Friday , April 3 2020
Breaking News
Home / ಅಂತಾರಾಷ್ಟ್ರೀಯ / ಆಗಸ್ಟ್ 1ರಿಂದ ಈ ಯುರೋಪಿಯನ್ ರಾಷ್ಟ್ರ ನಿಖಾಬ್‌ಗೆ ನಿಷೇಧ ಹೇರಳಿದೆ

ಆಗಸ್ಟ್ 1ರಿಂದ ಈ ಯುರೋಪಿಯನ್ ರಾಷ್ಟ್ರ ನಿಖಾಬ್‌ಗೆ ನಿಷೇಧ ಹೇರಳಿದೆ

ಸಂದೇಶ ಇ-ಮ್ಯಾಗಝಿನ್: ಯುರೋಪಿಯನ್ ರಾಷ್ಟ್ರವಾದ ನೆದರ್‌ಲ್ಯಾಂಡ್ ಈ ವರ್ಷದ ಆಗಸ್ಟ್‌ನಿಂದ ನಿಖಾಬ್‌ಗೆ ನಿಷೇಧ ಹೇರಲು ಸಜ್ಜಾಗಿದೆ. ಅಧಿಕೃತವಾಗಿ ‘ಭಾಗಶಃ ನಿಷೇಧದ ಮುಖದ ಉಡುಪು ಕಾಯ್ದೆ’ ಎಂದು ಕರೆಯಲ್ಪಡುವ ಈ ನಿಷೇಧವು ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಶಾಲೆಗಳಲ್ಲಿ, ಸಾರ್ವಜನಿಕ ಸಾರಿಗೆಯಲ್ಲಿ, ಆಸ್ಪತ್ರೆಗಳಲ್ಲಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಈ ಕಾನೂನು ಅನ್ವಯವಾಗಲಿದೆ. ಈ ಕಾನೂನು ಜಾರಿಯಾದ ನಂತರ ಸಾರ್ವಜನಿಕ ಕಟ್ಟಡಗಳಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕ ಸಾರಿಗೆ ನಿರ್ವಾಹಕರು ತಮ್ಮ ಮುಖಗಳನ್ನು ಮುಚ್ಚಿಕೊಂಡು ಬರುವ ಜನರನ್ನು ಅದನ್ನು ತೆಗೆದು ಹಾಕುವಂತೆ ಅಥವಾ ಕಟ್ಟಡದಿಂದ/ಸಾರಿಗೆಯಿಂದ ಹೊರಹೋಗುವಂತೆ ಹೇಳಬಹುದು. ಅವರು ನಿರಾಕರಿಸಿದರೆ ಪೊಲೀಸರನ್ನು ಕರೆಯಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

ನಿಖಾಬ್ ನಿಷೇಧದ ವಿರುದ್ಧ ಕೌನ್ಸಿಲ್ ಆಫ್ ಸ್ಟೇಟ್ ವಾದ ಮಂಡಿಸಿದ್ದು, ಜನರು ತಮ್ಮ ಮುಖಗಳನ್ನು ತೋರಿಸಲು ಕಾನೂನಿನಲ್ಲಿ ಈಗಾಗಲೇ ಸಾಕಷ್ಟು ನಿಬಂಧನೆಗಳಿವೆ ಎಂದು ವಾದಿಸಿದೆ. ವರದಿಯೊಂದರ ಪ್ರಕಾರ ನೆದರ್‌ಲ್ಯಾಂಡ್‌ನಲ್ಲಿ ಪ್ರತಿದಿನ ಸುಮಾರು 150 ಮಹಿಳೆಯರು ಬುರ್ಖಾ ಅಥವಾ ನಿಕಾಬ್ ಧರಿಸುತ್ತಿದ್ದಾರೆ ಎನ್ನಲಾಗಿದೆ.

Check Also

ಭದ್ರತಾ ಕಾರಣಗಳಿಗಾಗಿ ಈ ಆಫ್ರಿಕನ್ ಮುಸ್ಲಿಮ್ ರಾಷ್ಟ್ರ ನಿಖಾಬ್ ನಿಷೇಧಿಸಿದೆ

ಸಂದೇಶ ಇ-ಮ್ಯಾಗಝಿನ್: ಉತ್ತರ ಆಫ್ರಿಕಾದ ದೇಶ ಟುನೀಶಿಯಾದಲ್ಲಿ ಬಾಂಬ್ ದಾಳಿಯ ನಂತರ ಇದೀಗ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿ …

Leave a Reply

Your email address will not be published. Required fields are marked *