Tuesday , October 15 2019
Breaking News
Home / ರಾಷ್ಟ್ರೀಯ / ಲಿಂಚಿಂಗ್ ಬಗ್ಗೆ ಕೇಂದ್ರ ಮಂತ್ರಿ ಮುಖ್ತಾರ್ ಅಬ್ಬಾಸ್ ನಖ್ವಿ ವಿವಾದಾತ್ಮಕ ಹೇಳಿಕೆ

ಲಿಂಚಿಂಗ್ ಬಗ್ಗೆ ಕೇಂದ್ರ ಮಂತ್ರಿ ಮುಖ್ತಾರ್ ಅಬ್ಬಾಸ್ ನಖ್ವಿ ವಿವಾದಾತ್ಮಕ ಹೇಳಿಕೆ

ಸಂದೇಶ ಇ-ಮ್ಯಾಗಝಿನ್: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಾಬ್ ಲಿಂಚಿಂಗ್ ಬಗ್ಗೆ ವಿವಾದಾಸ್ಪದ ಹೇಳಿಕೆ ನೀಡಿದ್ದು, ಮಾಬ್ ಲಿಂಚಿಂಗ್ ಪ್ರಕರಣಗಳಲ್ಲಿ ಹೆಚ್ಚಿನವು ನಕಲಿ ಮತ್ತು ಕಟ್ಟು ಕಥೆಗಳಾಗಿವೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ನಖ್ವಿಯ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೆವಾಲಾ “ನಾನು ನಖ್ವಿ ಜಿ ಅವರನ್ನು ತುಂಬಾ ಗೌರವಿಸುತ್ತೇನೆ. ಆದರೆ ಈ ದೇಶದಲ್ಲಿ ಅಲ್ಪಸಂಖ್ಯಾತರೊಂದಿಗೆ ಏನಾಗುತ್ತಿದೆ ಎಂದು ಅವರಿಗೆ ತಿಳಿದಿದೆಯೇ? ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿಗೆ ಏನೂ ಅನಿಸುವುದಿಲ್ಲ. ಆಡಳಿತ ಪಕ್ಷದ ಎಲ್ಲರೂ ಅಪರಾಧಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ “ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ. ಇದಕ್ಕಿಂತ ಮೊದಲು ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು ಸರನ್ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿ ಮತ್ತು ಇಬ್ಬರು ಬುಡಕಟ್ಟು ಜನಾಂಗದವರನ್ನು ಹತ್ಯೆಗೈದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ “ಈ ಮೂವರು ದನಗಳನ್ನು ಕದ್ದು ಸಿಕ್ಕಿಬಿದ್ದಿದ್ದರಿಂದ ಅವರನ್ನು ಹತ್ಯೆ ಮಾಡಲಾಗಿದೆ. ಇದನ್ನು ಮಾಬ್ ಲಿಂಚಿಂಗ್ ಪ್ರಕರಣವಾಗಿ ನೋಡಬಾರದು ಎಂದು ಹೇಳಿದ್ದರು.

ಸಮಾಜವಾದಿ ಪಕ್ಷದ ಮುಖಂಡ ಆಝಂ ಖಾನ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ನಖ್ವಿಯವರು ಈ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ರಾಂಪುರದ ಸಂಸದ ಆಝಂ ಖಾನ್, ಮುಸ್ಲಿಮರು ದೇಶದಲ್ಲಿ ಘನತೆಯಿಂದ ಬದುಕಲು ಸಾಧ್ಯವಾಗಿಲ್ಲ. ನಾವು 1947 ರಿಂದ ಬಹಳ ಅಸಹ್ಯಕರ ಜೀವನವನ್ನು ನಡೆಸುತ್ತಿದ್ದೇವೆ ಮತ್ತು ಅದರ ಬಗ್ಗೆ ನಮಗೆ ತುಂಬಾ ನಾಚಿಕೆಯಾಗಿದೆ” ಎಂದು ಹೇಳಿದ್ದರು.

Check Also

ಕಾನೂನಿನ ಪ್ರಕಾರ ಅಯೋಧ್ಯೆ ತೀರ್ಪು ಮಸೀದಿಯ ಪರವಾಗಿ ಬರಬೇಕಾಗಿದೆ: ಡಿಎಂಕೆ ಮುಖಂಡ ಎ. ರಾಜಾ ಹೇಳಿಕೆ

8113ಸಂದೇಶ ಇ-ಮ್ಯಾಗಝಿನ್: ಅಯೋಧ್ಯೆ ವಿವಾದದಲ್ಲಿ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ದಿನಂಪ್ರತಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ವಿಚಾರಣೆ ಅಕ್ಟೋಬರ್ 18 ರೊಳಗೆ …

Leave a Reply

Your email address will not be published. Required fields are marked *