Friday , April 3 2020
Breaking News
Home / ಗಲ್ಫ್ ವಿಶೇಷ / ಯುಎಇ: ರಮದಾನ್‌ನಲ್ಲಿ ಬ್ರಿಟನ್ ಮಹಿಳೆಯಿಂದ ಇಸ್ಲಾಮ್ ಸ್ವೀಕಾರ

ಯುಎಇ: ರಮದಾನ್‌ನಲ್ಲಿ ಬ್ರಿಟನ್ ಮಹಿಳೆಯಿಂದ ಇಸ್ಲಾಮ್ ಸ್ವೀಕಾರ

ಸಂದೇಶ ಇ-ಮ್ಯಾಗಝಿನ್: ಯುಕೆ ರಾಷ್ಟ್ರೀಯಳಾದ ಮ್ಯಾಕ್ಸಿನ್ ಬ್ರಾಡಾಕ್ ಯುಎಇಯಲ್ಲಿ ತಮ್ಮ ಜೀವನದ ಒಂಬತ್ತನೇ ರಮದಾನ್ ಉಪವಾಸ ವೃತಾಚರಣೆ ಮಾಡುತ್ತಿದ್ದಾರೆ. ಇದು ಆಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ರಮದಾನ್ ಆಗಿದೆ. – ಪವಿತ್ರ ತಿಂಗಳು ಪ್ರಾರಂಭವಾದ ಐದು ದಿನಗಳ ನಂತರ ಅವರು ಇಸ್ಲಾಮ್ ಧರ್ಮವನ್ನು ಸ್ವೀಕಾರ ಮಾಡಿದರು. ಈಗ ಆಕೆಯ ಮುಸ್ಲಿಂ ಹೆಸರು – ಇಮಾನ್ (ನಂಬಿಕೆ ಎಂದರ್ಥ) ಎಂದಾಗಿದೆ.

49 ವರ್ಷ ವಯಸ್ಸಿನ ಬ್ರಿಟನ್ ಮಹಿಳೆ ಖಲೀಜ್ ಟೈಮ್ಸ್ ಜೊತೆ ಮಾತನಾಡುತ್ತಾ, ಇಸ್ಲಾಂ ಧರ್ಮದಲ್ಲಿ ನನ್ನ ಆಸಕ್ತಿಯು ಚರ್ಚ್ ಧರ್ಮೋಪದೇಶದಿಂದ ಪ್ರಾರಂಭವಾಯಿತು ಎಂದಿದ್ದಾರೆ. “ಚರ್ಚ್‌ನಲ್ಲಿ ಅವರು ಯಾವಾಗಲೂ ಇಸ್ಲಾಂ ಧರ್ಮವನ್ನು ಉಲ್ಲೇಖಿಸುತ್ತಿದ್ದರು” ಇದರಿಂದಾಗಿ ನನಗೆ ಇಸ್ಲಾಂ ಧರ್ಮ ಮತ್ತು “ಅದರ ಸುಂದರ ಮೌಲ್ಯಗಳ” ಬಗ್ಗೆ ಸಂಬಂಧವನ್ನು ಬೆಳೆಸಲು ಸಹಕಾರಿಯಾಯಿತು ಎಂದಿದ್ದಾರೆ.

“ನನಗೆ ಇಸ್ಲಾಂ ಧರ್ಮದ ಬಗ್ಗೆ ಅತ್ಯಂತ ಆಕರ್ಷಕ ವಿಷಯವೆಂದರೆ ಅದರ ಮೌಲ್ಯಗಳು. ಇವುಗಳೆಂದರೆ ನನ್ನ ಹೃದಯಕ್ಕೆ ಶಾಂತಿಯನ್ನು ತರುವ ಮೌಲ್ಯಗಳು. ಅವುಗಳು ಪ್ರಾಣಿಗಳಿರಲಿ ಮತ್ತು ಮನುಷ್ಯರಿರಲಿ ಎಲ್ಲರ ಮೇಲೆ ಕರುಅಣೆ ಪ್ರೀತಿ ತೋರಿಸುವ ಆ ಮೌಲ್ಯಗಳು ಹೆಚ್ಚು ಆಕರ್ಷಣೀಯವಾಗಿದೆ” ಎಂದು ಅವರು ಹೇಳಿದರು.

