Tuesday , October 15 2019
Breaking News
Home / ಕರಾವಳಿ / ಉಡುಪಿ: ಮೆರವಣಿಗೆಯಲ್ಲಿ ಬಂದ ಹಿಂದೂಗಳಿಗೆ ಉಪವಾಸಿಗ ಮುಸ್ಲಿಮರ ಶರ್ಬತ್

ಉಡುಪಿ: ಮೆರವಣಿಗೆಯಲ್ಲಿ ಬಂದ ಹಿಂದೂಗಳಿಗೆ ಉಪವಾಸಿಗ ಮುಸ್ಲಿಮರ ಶರ್ಬತ್

ಸಂದೇಶ ಇ-ಮ್ಯಾಗಝಿನ್: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮುವಾದಿಗಳ ನಾಡು ಎಂದು ಕರೆಯುತ್ತಾರೆ. ಆದರೆ ಇಲ್ಲಿನ ಜನರು ಆಗಾಗ ತಮ್ಮ ಕೊಮು ಸೌಹಾರ್ದವನ್ನು ಸಾಬೀತು ಪಡಿಸುತ್ತಲೇ ಇದ್ದಾರೆ. ನಿನ್ನೆ ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಸ್ವರ್ಣಕವಚ ಹೊದಿಸಿ ಸಮರ್ಪಿಸುವ ಹಿನ್ನೆಲೆಯಲ್ಲಿ ನಡೆದ ಶೋಭಾಯಾತ್ರೆ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳು ಭಾಗವಹಿಸಿದ್ದರು. ಸೆಕೆ ವಿಪರೀತ ಇರುವ ಕಾರಣ ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ಅಲ್ಲಲ್ಲಿ ತಂಪು ಪಾನಿಯ ವಿತರಿಸಲಾಗುತ್ತಿತ್ತು. ಈ ತಂಪು ಪಾನೀಯ ವಿತರಿಸುವವರ ಗುಂಪಿನಲ್ಲಿ ಉಪವಾಸಿಗ ಮುಸ್ಲಿಮ್ ಯುವಕರ ತಂಡವೂ ಇತ್ತು ಎಂಬುದು ಗಮನಾರ್ಹ ಸಂಗತಿ. ಪೇಜಾವರ ಶ್ರೀ ಮುಸ್ಲಿಮ್ ಅಭಿಮಾನಿ ಬಳಗದ ವತಿಯಿಂದ ಸ್ವಯಂ ಪ್ರೇರಿತ ಮುಸ್ಲಿಮ್ ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿ ಧನಿದಿದ್ದ ಹಿಂದೂ ಭಕ್ತಾದಿಗಳಿಗೆ ಶರ್ಬತ್ ವಿತರಣೆ ಮಾಡಿದರು.

ಮುಸ್ಲಿಮ್ ಯುವಕರ ಈ ಕೆಲಸ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು, ಮುಸ್ಲಿಮ್ ಯುವಕರ ತಂಡದ ಈ ಕಾರ್ಯ ಜಿಲ್ಲೆಯ ಕೋಮು ಸಾಮರಸ್ಯವನ್ನು ಎತ್ತಿ ಹಿಡಿದಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಯುವಕರ ತಂಡದಲ್ಲಿ ಉಡುಪಿ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡ ಅನ್ಸಾರ್ ಅಹ್ಮದ್ ಕೂಡ ಇದ್ದರು.

Check Also

ತನ್ನ ಮದುವೆಯಲ್ಲಿ ಊರಿನ ಮುಸ್ಲಿಮರಿಗೆ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಮದುಮಗ

000ಸಂದೇಶ ಇ-ಮ್ಯಾಗಝಿನ್: ದಕ್ಷಿಣ ಕನ್ನಡ ಜಿಲ್ಲೆ ಎಂದರೆ ಸಾಮಾನ್ಯವಾಗಿ ರಾಜ್ಯದ ಇತರ ಕಡೆಯ ಜನರು ಕೋಮುಗಲಭೆ, ಹಿಂದೂ ಮುಸ್ಲಿಮ್ ಅಶಾಂತಿ …

Leave a Reply

Your email address will not be published. Required fields are marked *