಾಗಲಿದೆ. ಮತ್ತು ಈ ಅಪರಾಧಕ್ಕೆ ತಿಂಗಳು ಜೈಲಾಗಲಿದೆ ಎಂದು ಸರಕಾರದ ಪ್ರಕಟನೆಯಲ್ಲಿ ತಿಳಿಸಲಾಗಿದೆ. 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ಕಾನೂನು ಅನ್ವಯಿಸುವುದಿಲ್ಲ. ಮತ್ತು ಪ್ರವಾಸಿಗಳು ಹಾಗೂ ಮುಸ್ಲಿಮೇತರರು ರೆಸ್ಟೋರೆಂಟ್ ಅಥವಾ ಮುಚ್ಚು ಮರೆ ಇರುವ ಸ್ಥಳದಲ್ಲಿ ತಿನ್ನಬಹುದು ಎಂದು ತಿಳಿಸಲಾಗಿದೆ. ಆದರೆ ರಮದಾನ್ ಸಮಯದಲ್ಲಿ ಹಗಲು ಹೊತ್ತಲ್ಲಿ ರೆಸ್ಟೋರೆಂಟ್ ತೆರೆದಿರುವುದು ಅಪರೂಪ ಎಂದು ಟೈಮ್ಸ ಆಫ್ ಒಮಾನ್ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಹಗಲು ಹೊತ್ತಲ್ಲಿ ವೃತ ಆಚರಣೆಯಲ್ಲಿರುವಾಗ ಜನರು ತಮ್ಮ ಕಾರಿನ ಒಳಭಾಗದಲ್ಲೂ ಕುಳಿತು ತಿನ್ನುವ ಹಾಗಿಲ್ಲ. ಹಾಗೇನಾದ್ರೂ ಸಿಕ್ಕಿಬಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Check Also

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

103ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ …

Leave a Reply

Your email address will not be published. Required fields are marked *