Monday , September 16 2019
Breaking News
Home / ಅಂತಾರಾಷ್ಟ್ರೀಯ / ಕ್ರೈಸ್ಟ್ ಚರ್ಚ್ ಮಸೀದಿಗೆ ಭೇಟಿ ನೀಡಿದ ವಿಶ್ವಸಂಸ್ಥೆಯ ಮಹಾಸಚಿವರು; ಇಸ್ಲಾಮೋಫೋಬಿಯಾ ಬಗ್ಗೆ ಮಹತ್ವದ ಹೇಳಿಕೆ

ಕ್ರೈಸ್ಟ್ ಚರ್ಚ್ ಮಸೀದಿಗೆ ಭೇಟಿ ನೀಡಿದ ವಿಶ್ವಸಂಸ್ಥೆಯ ಮಹಾಸಚಿವರು; ಇಸ್ಲಾಮೋಫೋಬಿಯಾ ಬಗ್ಗೆ ಮಹತ್ವದ ಹೇಳಿಕೆ

ಸಂದೇಶ ಇ-ಮ್ಯಾಗಝಿನ್: ವಿಶ್ವಸಂಸ್ಥೆಯ ಮಹಾಸಚಿವರಾದ ಆಂಟನಿಯೋ ಗುಟೇರಸ್ ಭಯೋತ್ಪಾದಕ ದಾಳಿಗೆ ಒಳಗಾಗಿದ್ದ ನ್ಯೂಝಿಲ್ಯಾಂಡ್ ಕ್ರೈಸ್ಟ್ ಚರ್ಚ್‌ನ ಅನ್ನೂರ್ ಮಸೀದಿಗೆ ನಿನ್ನೆ ಭೇಟಿ ನೀಡಿದರು. ಮಸೀಡೀಯಾ ಹೊರಗೆ ನೆರೆದಿದ್ದ ಜನರನ್ನು ಸಂಭೋದಿಸಿ ಮಾತನಾಡಿದ ಗುಟೇರಸ್, ದ್ವೇಷದಲ್ಲಿ ವೃದ್ಧಿಯಾಗುತ್ತಲೇ ಇದೆ. ಸೋಶಿಯಲ್ ಮೀಡಿಯಾವನ್ನು ದ್ವೇಷ ಹರಡುವ ಮಾಧ್ಯಮವಾಗಿ ಬಳಸಲಾಗುತ್ತಿದೆ. ದ್ವೇಷ ಹರಡುವವರಿಗೆ ಪ್ರತಿಕ್ರಿಯೆಯಾಗಿ ನಾವೆಲ್ಲ ಸಹೃದಯತೆಯನ್ನು ಬೆಳೆಸಿಕೊಳ್ಳುವ ಅಗತ್ಯತೆ ಇದೆ ಎಂದು ಅವರು ಹೇಳಿದರು. ನ್ಯೂಝಿಲ್ಯಾಂಡ್ ಮಸೀದಿಗಳಲ್ಲಿ ಭಯೋತ್ಪಾದಕನ ದಾಳಿಗೆ ಮೃತರಾದ ಕುಟುಂಬಗಳ ದುಃಖವನ್ನು ವಾಕ್ಯಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯ ಮಹಾಸಚಿವರು ಸೋಶಿಯಲ್ ಮೀಡಿಯಾದಲ್ಲಿ ಹರಡಲಾಗುತ್ತಿರುವ ಮುಸ್ಲಿಮರ ವಿರುದ್ಧದ ಇಸ್ಲಾಮೋಫೋಬಿಯಾಗೆ ತುರ್ತಾಗಿ ಕಡಿವಾಣ ಹಾಕಲೇ ಬೇಕಾಗಿದೆ ಎಂದರು.

ದ್ವೇಷ ಹರಡಿ ಅಮಾಯಕರನ್ನ್ಉ ಬಲಿತೆಗೆದುಕೊಳ್ಳುವುದರ ವಿರುದ್ಧ ಕ್ರಮಕೈಗೊಳ್ಳಲು ಜಾಗತಿಕ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಕೆಲಸ ಮಾಡುತ್ತಿದೆ ಎಂದು ಆಂಟನಿಯೋ ಗುಟೇರಸ್ ಹೇಳಿದ್ದಾರೆ. ಮಾರ್ಚ್ 15 ರಂದು ಕ್ರೈಸ್ಟ್ ಚರ್ಚ್‌ನ ಎರಡು ಮಸೀದಿಗೆ ನುಗ್ಗಿದ್ದ ಭಯೋತ್ಪಾದಕನೊಬ್ಬ ಶೂಟೌಟ್ ಮಾಡಿ ಸುಮಾರು 51 ಮುಸ್ಲಿಮರ ಮಾರಣಹೋಮ ನಡೆಸಿದ್ದ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *