Friday , November 15 2019
Breaking News
Home / ಕ್ರೀಡೆ / ಐಸಿಸಿ ವಲ್ಡ್ ಕಪ್ ಸೆಮಿ ಫೈನಲ್ ಪಂದ್ಯ: ವಿವಾದದ ಸುಳಿಯಲ್ಲಿ ಧೋನಿ ರನ್ ಔಟ್

ಐಸಿಸಿ ವಲ್ಡ್ ಕಪ್ ಸೆಮಿ ಫೈನಲ್ ಪಂದ್ಯ: ವಿವಾದದ ಸುಳಿಯಲ್ಲಿ ಧೋನಿ ರನ್ ಔಟ್

ಸಂದೇಶ ಇ-ಮ್ಯಾಗಝಿನ್: ನಿನ್ನೆಯ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಕಿವಿಗಳ ವಿರುದ್ಧ ಸೋತಿದ್ದು, ಕೊನೆಯಲ್ಲಿ ಭಾರತಕ್ಕೆ ಆಸರೆಯಾಗಿದ್ದ ಎಂ.ಎಸ್.ಧೋನಿ ರನ್ ಔಟ್ ಆಗುವುದರ ಮೂಲಕ ಭಾರತದ ಸೋಲು ಸುನಿಶ್ಚಿತವಾಗಿತ್ತು. ಧೋನಿಯ ಆ ಒಂದು ರನ್ ಔಟ್ ಆಗದಿದ್ದಲ್ಲಿ ಬಹುಷ ಪಂದ್ಯ ಇನ್ನೂ ಯಾವ ತಿರುವನ್ನಾದರೂ ಪಡೆಯುವ ಸಾಧ್ಯತೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಮಾರ್ಟಿನ್ ಗಪ್ಟಿಲ್ ಅವರ ಸ್ಟ್ರೈಟ್ ಹಿಟ್ ಧೋನಿಗೆ ಪೆಲಿಯನ್ ದಾರಿ ತೋರಿಸುವುದರ ಜೊತೆಗೆ ಭಾರತದ ವಿಶ್ವಕಪ್ ಪಯಣವೂ ಅಂತ್ಯವಾಯಿತು. ವಿಷಯ ಏನಂದ್ರೆ ಇದೀ ಈ ರನ್ ಔಟ್ ವಿವಾದಕ್ಕೆ ಕಾರಣವಾಗಿದೆ. ಹಾಗಂತ ಭಾರತದ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೀಲ್ಡಿಂಗ್ ಗ್ರಾಫ್ ನಲ್ಲಿ ಉಲ್ಲೇಖಿಸಲಾಗಿದೆ.

ಭಾರತಕ್ಕೆ ಇನ್ನೂ 10 ಎಸೆತಗಳಲ್ಲಿ 25 ರನ್‌ಗಳು ಬೇಕಾಗಿತ್ತು. ಧೋನಿ ಅವರು 49 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು. ಅಭಿಮಾನಿಗಳ ಭರವಸೆ ಎಲ್ಲಾ ಧೋನಿಯ ಮೇಲೆ ಇತ್ತು. ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಆಸರೆಯಾಗಿ ನಿಲ್ಲುತ್ತಿದ್ದ ಧೋನಿ ಈ ಹಿಂದೆ ಮಾಡಿದ ಹಾಗೆ ಮಾಡುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ನಂತರದ ಎಸೆತದಲ್ಲಿ ಧೋನಿ ಚೆಂಡನ್ನು ಲೆಗ್ ಸೈಡ್‌ನಲ್ಲಿ ಆಡಿದರು ಮತ್ತು ತ್ವರಿತ ಡಬಲ್ಸ್ ಗಾಗಿ ಟ್ರೈ ಮಾಡಿದರು. ನಾನ್ ಸ್ಟ್ರೈಕ್ ನಲ್ಲಿರುವುದು ಟೇಲಂಡರ್ ಆದ ಕಾರಣ ಭಾರತದ ಗೆಲುವಿಗೆ ಆ ಸಮಯದಲ್ಲಿ ಧೋನಿ ಕ್ರೀಸಿನಲ್ಲಿರಬೇಕಾದುದು ಅತೀ ಅವಶ್ಯಕವಾಗಿತ್ತು.

