Sunday , November 17 2019
Breaking News
Home / ವಿಶೇಷ / ಇಸ್ಲಾಮ್ ವಿಶ್ವದ ಶಾಂತಿಯ ಧರ್ಮ ಎಂದು ಯುನೆಸ್ಕೋ ಪ್ರಮಾಣ ಪತ್ರ ನೀಡಿದೆ ಎಂಬುದರ ಸತ್ಯಾಸತ್ಯತೆ ಇಲ್ಲಿದೆ

ಇಸ್ಲಾಮ್ ವಿಶ್ವದ ಶಾಂತಿಯ ಧರ್ಮ ಎಂದು ಯುನೆಸ್ಕೋ ಪ್ರಮಾಣ ಪತ್ರ ನೀಡಿದೆ ಎಂಬುದರ ಸತ್ಯಾಸತ್ಯತೆ ಇಲ್ಲಿದೆ

ಸಂದೇಶ ಇ-ಮ್ಯಾಗಝಿನ್: ಇತ್ತೀಚೆಗೆ ಕೆಲವು ಸಮಯಗಳಿಂದ ಇಸ್ಲಾಮ್ ಶಾಂತಿಯ ಧರ್ಮ ಎಂದು ಯುನೆಸ್ಕೋ ನೀಡಿದೆ ಎನ್ನಲಾದ ಪ್ರಮಾಣ ಪತ್ರದ ಸ್ಕ್ಯಾನ್ ಕಾಪಿಯೊಂದು ಫೇಸ್ಬುಕ್ , ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಮಾಣ ಪತ್ರದಲ್ಲಿ ಯುನೆಸ್ಕೋದ ಮಾಜಿ ಡೈರೆಕ್ಟರ್ ಜನರಲ್ ಇರಿನಾ ಬೊಕೊವಾ ಅವರ ಹಸ್ತಾಕ್ಷರ ಕೂಡ ಇದೆ. ಪ್ರಮಾಣ ಪತ್ರದ ಮೇಲೆ ಬೋಲ್ಡ್ ಲೆಟರ್ ನಲ್ಲಿ ‘Certificate of Peace’ ಎಂದು ಬರೆಯಲಾಗಿದೆ. 2016 ರ ಜುಲೈ 4 ರಂದು ಈ ಪ್ರಮಾಣ ಪತ್ರ ನೀಡಲಾಗಿದೆ ಎಂದು ದಿನಾಂಕ ನೀಡಲಾಗಿದೆ. ವಾಸ್ತವದಲ್ಲಿ ಇದೊಂದು ನಕಲಿ ಪ್ರಮಾಣ ಪತ್ರವಾಗಿದ್ದು, ಕಳೆದ ಮೂರು ವರ್ಷಗಳಿಂದ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಈ ಹಿಂದೆ ‘ಜುಂತಾ ಕಾ ರಿಪೋರ್ಟರ್’ ಎಂಬ ಫೇಕ್ ವೆಬ್ ಸೈಟ್ ನಲ್ಲಿ ಈ ಬಗ್ಗೆ ವರದಿ ಮಾಡಲಾಗಿತ್ತು. ಹೆಸರಾಂತ ಪತ್ರಕರ್ತ ರಿಫಾತ್ ಜಾವೆದ್ ಅವರ ‘ಜನತಾ ಕಾ ರಿಪೋರ್ಟರ್’ ಸೈಟ್‌ನ ನಕಲಿಯಾಗಿ ಈ ಫೇಕ್ ವೆಬ್ ಸೈಟ್ ಸೃಷ್ಟಿ ಮಾಡಲಾಗಿತ್ತು ಎನ್ನಲಾಗಿದೆ. ಮುಸ್ಲಿಮರೂ ಕೂಡ ಇಂತಹ ಒಂದು ಫೇಕ್ ಪ್ರಮಾಣ ಪತ್ರವನ್ನು ನಂಬಿ ಶೇರ್ ಮಾಡುತ್ತಿದ್ದಾರೆ.

ಯುನೆಸ್ಕೋ ಜುಲಾಯಿ 11, 2016 ರಲ್ಲಿ ಈ ಬಗ್ಗೆ ಸ್ಪಷ್ಟೀಕರಣ ಕೂಡ ನೀಡಿದ್ದು, ಯುನೆಸ್ಕೋ ಇಂತಹ ಯಾವುದೇ ಸರ್ಟಿಫಿಕೇಟ್ ನೀಡುವುದಿಲ್ಲ ಎಂದು ಅದು ತಿಳಿಸಿದೆ. ವಾಸ್ತವದಲ್ಲಿ ಇದು ಇಸ್ಲಾಮ್ ಮತ್ತು ಮುಸ್ಲಿಮ್ ವಿರೋಧಿ ಮನಸ್ಥಿತಿಯ ಜನರು ಮುಸ್ಲಿಮರನ್ನು ಗೇಲಿ ಮಾಡುವ ನಿಟ್ಟಿನಲ್ಲಿ ಸೃಷ್ಟಿ ಮಾಡಿ ಹರಡುತ್ತಿರುವ ಒಂದು ಹಸಿ ಸುಳ್ಳು ಎಂದು ಸಾಬೀತಾಗಿದೆ.

Check Also

ನನ್ನ ಉಮ್ಮಾ: ಹಿಂದೂ ವ್ಯಕ್ತಿ ತನ್ನ ಮುಸ್ಲಿಂ ತಾಯಿಯ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಪೋಸ್ಟ್ ವೈರಲ್

ಸಂದೇಶ ಇ-ಮ್ಯಾಗಝಿನ್: ಕೇರಳದ ಮಲಪ್ಪುರಂನ ಕಾಳಿಕಾವ್‌ನ ಅನಿವಾಸಿ ಭಾರತೀಯರಾದ ಶ್ರೀಧರನ್ ಅವರ ಫೇಸ್‌ಬುಕ್ ಪೋಸ್ಟ್, “ನನ್ನ ಉಮ್ಮಾ (ತಾಯಿ) ಅಲ್ಲಾಹನ …

Leave a Reply

Your email address will not be published. Required fields are marked *