Friday , November 15 2019
Breaking News
Home / ರಾಷ್ಟ್ರೀಯ / ಟಿಕ್ ಟಾಕ್ ನಲ್ಲಿ ತಬ್ರೇಜ್ ಅನ್ಸಾರಿ ಪರವಾಗಿ ವೀಡಿಯೋ ಮಾಡಿದ ಯುವಕರ ವಿರುದ್ಧ ಪ್ರಕರಣ ದಾಖಲು

ಟಿಕ್ ಟಾಕ್ ನಲ್ಲಿ ತಬ್ರೇಜ್ ಅನ್ಸಾರಿ ಪರವಾಗಿ ವೀಡಿಯೋ ಮಾಡಿದ ಯುವಕರ ವಿರುದ್ಧ ಪ್ರಕರಣ ದಾಖಲು

ಸಂದೇಶ ಇ-ಮ್ಯಾಗಝಿನ್: ಜಾರ್ಖಂಡ್‌ನಲ್ಲಿ ನಡೆದ ತಬ್ರೆಜ್ ಅನ್ಸಾರಿ ಮಾಬ್ ಲಿಂಚಿಂಗ್ ಪ್ರಕರಣದ ಸೇಡು ತೀರಿಸಿಕೊಳ್ಳುವ ಸಂಬಂಧಿಸಿದ ಟಿಕ್ ಟಾಕ್ ವಿಡಿಯೋಕ್ಕಾಗಿ ಮುಂಬೈ ಪೊಲೀಸರು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಬ್ರೇಜ್ ಅನ್ಸಾರಿ ಮಾಬ್ ಲಿಂಚಿಂಗ್ ಹತ್ಯೆಗೆ ಸಂಬಂಧಿಸಿ ಟಿಕ್ ಟಾಕ್ ವೀಡಿಯೋ ಮಾಡಿದ್ದ ಟಿಕ್-ಟಾಕ್ ಸೆಲೆಬ್ರಿಟಿ ಹಸನ್ ಖಾನ್ ಮತ್ತು ಆತನ ಸ್ನೇಹಿತರ ವಿರುದ್ಧ ಮುಂಬೈ ಪೊಲೀಸರ ಸೈಬರ್ ಸೆಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಸಂಬಂಧಿತ ವೀಡಿಯೊವನ್ನು ಟಿಕೆಟ್‌ನಿಂದ ತೆಗೆದುಹಾಕಲಾಗಿದೆ. ಇದು ಮಾತ್ರವಲ್ಲ, ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಬಳಕೆದಾರರ ಖಾತೆಯನ್ನು ಟಿಕ್ ಟಾಕ್ ನಿಂದ ಅಳಿಸಲಾಗಿದೆ ಎಂದು ತಿಳಿದು ಬಂದಿದೆ. ವೀಡಿಯೋದಲ್ಲಿ ಯುವಕರು ‘ಅಮಾಯಕ ತಬ್ರೇಜ್ ನನ್ನು ಕೊಂದು ಬಿಟ್ಟಿರಿ ಅಲ್ವ. ಇನ್ನು ಆತನ ಸಂತತಿಗಳು ಪ್ರತಿಕಾರ ಬಯಸಿದರೆ ಮುಸ್ಲಿಮರನ್ನು ಭಯೋತ್ಪಾದಕರು ಎನ್ನಬೇಡಿ’ ಎಂದು ಹೇಳಿದ್ದರು.

ಈ “ದ್ವೇಷಪೂರಿತ” ವೀಡಿಯೊವು ಎರಡು ಸಮುದಾಯಗಳ ನಡುವೆ ಶಾಂತಿಯನ್ನು ಭಂಗ ಗೊಳಿಸುವ ಮತ್ತು ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಉದ್ದೇಶ ಹೊಂದಿದ್ದು, ಆದ್ದರಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಿದವರ ವಿರುದ್ಧ ನಾವು ಪ್ರಕರಣವನ್ನು ದಾಖಲಿಸಿದ್ದೇವೆ ಎಮ್ದು ಪೊಲೀಸರು ತಿಳಿಸಿದ್ದಾರೆ.

Check Also

ಗೋರಕ್‌ಪುರ ಮಕ್ಕಳ ಸಾವು ಪ್ರಕರಣ: ವೈದ್ಯ ಕಫೀಲ್ ಖಾನ್ ಆರೋಪ ಮುಕ್ತ

ಸಂದೇಶ ಇ-ಮ್ಯಾಗಝಿನ್: ಗೋರಕ್‌ಪುರದ ಬಿಆರ್‌ಡಿ ಮೆಡಿಕಲ್ ಕಾಲೇಜ್ ನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ನಡೆದ ಮಕ್ಕಳ ಸಾಮೂಹಿಕ ಸಾವು …

Leave a Reply

Your email address will not be published. Required fields are marked *