Monday , September 16 2019
Breaking News
Home / ರಮದಾನ್ ವಿಶೇಷಾಂಕ / ಕಳೆದ 34 ವರ್ಷಗಳಿಂದ ರಂಝಾನ್ ಉಪವಾಸ ವೃತ ಅನುಷ್ಟಿಸುತ್ತಾ ಬಂದಿರುವ ಹಿಂದೂ ಮಹಿಳೆ

ಕಳೆದ 34 ವರ್ಷಗಳಿಂದ ರಂಝಾನ್ ಉಪವಾಸ ವೃತ ಅನುಷ್ಟಿಸುತ್ತಾ ಬಂದಿರುವ ಹಿಂದೂ ಮಹಿಳೆ

ಸಂದೇಶ ಇ-ಮ್ಯಾಗಝಿನ್: ಅಹ್ಮದಾಬಾದ್‌ನ 85 ವರ್ಷದ ಹಿಂದೂ ಮಹಿಳೆಯೊಬ್ಬರು ಕಳೆದ 34 ವರ್ಷಗಳಿಂದ ರಂಝಾನ್ ಉಪವಾಸ ಅನುಷ್ಟಿಸುತ್ತಾ ಬಂದಿದ್ದಾರೆ. ಅಹಮದಾಬಾದಿನ ಜಮಾಲ್ಪುರ್ ಪ್ರದೇಶದ ಬಾಲಾ ಪಿರ್ ಬಾವಾದಲ್ಲಿ ಸಂತರೊಬ್ಬರಿಗೆ ಶಪಥ ಮಾಡಿದ ನಂತರ ಪೂರಿ ಬೆನ್ ಅವರು ಮುಸ್ಲಿಮರ ಪವಿತ್ರ ತಿಂಗಳಲ್ಲಿ ಉಪವಾಸ ಆರಂಭಿಸಿದರು. ಅವರ ಗಂಡನ ಮರಣದ ನಂತರ ಪೂರಿ ಬೆನ್ ಮತ್ತು ಅವರ ಹೆಣ್ಣು ಮಕ್ಕಳು ತಾವು ನೆಲೆಸುತ್ತಿದ್ದ ಜಮಾಲ್ಪುರದಿಂದ ಸುಮಾರು 2.5 ಕಿಮೀ ದೂರದಲ್ಲಿರುವ ತಾಜ್‌ಪುರ್ ಮೋಮಿನ್ ವಾಡಾಗೆ ತಮ್ಮ ನಿವಾಸವನ್ನು ಬದಲಾಯಿಸಿದರು. ಆದರೂ ಆಕೆ ತಮ್ಮ ಉಪವಾಸದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆದರೆ ಕಳೆದ ವರ್ಷ ವೈದ್ಯರು ಪೂರಿ ಬೆನ್ ಅವರನ್ನು ಕೇವಲ ಮೂರು ಉಪವಾಸ ಮಾತ್ರ ಹಿಡಿಯ ಬೇಕು ಎಂದು ಸಲಹೆ ನೀಡಿದರು. ನನಗೆ ಮೂವತ್ತು ದಿನ ಉಪವಾಸ ಹಿಡಿಯುವ ಆಸೆ ಎಂದರು ವೈದ್ಯರು ಒಪ್ಪಲಿಲ್ಲ ಕೊನೆಗೆ 27, 28, 29 ಈ ಕೊನೆಯ ಮೂರು ಉಪವಾಸ ಮಾತ್ರ ಹಿಡಿದಿರುವುದಾಗಿ ಪೂರಿ ಬೆನ್ ಹೇಳಿದ್ದಾರೆ.

1982 ರಲ್ಲಿ ಪೂರಿಬೆನ್ ಅವರ ಪತಿಯ ಸೋದರ ಸಂಬಂಧಿಗಳು ಆಸ್ತಿ ವಿಚಾರದಲ್ಲಿ ಗಲಾಟೆ ಮಾಡಿದ್ದರು. ಈ ಗಲಾಟೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಸಮಯದಲ್ಲಿ ಅಹ್ಮದಾಬಾದ್‍ನ ಬಾಲಾ ಪೀರ್ ಬಾವಾದಲ್ಲಿ ಸಂತರೊಬ್ಬರನ್ನು ಭೇಟಿಯಾದ ನಂತರ ಅವರು ನನಗೆ ಉಪವಾಸ ಹಿಡಿಯಲು ಹೇಳಿದರು. ನಾನು ಅವರು ಹೇಳಿದಂತೆ ಉಪವಾಸ ಹಿಡಿದೆ. ಕೊನೆಗೆ ತೀರ್ಪು ನಮ್ಮ ಪರವಾಗಿ ಬಂತು ಎಂದು ಪೂರಿ ಬೆನ್ ಹಳೆಯ ನೆನಪನ್ನು ಕೆದಕಿದ್ದಾರೆ.

Check Also

ಉಪವಾಸಿಗರಿಗೆ ಇಫ್ತಾರ್ ಕಿಟ್ ವಿತರಿಸಿದ ಹಿಂದೂ ಮಹಿಳೆ-ರಾಷ್ಟ್ರೀಯ ಭಾವೈಕ್ಯತೆ

001ಸಂದೇಶ ಇ-ಮ್ಯಾಗಝಿನ್: ಭಾರತವು ಜಗತ್ತಿನ ವಿವಿಧ ರಾಷ್ಟ್ರಗಳ ಮಧ್ಯೆ ಎದೆಯುಬ್ಬಿಸಿ ನಿಲ್ಲುವುದು ತನ್ನ ಜಾತ್ಯಾತೀಯ, ಧರ್ಮಾತೀತ ಪರಂಪರೆಯ ಕಾರಣಕ್ಕಾಗಿ, ಈ …

Leave a Reply

Your email address will not be published. Required fields are marked *