Friday , May 24 2019
Breaking News
Home / ಇಸ್ಲಾಮಿಕ್ ಲೇಖನಗಳು / ಮಗುವಾಗಿರುವಾಗ ತೊಟ್ಟಿಲಲ್ಲಿ ಮಾತನಾಡಿದ ಆ ಮೂವರು

ಮಗುವಾಗಿರುವಾಗ ತೊಟ್ಟಿಲಲ್ಲಿ ಮಾತನಾಡಿದ ಆ ಮೂವರು

ಅಬೂ ಹುರೈರಾ (ರ)ರವರಿಂದ ವರದಿ. ಪ್ರವಾದಿ (ಸ.ಅ) ರು ಹೇಳಿದರು; ತೊಟ್ಟಿಲಲ್ಲಿ ಈ ಮೂವರಲ್ಲದೆ ಬೇರೆ ಯಾರು ಮಾತಾಡಿಲ್ಲ. (ಮೊದಲನೆಯವರು) ಈಸ ನಬಿ(ಅ). (ಎರಡನೆಯವರು ) ಬನೀ ಇಸ್ರಾಯಿಲರಲ್ಲಿ ಜುರೈಜ್ ಎಂಬುವರಿದ್ದರು. ಅವರು ನಮಾಝ್ ನಿರ್ವಹಿಸುತ್ತಿರುವಾಗ ಅವರ ತಾಯಿ ಅವರನ್ನು ಕರೆದರು. (ಅವರು ತನ್ನೊಂದಿಗೆ ಹೇಳಿಕೊಂಡರು) ನಾನು ನಮಾಝನ್ನು ಮಂದುವರಿಸಲೇ ಅಥವಾ ಅವರಿಗೆ ಉತ್ತರಿಸಲೇ? (ಅವರು ನಮಾಝ್ ನಿರ್ವಹಿಸತೊಡಗಿದರು.) ತಾಯಿಗೆ ಉತ್ತರಿಸಲಿಲ್ಲ. ಅವರ ತಾಯಿ ಹೇಳಿದರು: ಓ ಅಲ್ಲಾಹ್ ಇವನು ವೇಶ್ಯೆಯ ಮುಖವನ್ನು ಕಾಣದೇ ಮರಣ ಬಾರದಿರಲಿ. ಹಾಗೆ ಅವರು ತನ್ನ ವಾಸಸ್ಥಳದಲ್ಲಿರುವಾಗ ಒಬ್ಬ ವೇಶ್ಯೆ ಅವರನ್ನು ಆಕರ್ಷಿಸಲು ಪ್ರಯತ್ನಿಸಿದಳು. ಆದರೆ ಅದನ್ನು ಅದನ್ನು ನಿರಾಕರಿಸಿದರು. ಆ ಸ್ತ್ರೀಯು ಒಬ್ಬ ಕುರಿಕಾಯುವವನೊಂದಿಗೆ ಹೋಗಿ ದೇಹ ಸಂಬಂಧವನ್ನು ಹೊಂದಿದಳು, ಕೆಲವು ಸಮಯದ ನಂತರ ಮಗುವಿಗೆ ಜನ್ಮವಿತ್ತು ಇದು ಜುರೈಜ್ ನದ್ದು ಎಂದು ಹೇಳತೊಡಗಿದಳು. ಅಲ್ಲಿಯ ಜನರು ಜುರೈಜನ್ನು ಅವರ ವಾಸ ಕೊಠಾರದಿಂದ ಹೊರ ಹಾಕಿ ಅದನ್ನು ಕೆಡವಿ ಹಾಕಿ ಅವರನ್ನು ತೆಗಳಲು ಶುರುಮಾಡಿದರು. ಜುರೈಜ್ ಉದೂಃ (ಅಂಗಶುದ್ದಿ) ಮಾಡಿ ನಮಾಝ್ ನಿರ್ವಹಿಸಿದರು. ನಂತರ ಮಗುವಿನೆಡಗೆ ಹೋಗಿ ಹೆಳಿದರು; ಓ ಮಗು ನಿನ್ನ ತಂದೆ ಯಾರು? ಮಗು ಉತ್ತರಿಸಿತು; ಒಬ್ಬ ಕುರಿಕಾಯುವವನು. (ಇದನ್ನು ಕೇಳಿದ ನಂತರ) ಅಲ್ಲಿಯ ಜನರು ಹೇಳಿದರು; ನಾವು ನಿಮ್ಮ ವಾಸಸ್ಥಳವನ್ನು ಚಿನ್ನದಿಂದ ಕಟ್ಟುವೆವು, ಆದರೆ ಜುರೈಜ್ ಅದನ್ನು ನಿರಾಕರಿಸಿ ಇದನ್ನು ಕೇವಲ ಮಣ್ಣಿನಿಂದ ಮಾತ್ರ ನಿರ್ಮಿಸಿ ಎಂದು ಹೇಳಿದರು.

(ಮೂರನೆಯವರು) ಬನೀ ಇಸ್ರಾಯೀಲರೊಬ್ಬರಲ್ಲಿ ಒಬ್ಬ ಮಹಿಳೆ ತನ್ನ ಮಗುವಿಗೆ ಮೊಲೆಹಾಲು ಉಣಿಸುತ್ತಿರುವಾಗ ಒಬ್ಬ ಸುಂದರವಾಗಿರುವ ಸವಾರ ಹಾದು ಹೋಗುತ್ತಾನೆ. ಆಗ ಆ ಮಗುವಿನ ತಾಯಿ ಹೇಳುತ್ತಾಳೆ; ಓ ಅಲ್ಲಾಹ್ ನನ್ನ ಮಗುವನ್ನು ಅವನಂತೆ ಮಾಡು. ಆಗ ಮಗು ಹಾಲು ಕುಡಿಯುವುದನ್ನು ನಿಲ್ಲಿಸಿ ಅವನೆಡೆಗೆ ನೋಡಿ ಹೇಳುತ್ತಾನೆ; ಓ‌ ಅಲ್ಲಾಹ್ ನನ್ನನ್ನು ಅವನಂತೆ ಮಾಡದಿರು ಎಂದು ಹೇಳಿ ಹಾಲು ಕುಡಿಯಲು ಶುರು ಮಾಡುತ್ತಾನೆ. ಸ್ವಲ್ಪ ಹೊತ್ತಿನ ನಂತರ ಕೆಲವು ಜನರು ಒಬ್ಬ ಗಲಾಮ ಸ್ತ್ರೀಯನ್ನು ಕರೆದುಕೊಂಡು ಹೋಗುವುದನ್ನು ಕಂಡು (ಮಗುವಿನ ತಾಯಿ) ಹೇಳುತ್ತಾಳೆ; ಓ ಅಲ್ಲಾಹ್ ನನ್ನ ಮಗುವನ್ನು ಇವಳಂತೆ ಮಾಡದಿರು. ಆಗ ಮಗು ಹಾಲುಕುಡಿಯುವುದನ್ನು ನಿಲ್ಲಿಸಿ ಹೀಗೆ ಹೇಳಿತು; ಓ ಅಲ್ಲಾಹ್ ನನ್ನನ್ನು ಅವಳಂತೆ (ಗುಲಾಮ ಸ್ತ್ರೀಯಂತೆ) ಮಾಡು. ಮಗುವಿನ‌ ತಾಯಿ ಕೇಳಿದಳು ಯಾಕೆ!? ಮಗು ಉತ್ತರಿತು ಈ ಗುಲಾಮ ಸ್ತ್ರೀಯನ್ನು ತಪ್ಪಾಗಿ ಕಳ್ಳತನದ ಮತ್ತು ಅಕ್ರಮ ಸಂಬಂಧದ ಆರೋಪ ಹೊರಿಸುವಾಗ ಆ ವ್ಯಕ್ತಿ ಕ್ರೂರಿಯಾಗಿದ್ದ.  (ಸಹೀಹ್ ಬುಖಾರಿ 3436)

Check Also

ಜುಮಾ ದಿವಸ ಸಾಮಾನ್ಯವಾಗಿ ನಾವೆಲ್ಲರೂ ಮಾಡಲು ಸಾಧ್ಯವಿರುವ ಈ 5 ತಪ್ಪುಗಳು

0010ಮುಸ್ಲಿಮರಿಗೆ ಜುಮುಅ ದಿವಸ ಅಂದರೆ ಶುಕ್ರವಾರ ಇತರ ಸಾಮಾನ್ಯ ದಿವಸಗಳಂತಲ್ಲ, ಜುಮುಅ ದಿನದಂದು ಬೆಳಗ್ಗೆ ಯಿಂದಲೇ ತಯಾರಿ ಮಾಡಿ ಮಸೀದಿಗೆ …

Leave a Reply

Your email address will not be published. Required fields are marked *