ಕೆಲವು ವರ್ಷಗಳ ಹಿಂದೆಯೇ ಇಸ್ಲಾಂ ಧರ್ಮವನ್ನು ಆಚರಿಸಬೇಕೆಂದು ಇಮಾನ್ ಬಯಸಿದ್ದರು. ಆದರೆ ಆಗ ಆಕೆಯ ತಾಯಿ ಅದನ್ನು ಒಪ್ಪಿಕೊಳ್ಳಲಿಲ್ಲ. ಆಕೆಯ ತಾಯಿ ಕಳೆದ ಅಕ್ಟೋಬರ್ನಲ್ಲಿ ನಿಧನರಾದ ಬಳಿಕ ಇಮಾನ್ ಅವರು ಇಸ್ಲಾಮಿಕ್ ಇನ್ಫರ್ಮೇಷನ್ ಸೆಂಟರ್‌ಗೆ ಭೇಟಿ ನೀಡಿದರು. ಆನಂತರ ಅವರು ಅಲ್ಲಿ ಧರ್ಮವನ್ನು ಕಲಿಯಲು ಪ್ರಾರಂಭಿಸಿದರು.

ಮುಸ್ಲಿಂಮರಂತೆ ಅಧಿಕೃತವಾಗಿ ಇಮಾನ್ ಇದೇ ಮೊದಲ ಬಾರಿಗೆ ಉಪವಾಸ ವೃತ ಆಚರಣೆ ಮಾಡುತ್ತಿದ್ದಾರೆ. “ಕಳೆದ ಮೂರು ವರ್ಷಗಳಿಂದ ನಾನು ಪ್ರಯತ್ನಿಸುತ್ತಿದ್ದರೂ, ನಾನು ಅದನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗಲಿಲ್ಲ. ಆದರೆ ಈ ವರ್ಷ ಮುಸ್ಲಿಮಳಾಗುವ ಮುಂಚೆಯೇ, ನಾನು ಉಪವಾಸ ಆಚರಣೆಗೆ ನನಗೆ ಸಹಾಯ ಮಾಡಲು ದೇವರನ್ನು ಪ್ರಾರ್ಥಿಸಿದೆ ಮತ್ತು ಅವನು ಮಾಡಿದ. ರಮದಾನ್‌ನ ಮೊದಲ ಕೆಲವು ದಿನ ಬೆಳಿಗ್ಗೆ ಪ್ರಾರ್ಥನೆ (ಫಜರ್ ಪ್ರಾರ್ಥನೆ) ಕರೆ ಕೇಳಿ ನಾನು ಎದ್ದೇಳುತ್ತಿದ್ದೆ ಮತ್ತು ಅದು ನನಗೆ ಭಾವನಾತ್ಮಕವಾಗಿರುತ್ತಿತ್ತು.”

“ನಂತರದ ದಿನಗಳಲ್ಲಿ ನನ್ನ ಮನಸ್ಸಿನಲ್ಲಿ ವಿಚಿತ್ರ ಪರಿವರ್ತನೆಗಳಾದವು. ಅಲ್ಲಾಹನು ನನಗೆ ಅವನ ಕೆಲವು ಚಿಹ್ನೆಗಳನ್ನು ತೋರಿಸುತ್ತಿದ್ದಾನೆಂಬಂತೆ ನನಗೆ ಭಾಸವಾಗುತ್ತಿತ್ತು. ಅದೇ ಗುಂಗಿನಲ್ಲಿದ್ದ ನಾನು, ಮೇ 12 ರಂದು ನಾನು ಮುಸ್ಲಿಮಳಾಗಲು ನಿರ್ಧರಿಸಿದೆ. “ನಾನು ಈಗ ಒಬ್ಬಂಟಿಯಾಗಿದ್ದರೂ, ಅಲ್ಲಾಹು ಈಗ ನನ್ನ ಹೃದಯವನ್ನು ಶಾಂತಿ ಮತ್ತು ಸಂತೃಪ್ತಿಯಿಂದ ತುಂಬಿದ್ದಾನೆ” ಎಂದು ಇಮಾನ್ ಹೇಳಿದರು.

ಅಲ್ಲಾಹನ ಜೊತೆಗಿನ ಸಂಬಂಧವು ಉಪವಾಸದಿಂದಾಗಿ ಇನ್ನಷ್ಟು ಗಟ್ಟಿಯಾಗಿದೆ. “ನಾನು ಈಗ ಅನುಭವಿಸುತ್ತಿರುವ ಈ ಅದ್ಭುತ ಭಾವನೆಗಳನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ, ವಿಶೇಷವಾಗಿ ನಾನು ಪ್ರಾರ್ಥನೆ ಮಾಡಲು ನಿಂತಾಗ. ಪ್ರಾರ್ಥನೆಯು ನನಗೆ ಇದೀಗ ತುಂಬಾ ಪ್ರಿಯವಾದ ಕಾರ್ಯವಾಗಿದೆ. ನನಗೆ ನನ್ನ ಪ್ರಾರ್ಥನೆಯನ್ನು ಫಳಕಾರಿಯಾಗಿ ಮಾಡು ಎಂದು ಬೇಡಿ, ಎಲ್ಲಾ ವೈಭವಕ್ಕಾಗಿ ಆತನಾನ್ನು ಹೊಗಳುತ್ತಿರುತ್ತೇನೆ ಎಂದು ಆಧ್ಯಾತ್ಮಿಕವಾಗಿ ಇದೀಗ ತಾನು ಅನುಭವಿಸುತ್ತಿರುವ ಅನುಭವಗಳನ್ನು ಇಮಾನ್ ಹಂಚಿಕೊಂಡರು.

ಇಮಾನ್ ಇದೀಗ ದಿನಕ್ಕೆ ಐದು ಬಾರಿ ಪ್ರಾರ್ಥಿಸುತ್ತಾರೆ. ಖುರಾನ್ ಓದುತ್ತಾರೆ ಮತ್ತು ದುವಾ(ಪ್ರಾರ್ಥನೆ) ಮಾಡುತ್ತಾರೆ. “ನೀವು ಒಂದು ವಿಚಿತ್ರ ಸತ್ಯದ ಆಧ್ಯಾತ್ಮಿಕ ಹುಡುಕಾಟದಲ್ಲಿದ್ದರೆ ನಾನು ಹೇಳಲು ಬಯಸುವುದೇನೆಂದರೆ ನಿಮ್ಮ ಮನಸ್ಸನ್ನು ತೆರೆಯಿರಿ, ನಿಮ್ಮ ಮನಸ್ಸನ್ನು ತೆರೆಯಿರಿ ಮತ್ತು ಆಗ ನಿಮ್ಮ ಹೃದಯ ಏನನ್ನು ಬಯಸುತ್ತದೆ ಎಂಬುದನ್ನು ಕಂಡುಕೊಳ್ಳುವಿರಿ. ಅಲ್ಲಾಹನ ವಿಸ್ವಾಸವಿಟ್ತರೆ ಅವನು ಜಗತ್ತನ್ನು ನಿಮ್ಮ ಪಾದಗಳೆಡೆ ತರುತ್ತಾನೆ. ಎಲ್ಲವನ್ನೂ ಅವನ ದಾರಿಯಲ್ಲಿ ವ್ಯಯಿಸಲು ಸಿದ್ಧರಾಗಿ-ಅಂದರೆ ಸಮಯ, ಹಣ, ಶಕ್ತಿ. ಆಗ ನೋಡಿ ನೀವು ಊಹಿಸಿಕೊಳ್ಳಲು ಸಾಧ್ಯವಿಲ್ಲದ ರೀತಿಯಲ್ಲಿ ಅವನು ಅದನ್ನು ನಿಮಗೆ ಬಹುದಾರಿಯಲ್ಲಿ ಹಿಂದಿರುಗಿಸುವನು. ಇದು ನನ್ನ ಸ್ವಂತ ಅನುಭವವಾಗಿದೆ ಎಂದು ಇಮಾನ್ ಹೇಳಿದ್ದಾರೆ.

Check Also

ಆಕೆ ತನ್ನ ಮಕ್ಕಳ ಹೊಟ್ಟೆ ತುಂಬಿಸಲು ಮದೀನಾದ ಬೀದಿಯಲ್ಲಿ ಟೀ ಮಾರುತ್ತಾಳೆ

ಸಂದೇಶ ಇ-ಮ್ಯಾಗಝಿನ್: ಇದು ಅಸಹಾಯಕ ತಾಯಿಯೊಬ್ಬಳ ನೈಜ ಜೀವನಗಾಥೆ. ಪತಿ ಮರಣ ಹೊಂದಿದ ನಂತರ ತನ್ನ ಸಣ್ಣವರಾದ ಆರು ಮಕ್ಕಳನ್ನು …

Leave a Reply

Your email address will not be published. Required fields are marked *