ಧೋನಿ ಮೊದಲ ರನ್ ಪೂರ್ಣಗೊಳಿಸಿ ತಮ್ಮ 50 ರನ್ನು ತಲುಪಿದರೂ, ಅವರು ಎರಡನೇ ರನ್ ಗಾಗಿ ಪ್ರಯತ್ನಿಸಿ ಸಮಯಕ್ಕೆ ಸರಿಯಾಗಿ ಕ್ರೀಸ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಮಾರ್ಟಿನ್ ಗುಪ್ಟಿಲ್ ಅವರ ಉತ್ತಮ-ಗುರಿಯ ಎಸೆತವು ವಿಕೆಟ್ ಕೀಪರ್‌ನ ಕಡೆಯ ಸ್ಟಂಪ್‌ಗಳನ್ನು ಕಿತ್ತುಹಾಕಿತು. ಅದೇನೇ ಇರಲಿ, ಟ್ವಿಟ್ಟರ್‍‌ನಲ್ಲಿ ಶೇರ್ ಮಾಡಲಾದ ವೀಡಿಯೋವೊಂದು ಧೋನಿ ಅವರನ್ನು ರನ್ ಔಟ್ ಮಾಡಲಾದ ಎಸೆತದ ನಿಯಮಬದ್ಧತೆಯ ಬಗ್ಗೆ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಚೆಂಡನ್ನು ಎಸೆಯುವ ಮುನ್ನ ಟೆಲಿವಿಷನ್ ಪರದೆಗಳಲ್ಲಿ ಕಾಣಿಸಿಕೊಂಡ ಗ್ರಾಫ್ ನಲ್ಲಿ ತೋರಿಸಿದ ಹಾಗೆ ವೃತ್ತದ ಹೊರಗೆ ಆರು ಕಿವಿ ಫೀಲ್ಡರ್‌ಗಳು ಇದ್ದರು ಎಂದು ಅಭಿಮಾನಿಗಳು ಗಮನಸೆಳೆದಿದ್ದಾರೆ. ಆ ಸಮಯದಲ್ಲಿ ಮೂರನೇ ಪವರ್‌ಪ್ಲೇ ಆಗಿದ್ದರಿಂದ ನಿಯಮ ಪ್ರಕಾರ 30 ಗಜಗಳ ವೃತ್ತದ ಹೊರಗೆ ಕೇವಲ ಐದು ಫೀಲ್ಡರ್‌ಗಳು ಮಾತ್ರ ಇರಬಹುದಾಗಿದೆ. ಇದು ನಿಜವಾಗಿದ್ದಲ್ಲಿ ಆ ಬಾಲ್ ನೋ ಬಾಲ್ ಆಗುತ್ತದೆ. ಇದು ಅಂಪಾಯರ್ ತಪ್ಪು . ಆದರೂ ಧೋನಿ ರನ್ ಔಟ್ ಆಗಿದ್ದಾರಲ್ವ.! ಹೌದು ಆದರೂ ಲೆಗ್ ಸೈಡ್‌ನ ರಿಂಗ್ ನ ಒಳಗೆ ಧೋನಿಯನ್ನು ರನ್ ಔಟ್ ಮಾಡಿದ ಆ ಫೀಲ್ಡರ್ ಇರುತ್ತಿರಲಿಲ್ಲ. ಬಹುಷ ಧೋನಿ ತನ್ನ ಎರಡನೇ ರನ್ ಪೂರ್ಣ ಗೊಳಿಸುತ್ತಿದ್ದರು.

ಈ ಕಾರಣದಿಂದಾಗಿ ಭಾರತದ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಐಸಿಸಿ ಟೀಮ್ ಇಂಡಿಯಾದ ಅಭಿಮಾನಿಗಳ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಅಭಿಮಾನಿಗಳ ಲೆಕ್ಕಾಚಾರ ಸರಿಯೋ ತಪ್ಪೋ ಎಂದು ಕ್ರಿಕೆಟ್ ಎಕ್ಸ್ ಪರ್ಟ್ ಗಳು ತಿಳಿಸಬೇಕಷ್ಟೆ.

Check Also

ವಲ್ಡ್ ಕಪ್ ಫೈನಲ್: ಕಳಪೆ ಅಂಪಾಯರಿಂಗ್ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ

ಸಂದೇಶ ಇ-ಮ್ಯಾಗಝಿನ್: 2019 ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ವಿವಾದಾತ್ಮಕ ಪಂದ್ಯವಾಗಿ ಮಾರ್ಪಟ್ಟಿದೆ. ಏಕೆಂದರೆ ಮಾಜಿ ಅಂತರರಾಷ್ಟ್ರೀಯ ಅಂಪೈರ್ …

Leave a Reply

Your email address will not be published. Required fields are marked *