Thursday , June 20 2019
Breaking News
Home / ರಾಷ್ಟ್ರೀಯ / ಮುಸ್ಲಿಮ್ ಯುವಕನ ಸ್ನೇಹ ಮಾಡಿದ್ದಕ್ಕೆ ಹಿಂದೂ ಯುವತಿಯನ್ನು ಅಪಹರಿಸಿ ಥಳಿಸಿದ ಪೊಲೀಸರು ಸೇವೆಯಿಂದ ಅಮಾನತು

ಮುಸ್ಲಿಮ್ ಯುವಕನ ಸ್ನೇಹ ಮಾಡಿದ್ದಕ್ಕೆ ಹಿಂದೂ ಯುವತಿಯನ್ನು ಅಪಹರಿಸಿ ಥಳಿಸಿದ ಪೊಲೀಸರು ಸೇವೆಯಿಂದ ಅಮಾನತು

ಮೀರತ್: ಮುಸ್ಲಿಮ್ ವ್ಯಕ್ತಿಯ ಸ್ನೇಹ ಮಾಡಿದ ಕಾರಣಕ್ಕಾಗಿ ಹಿಂದೂ ಮಹಿಳೆಯೊಬ್ಬರನ್ನು ಕಾರಲ್ಲಿ ಕೂಡಿ ಹಾಕಿ ಥಳಿಸಿದ ಮೂವರು ಪೊಲೀಸರನ್ನು ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಅಮಾನತು ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆದ ನಂತರ ಇಲಾಖೆಯು ಒಬ್ಬಳು ಮಹಿಳಾ ಕಾಂಸ್ಟೇಬಲ್ ಸೇರಿದಂತೆ ಮೂವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿದೆ.

ವೀಡಿಯೋದಲ್ಲಿ ದಾಖಲಾದಂತೆ ಹಿಂದೂ ಮಹಿಳೆಗೆ ನೀನು ಯಾಕೆ ಮುಸ್ಲಿಮ್ ವ್ಯಕ್ತಿಯ ಸ್ನೇಹ ಮಾಡುತ್ತೀಯ ಎಂದು ಅವಾಚ್ಯ ಶಬ್ದದಿಂದ ನಿಂದಿಸುತ್ತಾ, ದೈಹಿಕ ಹಲ್ಲೆ ನಡೆಸಿದ ಮಹಿಳಾ ಪೊಲೀಸ್ ಒಬ್ಬಳು ಮತ್ತು ಆಕೆಗೆ ಸಾಥ್ ನೀಡಿದ ಇಬ್ಬರು ಪುರುಷ ಪೊಲೀಸರು ಮಹಿಲೇಯನ್ನು ನಿಂದಿಸುತ್ತಿರುವುದು ಕಂಡುಬಂದಿದೆ.

ಈ ವೈರಲ್ ವೀಡಿಯೋ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಪಡೆದು ಕೊಂಡಿದ್ದು, “ಉತ್ತರ ಪ್ರದೇಶದ ಪೊಲೀಸ್ ಇಲಾಖೆ ಹಿಂದೂ ಯುವ ವಾಹಿನಿಯ ಮುಂದುವರಿದ ಭಾಗ” ಎಂದು ಟ್ವಿಟ್ಟರ್ ಬಳಕೆದಾರರೊಬ್ಬರು ಹೇಳಿದ್ದಾರೆ.

“ನಾವು ರಾಜಕೀಯ ಕೋಮುವಾದದ ಬಗ್ಗೆ ಮಾತನಾಡುತ್ತೇವೆ ಆದರೆ ಭಾರತದಲ್ಲಿ ರಾಜಕೀಯಕ್ಕಿಂತಲೂ ಪೊಲೀಸ್ ಇಲಾಖೆ ಹೆಚ್ಚು ಕೋಮುವಾದಿಯಾಗಿದೆ” ಎಂದು ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಜನರು ಒತ್ತಾಯಿಸಿದ್ದಾರೆ.

Check Also

ಉಗ್ರರ ಗುಂಡಿಗೆ ಎದೆಯೊಡ್ಡಿದ್ದ ಜಮ್ಮು ಪೊಲೀಸ್ ಅಧಿಕಾರಿ ಅರ್ಶದ್ ಅಹ್ಮದ್ ಹುತಾತ್ಮ

101ಸಂದೇಶ ಇ-ಮ್ಯಾಗಝಿನ್: ಜೂನ್ 12 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *