Monday , September 16 2019
Breaking News
Home / ಅಂತಾರಾಷ್ಟ್ರೀಯ / ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ನಿಕಾಬ್ ಮತ್ತು ಮುಖದ ಹೊದಿಕೆಯನ್ನು ನಿಷೇಧಿಸಿದ್ದಾರೆ. ಪ್ರಧಾನ ಮಂತ್ರಿ ಯೂಸೆಫ್ ಚಾಹೇದ್ ಅವರು ಸರ್ಕಾರದ ಸುತ್ತೋಲೆಗೆ ಸಹಿ ಹಾಕಿದ್ದು, ಸುತ್ತೋಲೆಯಲ್ಲಿ “ಸರಕಾರಿ ಕಚೇರಿ ಹಾಗೂ ಸಂಸ್ಥೆಗಳಲ್ಲಿ ಭದ್ರತಾ ಕಾರಣಗಳಿಗಾಗಿ ಮುಖ ಮುಚ್ಚಿದ ಯಾರಿಗಾದರೂ ಪ್ರವೇಶವನ್ನು ನಿಷೇಧಿಸಲಾಗಿದೆ” ಎಂದು ಉಲ್ಲೇಖಿಸಲಾಗಿದೆ. ಜೂನ್ 27 ರಂದು ಟುನಿಸ್‌ನಲ್ಲಿ ನಡೆದ ಡಬಲ್ ಆತ್ಮಾಹುತಿ ಬಾಂಬ್ ಸ್ಫೋಟದ ನಂತರ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ. ಆದಾಗ್ಯೂ ತಲೆ ಮರೆಸುವ ವಸ್ತ್ರವನ್ನು ಧರಿಸಬಹುದಾಗಿದ್ದು, ಕಣ್ಣುಗಳನ್ನು ಹೊರತುಪಡಿಸಿ ಇಡೀ ಮುಖವನ್ನು ಆವರಿಸುವ ನಿಕಾಬ್ ಮೇಲೆ ಮಾತ್ರ ನಿಷೇಧ ಹೇರಲಾಗಿದೆ.

ಮಾನವ ಹಕ್ಕುಗಳ ರಕ್ಷಣಾ ಟುನೀಷಿಯನ್ ಲೀಗ್ ಈ ಕ್ರಮವು ಕೇವಲ ತಾತ್ಕಾಲಿಕವಾಗಿರಬೇಕು ಎಂದು ಒತ್ತಾಯಿಸಿದೆ. ಧರಿಸುವ ಸ್ವಾತಂತ್ರ್ಯ ಪ್ರತಿಯೊಬ್ಬನ ವೈಯುಕ್ತಿಕ ಅಧಿಕಾರವಾಗಿರಬೇಕು. ಆದರೆ ಇಂದು ಪ್ರಸ್ತುತ ಪರಿಸ್ಥಿತಿ ಆ ರೀತಿ ಇರುವುದರಿಂದ ಮತ್ತು ಟುನೀಶಿಯಾದಾದ್ಯಂತ ಭಯೋತ್ಪಾದಕ ಬೆದರಿಕೆ ಗಳಿರುವುದರಿಂದ ನಾವು ಈ ನಿರ್ಧಾರಕ್ಕೆ ಸಮರ್ಥನೆಗಳನ್ನು ಕಂಡುಕೊಂಡಿದ್ದೇವೆ ಎಂದು ಲೀಗ್‌ನ ಅಧ್ಯಕ್ಷ ಜಮೆಲ್ ಮಸಲೆಮ್ ತಿಳಿಸಿದ್ದಾರೆ.

Check Also

ಝಾಕಿರ್ ನಾಯ್ಕ್ ಹಸ್ತಾಂತರ ವಿಚಾರ: ಮಲೇಷ್ಯಾ ವಿದೇಶಾಂಗ ಮಂತ್ರಿಯ ಮಹತ್ವದ ಹೇಳಿಕೆ

002ಸಂದೇಶ ಇ-ಮ್ಯಾಗಝಿನ್: ಮಲೆಷ್ಯಾದ ವಿದೇಶಾಂಗ ಸಚಿವ ದಾತುಕ್ ಸೈಫುದ್ದೀನ್ ಅಬ್ದುಲ್ಲಾ ಅವರು ಇಸ್ಲಾಮಿಕ್ ಪ್ರಭೋಧಕ ದಾ. ಝಾಕಿರ್ ನಾಯ್ಕ್ ಅವರನ್ನು …

Leave a Reply

Your email address will not be published. Required fields are marked *