Monday , July 22 2019
Breaking News
Home / ವಿಶೇಷ / ಬ್ರೈನ್ ಟ್ಯೂಮರ್ ಪೀಡಿತ ಮಗುವಿನ ಆಟಿಕೆ ಕದ್ದ ಕಳ್ಳರು ಕೊನೆಗೆ ಮಾಡಿದ ಕೆಲಸವೇನು ನೋಡಿ

ಬ್ರೈನ್ ಟ್ಯೂಮರ್ ಪೀಡಿತ ಮಗುವಿನ ಆಟಿಕೆ ಕದ್ದ ಕಳ್ಳರು ಕೊನೆಗೆ ಮಾಡಿದ ಕೆಲಸವೇನು ನೋಡಿ

ಸಂದೇಶ ಇ-ಮ್ಯಾಗಝಿನ್: ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿರುವ 5 ವರ್ಷದ ಬಾಲಕನಿಗೆ ಸೇರಿದ ರೆಸ್ಲಿಂಗ್ ಬೆಲ್ಟನ್ನು ಕದ್ದ ಕಳ್ಳರು ನಂತರ ಆ ಬಾಲಕ ಪರಿಸ್ಥಿತಿಯ ಅರಿವಾಗಿ ಆತನೊಂದಿಗೆ ಕ್ಷಮೆ ಕೇಳಿ ಪತ್ರ ಬರೆದ ಅಪರೂಪದ ಘಟನೆ ಅಮೆರಿಕಾದ ಡೆಲಾವೇರ್ ನಿಂದ ವರದಿಯಾಗಿದೆ. 5 ವರ್ಷ ಪ್ರಾಯದ ಟಿಮ್ಮಿ ವಿಕ್‌ ಅಪಾಯಕಾರಿ ಮಿದುಳಿನ ಗೆಡ್ಡೆ ಕಾಯಿಲೆಯಿಂದ ಬಳಲುತ್ತಿದ್ದು, ಗೆಡ್ಡೆ ಯನ್ನು ತೆಗೆದುಹಾಕಲು ಆತನಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಟಿಮ್ಮಿ ವಿಕ್‌ನಲ್ಲಿರುವ ಆಟಿಕೆ ರೆಸ್ಲಿಂಗ್ ಬೆಲ್ಟ್ ಟಿಮ್ಮಿಗೆ ಧೈರ್ಯ ಮತ್ತು ಸಾಂತ್ವನವನ್ನು ನೀಡುತ್ತದೆ. ಅದು ಹಳೆಯದಾಗಿದ್ದು, ಅದನ್ನು ನವೀಕರಿಸಲು ಆತನ ತಂದೆ ರೆಸ್ಲಿಂಗ್ ಬೆಲ್ಟ್ ನಿರ್ಮಾಣ ಕಲಾವಿದ ಸೆರ್ಗಿಯೋ ಮೊರೆರಾ ಅವರಿಗೆ ನೀಡಲು ಬಯಸಿದ್ದರು. ಸಾಗಾಣಿಕಾ ವೆಚ್ಚವನ್ನು ಮಾತ್ರ ಭರಿಸಿದರೆ ಸಾಕು ಬೆಲ್ಟ್ ನವೀಕರನ್ನು ಉಚಿತವಾಗಿ ಮಾಡಿಕೊಡುವುದಾಗಿ ಸೆರ್ಗಿಯೋ ಮೊರೆರಾ ಒಪ್ಪಿಕೊಂಡಿದ್ದರು.

ಆದರೆ ಟಿಮ್ಮಿಯ ಬೆಲ್ಟ್‌ನ ಪ್ಯಾಕೇಜ್ ಕೊರಿಯರ್‌ನಲ್ಲಿ ಮೊರೆರಾ ಅವರ ಮನೆಗೆ ಬಂದಾಗ, ಅದನ್ನು ಮುಂಭಾಗದ ಮುಖಮಂಟಪದಿಂದ(ಸೀಟ್ ಔಟ್) ಇಬ್ಬರು ಕಳ್ಳರು ಕದ್ದಿದ್ದಾರೆ. ಬಳಿಕ ಮೊರೆರಾ ತನ್ನ ಡೋರ್‌ಬೆಲ್ ಕ್ಯಾಮೆರಾದಿಂದ ತೆಗೆದ ವೀಡಿಯೋ ತುಣುಕನ್ನು ಸ್ಥಳೀಯ ಸುದ್ದಿ ವಾಹಿನಿಗೆ ನೀಡಿದರು. ಸುದ್ದಿಯ ಜೊತೆಗೆ ಆ ಮಗುವಿನ ಪರಿಸ್ಥಿತಿಯನ್ನು ವಿವರಿಸಲಾಯಿತು. ‘ಆತ ಬ್ರೈನ್ ಟ್ಯೂಮರ್ ರೋಗಿ. ಅದರ ಮೇಲೆ ಆತ ಒಬ್ಬ ಸಣ್ಣ ಮಗು. ನೀವು ಮಗುವಿನ ಹೃದಯವನ್ನು ಮುರಿದಿದ್ದೀರಿ’ ಹೇಳಲಾಯಿತು.

