Tuesday , July 23 2019
Breaking News
Home / ಅಂತಾರಾಷ್ಟ್ರೀಯ / ವೈಟ್ ಹೌಸ್ ಇಫ್ತಾರ್ ಕೂಟ: ಜಗತ್ತಿಗೆ ಮಹತ್ವದ ಸಂದೇಶದ ನೀಡಿದ ಅಧ್ಯಕ್ಷ ಟ್ರಂಪ್

ವೈಟ್ ಹೌಸ್ ಇಫ್ತಾರ್ ಕೂಟ: ಜಗತ್ತಿಗೆ ಮಹತ್ವದ ಸಂದೇಶದ ನೀಡಿದ ಅಧ್ಯಕ್ಷ ಟ್ರಂಪ್

ಸಂದೇಶ ಇ-ಮ್ಯಾಗಝಿನ್: ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತೀ ವರ್ಷದ ಹಾಗೆ ನಿನ್ನೆ ಸೋಮವಾರ ಅಮ್ಮ ವೈಟ್ ಹೌಸ್ ನಿವಾಸದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರು. ಆಹ್ವಾನಿತ ಮುಸ್ಲಿಮ್ ದೇಶಗಳ ಪ್ರತಿನಿಧಿಗಳು ಹಾಗೂ ಸಚಿವ ಸಂಪುಟದ ಕೆಲವು ಸಚಿವರು ಮತ್ತು ಅಧಿಕಾರಿಗಳು ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಈ ರಮದಾನ್ ತಿಂಗಳನ್ನು ನಿರೀಕ್ಷೆ, ಸಹಿಷ್ಣುತೆ ಮತ್ತು ಶಾಂತಿಯ ಹುಡುಕಾಟ ಎಂದು ಬಣ್ಣಿಸಿದ ಅಧ್ಯಕ್ಷ ಟ್ರಂಪ್, ಇತ್ತೀಚೆಗೆ ನಡೆದ ನ್ಯೂಝಿಲ್ಯಾಂಡ್ ಕ್ರೈಸ್ಟ್ ಚರ್ಚ್ ಮಸೀದಿ ದಾಳಿ, ಶ್ರೀಲಂಕಾ ಈಸ್ಟರ್ ಚರ್ಚ್ ದಾಳಿ, ಕ್ಯಾಲಿಫೋರ್ನಿಯಾ ಹಾಗೂ ಫಿಟ್ಸ್ ಬರ್ಗ್‌ನಲ್ಲಿ ನಡೆದ ಯಹೂದಿ ಗಳ ಮೇಲಿನ ದಾಳಿಯನ್ನು ಸ್ಮರಿಸಿ, ಈ ಕಾಲ ಜಗತ್ತಿನ ಎಲ್ಲಾ ಧರ್ಮದ ಜನರಿಗೂ ಅತ್ಯಂತ ಕಠಿಣವಾದ ಸಮಯವಾಗಿದೆ. ದ್ವೇಷವು ಉಕ್ಕಿ ಹರಿಯುತ್ತಿದೆ. ದಾಳಿಯಲ್ಲಿ ಮೃತರಾದ ಆತ್ಮಗಳಿಗೆ ಶಾಂತಿ ದೊರೆಯಲಿ ಎಂದು ಆಶಿಸಿದರು.

ಭಯೋತ್ಪಾದಕರು ಧರ್ಮದ ಮೇಲೆ ನಡೆಸುತ್ತಿರುವ ದಾಳಿಗಳ ವಿರುದ್ಧ ನಾವೆಲ್ಲ ಸೇರಿ ಹೋರಾಡುವ ಪ್ರತೀಜ್ಞೆ ಮಾಡೋಣ ಎಂದ ಟ್ರಂಪ್, ಜಗತ್ತಿನ ಎಲ್ಲಾ ಧರ್ಮವನ್ನೂ ಅನುಸರಿಸುತ್ತಿರುವ ಜನರು ಹೆದರಿಕೆ ಇಲ್ಲದೆ ಅವರವರ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವಂತಾಗಲಿ ಎಂದು ಹಾರೈಸಿದರು. ಅಮೇರಿಕಾದ ವೈಟ್ ಹೌಸ್‌ನಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರ ಕಾಲದಿಂದ ಪ್ರತೀವರ್ಷ ಇಫ್ತಾರ್ ಕೂಟ ಏರ್ಪಡಿಸಿ ಕೊಂಡು ಬರಲಾಗುತ್ತಿದೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

000ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *