Tuesday , April 7 2020
Breaking News
Home / ಅಂತಾರಾಷ್ಟ್ರೀಯ / ತಾಳಲಾರದ ನೋವು, ತನ್ನ ಕೈಯನ್ನೇ ಕತ್ತರಿಸಲು ಮುಂದಾದ ಬಾಂಗ್ಲಾದ ‘ಟ್ರೀ ಮ್ಯಾನ್’

ತಾಳಲಾರದ ನೋವು, ತನ್ನ ಕೈಯನ್ನೇ ಕತ್ತರಿಸಲು ಮುಂದಾದ ಬಾಂಗ್ಲಾದ ‘ಟ್ರೀ ಮ್ಯಾನ್’

ಸಂದೇಶ ಇ-ಮ್ಯಾಗಝಿನ್: ಟ್ರೀ ಮ್ಯಾನ್ ಎಂದೇ ಹೆಸರುವಾಸಿಯಾಗಿರುವ ಬಾಂಗ್ಲಾದೇಶದ ಅಬುಲ್ ಬಜಂದರ್ ಮೇಲಿಂದ ಮೇಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿಯೂ ಮತ್ತೂ ಕೂಡ ಎಗ್ಗಿಲ್ಲದೆ ತನ್ನ ಕೈಯಲ್ಲಿ ಬೆಳೆಯುತ್ತಿರುವ ಮರದ ರೀತಿಯ ಆಕಾರದಿಂದ ಬೇಸತ್ತಿರುವ ಬಜಂದರ್ ಇದೀಗ ತನ್ನ ಕೈಗಳನ್ನು ಕತ್ತರಿಸಲು ನಿರ್ಧರಿಸಿದ್ದಾರೆ. 2016 ರ ರಿಂದ ಬಜಂದರ್ ಅವರ ಕೈಗೆ ಸುಮಾರು 25 ಶಸ್ತ್ರಚಿಕಿತ್ಸೆಗಳು ನಡೆದಿದ್ದು ಯಾವುದೇ ಪ್ರಯೋಜನವಾಗಿಲ್ಲ, ‘ಎಪಿಡರ್ಮೋಡಿಸ್ಪ್ಲಾಸಿಯಾ ವರುಸಿಫಾರ್ಮಿಸ್’ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ 28 ವರ್ಷ ಪ್ರಾಯದ ಅಬುಲ್ ಬಜಂದರ್ ಒಂದು ಹೆಣ್ಣು ಮಗುವಿನ ತಂದೆ ಕೂಡ ಆಗಿದ್ದಾರೆ.

ಕಳೆದ ಜನವರಿಯಿಂದ ಬಜಂದರ್ ಅವರ ಸ್ಥಿತಿ ಅತ್ಯಂತ ಉಲ್ಬಣಿಸಿದ್ದು, ಇವರ ಕೈಯ ಬೆರಳುಗಳಲ್ಲಿ ಬೆಳೆಯುವ ಮರದ ಬೇರಿನ ಆಕಾರಗಳು ಇದೀಗ ಇಂಚುಗಳಷ್ಟು ಉದ್ದ ಬೆಳೆದಿದೆ. ಇದರಿಂದಾಗಿ ಬಜಂದರ್ ನನಗೆ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ ದಯವಿಟ್ಟು ನನ್ನ ಕೈಯನ್ನು ಕತ್ತರಿಸಿ ಬಿಡಿ ಎಂದು ವೈದ್ಯರಲ್ಲಿ ಮನವಿ ಮಾಡಿದ್ದಾರೆನ್ನಲಾಗಿದೆ.

“ನನಗೆ ಇನ್ನು್ ಈ ನೋವನ್ನು ಸಹಿಸಲು ಸಾಧ್ಯವಿಲ್ಲ. ರಾತ್ರಿಯಲ್ಲಿ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಕೈಗಳನ್ನು ಕತ್ತರಿಸುವಂತೆ ನಾನು ವೈದ್ಯರನ್ನು ಕೇಳಿಕೊಂಡಿದ್ದೇನೆ. ಅದರಿಂದ ಕನಿಷ್ಠ ನನ್ನ ನೋವಾದರೂ ಕಡಿಮೆಯಾಗಬಹುದು ಎಂಬ ಭರವಸೆ ಇದೆ” ಎಂದು ಎಎಫ್‌ಪಿ ಮಾತನಾಡುತ್ತಾ ತಿಳಿಸಿದ್ದಾರೆ.

ಬಜಂದರ್ ತಾಯಿ ಅವರ ತಾಯಿ ಅಮಿನಾ ಬೀಬಿ ಬಜಂದರ್‌ನ ಈ ಮನವಿಯನ್ನು ಬೆಂಬಲಿಸಿದ್ದಾರೆ. “ಕನಿಷ್ಠ ನನ್ನ ಮಗ ನೋವಿನಿಂದಲಾದರೂ ಮುಕ್ತನಾಗುತ್ತಾನಲ್ಲ. ಇದು ನರಕಯಾತನೆಯ ಸ್ಥಿತಿ” ಎಂದು ಅವರು ಹೇಳಿದ್ದಾರೆ.

ಬಜಂದರ್ ಅವರ ಈ ರೋಗ ಅಂತಾರಾಷ್ಟ್ರೀಯ ಸುದ್ದಿಯಾದ ಬಳಿಕ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನ ಎಲ್ಲಾ ಚಿಕಿತ್ಸೆಯ ವೆಚ್ಚವನ್ನು ಸರ್ಕಾರದ ವತಿಯಿಂದ ಭರಿಸುವ ಭರವಸೆ ನೀಡಿದ್ದಾರೆ. ಎಲ್ಲರ ಹಾಗೆ ದುಡಿದು ತನ್ನ ಕುಟುಂಬವನ್ನು ಸಾಕುತ್ತಿದ್ದ ಅಬುಲ್ ಬಜಂದರ್‌ಗೆ ಅಚಾನಕ್ ಆಗಿ ಈ ಕಾಯಿಲೆ ತಗುಲಿ ಬದುಕೇ ಬೇಡವೆಂಬಂತಾಗಿದೆ.

ಅವರು ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಆದರೆ ನಾವು ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ. ಅವರ ಕೈಗಳನ್ನು ಉಳಿಸುವ ಗರಿಷ್ಟ ಪ್ರಯತ್ನ ಮಾಡುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ.

Check Also

ಸೌದಿ ರಾಜಕುಮಾರಿಯ ವಿರುದ್ಧ ಫ್ರಾನ್ಸ್ ನಲ್ಲಿ ಮೊಕದ್ದಮೆ-ಕಾರಣವೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಅವರ ಏಕೈಕ ಪುತ್ರಿ ರಾಜಕುಮಾರಿ ಹಸ್ಸಾ ಬಿಂತ್ ಸಲ್ಮಾನ್ ಅವರ ವಿರುದ್ಧ …

Leave a Reply

Your email address will not be published. Required fields are marked *