ಕಳ್ಳರು ಆ ಸುದ್ದಿಯನ್ನು ನೋಡಿಯಾದರೂ ಆ ಮಗುವಿನ ಪರಿಸ್ಥಿತಿ ಅರ್ಥೈಸಿ ಕಳ್ಳರು ಮಾನವೀಯತೆ ಇರುವವರಾದರೆ ಆ ಮಗುವಿನ ರೆಸ್ಲಿಂಗ್ ಬೆಲ್ಟ್ ತಂದು ಕೊಡುವರು ಎಂಬ ಹಾರೈಕೆಯೊಂದಿಗೆ ತಾನು ಈ ರೀತಿ ಮಾಡಿದ್ದಾರೆ ಮೊರೇರಾ ವಿವರಿಸಿದ್ದಾರೆ.

ಅಚ್ಚರಿ ಎಂಬಂತೆ ಇದಾಗಿ ಎರಡು ದಿನಗಳ ನಂತರ ಕಳ್ಳರು ನಾಲ್ಕು ಪುಟಗಳ ಕೈಬರಹದ ಕ್ಷಮಾಪಣಾ ಪತ್ರದೊಂದಿಗೆ ಟಿಮ್ಮಿಯ ಬೆಲ್ಟ್‌ನ ಪೆಟ್ಟಿಗೆಯನ್ನು ಹಿಂದಿರುಗಿಸಲು ಮೊರೆರಾ ಮನೆಗೆ ಹೋದರು. ಕಳ್ಳರು ಇಬ್ಬರು ಮಹಿಳೆಯರಾಗಿದ್ದರು. ಮನೆ ಯಿಲ್ಲದ ನಿರ್ಗತಿಕರಾದ ಮತ್ತು ಮಾದಕ ವ್ಯಸನಿಗಳಾಗಿರುವ ಈ ಮಹಿಳೆಯರು ತಾವು ಕೇವಲ ಹಣ ಮಾಡುವ ಉದ್ದೇಶದಿಂದಾಗಿ ಈ ಕೆಲಸ ಮಾಡಿದ್ದಾಗಿಯೂ ಮತ್ತು ಇದೀಗ ಮಾಡಿರುವ ಕೆಲಸಕ್ಕೆ “ಮುಜುಗರ” ಮತ್ತು “ನಾಚಿಕೆಪಡುವುದಾಗಿಯೂ” ಪತ್ರದಲ್ಲಿ ವಿವವರಿಸಿದ್ದರು.

“ನಾವು ಎಂದಿಗೂ ಮಗುವಿನ ಭರವಸೆಯನ್ನು ಕದಿಯಲು ಬಯಸುವುದಿಲ್ಲ” ಎಂದು ಕಳ್ಳಿ ಮಹಿಳೆಯರು ಪತ್ರದಲ್ಲಿ ತಿಳಿಸಿದ್ದಾರೆ. ಸುದ್ದಿ ನೋಡಿದ ನಂತರ ನಮಗೆ ತುಂಬಾ ಬೇಸರವಾಯಿತು. ಟಿಮ್ಮಿ ನಿಜವಾದ ಹೀರೋ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮಹಿಳೆಯರು ಪ್ಯಾಕೇಜ್ ಅನ್ನು ಹಿಂದಿರುಗಿಸಿದಾಗ ತುಂಬಾ ವಿಷಾದಿಸುತ್ತಿದ್ದರು. ಮತ್ತು ಅವರಿಬ್ಬರೂ ಅಳುತ್ತಿದ್ದರು ಎಂದು ಮೊರೆರಾ ಹೇಳುತ್ತಾರೆ. ತಮ್ಮ ತಪ್ಪನ್ನು ಒಪ್ಪಿಕೊಂಡು ಅವರಾಗಿಯೇ ಬಂದು ಕ್ಷಮೆ ಕೇಳಿ ವಸ್ತುವನ್ನು ಹಿಂದಿರುಗಿಸಿರುವ ಕಾರಣ ಮೊರೆರಾ ಅವರು ಪೊಲೀಸರ ಮೊರೆ ಹೋಗದೆ ಅವರಿಬ್ಬರನ್ನೂ ಕ್ಷಮಿಸಿ ಕಳುಹಿಸಿಕೊಟ್ಟಿದ್ದಾರೆ.

Check Also

ಇಸ್ಲಾಮ್ ವಿಶ್ವದ ಶಾಂತಿಯ ಧರ್ಮ ಎಂದು ಯುನೆಸ್ಕೋ ಪ್ರಮಾಣ ಪತ್ರ ನೀಡಿದೆ ಎಂಬುದರ ಸತ್ಯಾಸತ್ಯತೆ ಇಲ್ಲಿದೆ

101ಸಂದೇಶ ಇ-ಮ್ಯಾಗಝಿನ್: ಇತ್ತೀಚೆಗೆ ಕೆಲವು ಸಮಯಗಳಿಂದ ಇಸ್ಲಾಮ್ ಶಾಂತಿಯ ಧರ್ಮ ಎಂದು ಯುನೆಸ್ಕೋ ನೀಡಿದೆ ಎನ್ನಲಾದ ಪ್ರಮಾಣ ಪತ್ರದ ಸ್ಕ್ಯಾನ್ …

Leave a Reply

Your email address will not be published. Required fields are marked *