Thursday , June 20 2019
Breaking News
Home / ರಮದಾನ್ ವಿಶೇಷಾಂಕ / ಯುಎಇಯ ಅತಿದೊಡ್ಡ ಇಫ್ತಾರ್ ಕೂಟ ಈ ಮಸೀದಿಯಲ್ಲಿ ನಡೆಯುತ್ತಿದೆ

ಯುಎಇಯ ಅತಿದೊಡ್ಡ ಇಫ್ತಾರ್ ಕೂಟ ಈ ಮಸೀದಿಯಲ್ಲಿ ನಡೆಯುತ್ತಿದೆ

ಸಂದೇಶ ಇ-ಮ್ಯಾಗಝಿನ್: ರಮದಾನ್‌ನಲ್ಲಿ ಅಬೂಧಾಬಿಯ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯಲ್ಲಿ ದೈನಂದಿನ 35,000 ಜನರಿಗೆ ಆಹಾರ ಒದಗಿಸುವ ಯುಎಇಯ ಅತಿದೊಡ್ಡ ಇಫ್ತಾರ್ ಆಹಾರವನ್ನು ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮಸೀದಿಯ ಹೊರಭಾಗದ ವಿಶಾಲವಾದ ಹುಲ್ಲುಹಾಸುಗಳ ಮೇಲೆ ಸ್ಥಾಪಿಸಲಾದ ಗುಡಾರಗಳಲ್ಲಿ ಉಪವಾಸ ಹಿಡಿದಿರುವ ಮುಸ್ಲಿಮರಿಗೆ ಇಫ್ತಾರ್ ಆಹಾರಗಳನ್ನು ನೀಡಲು ಸಾವಿರಾರು ಷೆಫ್ಸ್ ಮತ್ತು ಅಡುಗೆ ಸಹಾಯಕರ ತಂಡವೇ ಸನ್ನದ್ಧವಾಗಿರುತ್ತದೆ.

ಪವಿತ್ರ ತಿಂಗಳಲ್ಲಿ ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಯಲ್ಲಿ ತಮ್ಮ ಉಪವಾಸವನ್ನು ಮುರಿಯುವವರ ಉಚಿತ ಇಫ್ತಾರ್ ಆಹಾರವನ್ನು ತಯಾರಿಸಲು ಯುಎಇಯ ದೊಡ್ಡ ದೊಡ್ಡ ಹೋಟೆಲ್‌ನ ದೊಡ್ಡ ಅಡಿಗೆ ಭಟರಾದ ಸುಮಾರು 1,000 ಜನರು ಕೆಲಸ ಮಾಡುತ್ತಿದ್ದಾರೆ. ಈ ತಂಡದಲ್ಲಿ 350 ಷೆಫ್ಸ್, 160 ಮೇಲ್ವಿಚಾರಕರು ಮತ್ತು 450 ಸೇವಾ ಸಿಬ್ಬಂದಿಗಳನ್ನು ಒಳಗೊಂಡಿದೆ.

ಅಡುಗೆಮನೆಯಲ್ಲಿ ಆಹಾರ ತಯಾರಿಸಲು ಸಿಬ್ಬಂದಿಗಳು ಪ್ರತಿದಿನ 12 ಟನ್‌ಗಳಷ್ಟು ಚಿಕನ್ ಮತ್ತು ಆರು ಟನ್ನುಗಳಷ್ಟು ಕುರಿ ಮಾಂಸ ಪ್ರತಿ ದಿನವೂ ಬಳಸುತ್ತಾರೆ. ಮತ್ತು ಅಕ್ಕಿ, ತರಕಾರಿಗಳು, ಟೊಮೆಟೊಗಳು ಮತ್ತು ಈರುಳ್ಳಿಗಳಂತಹವುಗಳು 35 ಟನ್‌‍ಗಳಷ್ಟು ಬಳಕೆಯಾಗುತ್ತವೆ.

ಪ್ರತಿಯೊಂದು ಇಫ್ತಾರ್ ಪೆಟ್ಟಿಗೆಯು ಸೇಬು, ನೀರು, ಖರ್ಜೂರಗಳು, ಲೇಬನ್ ಪಾನೀಯ ಮತ್ತು ಹಣ್ಣಿನ ರಸವನ್ನು ಸಹ ಒಳಗೊಂಡಿದೆ. ಅಡುಗೆ ಕೋಣೆಯಲ್ಲಿ ಊಟದ ಪಾರ್ಸೆಲ್‌ಗಳನ್ನು ಪ್ಯಾಕ್ ಮಾಡಿದ ನಂತರ‍ ಅದನ್ನು ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಗೆ ಒಯ್ಯಲಾಗುತ್ತದೆ. ಮಸೀದಿ ಉದ್ಯಾನಗಳಲ್ಲಿ ಇಫ್ತಾರ್‌ಗಾಗಿ ಹನ್ನೊಂದು ಬೃಹತ್ ಹವಾನಿಯಂತ್ರಿತ ಡೇರೆಗಳನ್ನು ಸ್ಥಾಪಿಸಲಾಗಿದೆ – ಪ್ರತಿಯೊಂದೂ ಸುಮಾರು 1,500 ಜನರಿಗೆ ಸ್ಥಳಾವಕಾಶವನ್ನು ನೀಡುತ್ತದೆ.

Check Also

ಉಪವಾಸಿಗರಿಗೆ ಇಫ್ತಾರ್ ಕಿಟ್ ವಿತರಿಸಿದ ಹಿಂದೂ ಮಹಿಳೆ-ರಾಷ್ಟ್ರೀಯ ಭಾವೈಕ್ಯತೆ

001ಸಂದೇಶ ಇ-ಮ್ಯಾಗಝಿನ್: ಭಾರತವು ಜಗತ್ತಿನ ವಿವಿಧ ರಾಷ್ಟ್ರಗಳ ಮಧ್ಯೆ ಎದೆಯುಬ್ಬಿಸಿ ನಿಲ್ಲುವುದು ತನ್ನ ಜಾತ್ಯಾತೀಯ, ಧರ್ಮಾತೀತ ಪರಂಪರೆಯ ಕಾರಣಕ್ಕಾಗಿ, ಈ …

Leave a Reply

Your email address will not be published. Required fields are marked *