Monday , August 26 2019
Breaking News
Home / ರಾಜಕೀಯ / ಈ ಕಾರಣಕ್ಕಾಗಿ ರಾಹುಲನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಲು ಸಿದ್ಧ ಎಂದ ಮಮತಾ ಬ್ಯಾನರ್ಜಿ

ಈ ಕಾರಣಕ್ಕಾಗಿ ರಾಹುಲನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪಲು ಸಿದ್ಧ ಎಂದ ಮಮತಾ ಬ್ಯಾನರ್ಜಿ

ಸಂದೇಶ ಇ-ಮ್ಯಾಗಝಿನ್: ಲೋಕಸಭಾ ಚುನಾವಣೆ ಮುಗಿಯುವ ಹಂತದಲ್ಲಿದ್ದು, ಫಲಿತಾಂಶಕ್ಕೆ ಕೇವಲ ವಾರವಷ್ಟೇ ಬಾಕಿ ಇದೆ. ಎನ್‌ಡಿಎ ಪಾಳಯದಲ್ಲಿ ಹಾಲಿ ಪ್ರಧಾನಿ ಮೋದಿಯವರೇ ತಮ್ಮ ಮುಂದಿನ ಪ್ರಧಾನಿ ಎಂದು ಹೇಳಿಕೊಳ್ಳುತ್ತಿದ್ದರೂ ಕೂಡ ವಿರೋಧಿಗಳಾದ ಯುಪಿಎ ಮೈತ್ರಿಕೂಟ ಹಾಗೂ ಇತರ ಪಕ್ಷಗಳು ತಮ್ಮ ಪ್ರಧಾನಿ ಅಭ್ಯರ್ಥಿಯಾರೆಂದು ಇನ್ನೂ ಕೂಡ ಸ್ಪಷ್ಟತೆಯಿಲ್ಲ. ಯುಪಿಎ ಕೂಟದ ಸ್ಟಾಲಿನ್ ಮುಂತಾದ ನಾಯಕರು ರಾಹುಲ್ ಗಾಂಧಿಯವರೇ ನಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಹೇಳಿದ್ದಾರಾದರೂ ಇನ್ನು ಕೆಲವರು ಬಾಯಿ ತೆರೆದಿಲ್ಲ. ಆದರೆ ಇದೀಗ ಮೋದಿ ಮತ್ತು ಮಮತಾ ಬ್ಯಾನರ್ಜಿಯವರ ನಡುವಿನ ಮುಸುಕಿನ ಗುದ್ದಾಟ ಹೆಚ್ಚುತ್ತಿದ್ದಂತೆ, ತೃಣ ಮೂಲ ಕಾಂಗ್ರೇಸ್ ಪಕ್ಷದಿಂದ ಮಹತ್ವದ ಹೇಳಿಕೆಯೊಂದು ಹೊರಬಿದ್ದಿದೆ. ಮೋದಿ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಅಧಿಕಾರಕ್ಕೆ ಮರಳಬಾರದು ಎಂಬ ಕಾರಣಕ್ಕೆ ರಾಹುಲ್ ಗಾಂಧಿಯನ್ನು ಬೆಂಬಲಿಸಲು ಸಿದ್ಧ ಎಂದು ಮಮತ ಬ್ಯಾನರ್ಜಿಯವರ ಪಕ್ಷದ ಮೂಲಗಳು ತಿಳಿಸಿದೆ.

ಸ್ಟಾಲಿನ್ ಅವರು ಬುಧವಾರ ಕೂಡ ತಮ್ಮ ಹಳೆಯ ಮಾತನ್ನು ಪುನರಾವರ್ತಿಸಿದ್ದು, ರಾಹುಲನ್ನು ಪ್ರಧಾನಿಯಾಗಿಸುವುದೇ ನಮ್ಮ ಗುರಿ ಎಂದಿದ್ದಾರೆ. ಈ ಹೇಳಿಕೆಯನ್ನು ಅನುಮೋದಿಸಿರುವ ದೀದಿ ಸ್ಟಾಲಿನ್ ಹೇಳಿದ ಮಾತಿನಲ್ಲಿ ತಪ್ಪಿಲ್ಲ, ಎಲ್ಲರೂ ಈಗ ಮೋದಿಯನ್ನು ಪ್ರಧಾನಿ ಸ್ಥಾನದಿಂದ ಹೊರಗಟ್ಟಲು ಬಯಸುತ್ತಿದ್ದೇವೆ. ಮೋದಿಯನ್ನು ಅಧಿಕಾರದಿಂದ ಇಳಿಸಲು ನಾವು ರಾಹುಲ್ ಗಾಂಧಿಯನ್ನು ಬೆಂಬಲಿಸಲು ಸಿದ್ಧ ಎಂದಿದ್ದಾರೆ ಎನ್ನಲಾಗಿದೆ.

Check Also

ಅಲ್ಪಸಂಖ್ಯಾತರೆಂದರೆ ಕೇವಲ ಮುಸ್ಲಿಮರಲ್ಲ: ಮುಕ್ತಾರ್ ಅಬ್ಬಾಸ್ ನಖ್ವಿ

101ಸಂದೇಶ ಇ-ಮ್ಯಾಗಝಿನ್: ಅಲ್ಪಸಂಖ್ಯಾತ ಪದವು ಮುಸ್ಲಿಮರನ್ನು ಮಾತ್ರ ಸೂಚಿಸುವುದಿಲ್ಲ ನಮ್ಮ ದೇಶದಲ್ಲಿ ಜೈನರು, ಬೌದ್ಧರು, ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಸಿಖ್ಖರು …

Leave a Reply

Your email address will not be published. Required fields are marked *