Saturday , April 4 2020
Breaking News
Home / ರಿಯಲ್ ಹೀರೋಸ್ / ತಮ್ಮ 75 ನೇ ಹುಟ್ಟುಹಬ್ಬವನ್ನು ಅಕ್ಕಮ್ಮ ಅವರು ಆಚರಿಸಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ

ತಮ್ಮ 75 ನೇ ಹುಟ್ಟುಹಬ್ಬವನ್ನು ಅಕ್ಕಮ್ಮ ಅವರು ಆಚರಿಸಿಕೊಂಡ ರೀತಿ ನಿಜಕ್ಕೂ ಶ್ಲಾಘನೀಯ

ಸಂದೇಶ ಇ-ಮ್ಯಾಗಝಿನ್: ಕೇರಳದ ಪತ್ತನಂತಿಟ್ಟ ಜಿಲ್ಲೆಯ ಅಡೋರ್ ಮೂಲದ ಅಕ್ಕಮ್ಮಾ ಮ್ಯಾಥ್ಯೂ ಎಂಬ ವೃದ್ಧ ಮಹಿಳೆ ತನ್ನ ಹುಟ್ಟುಹಬ್ಬದ ದಿನದಂದು ಬಡ ಕುಟುಂಬವೊಂದಕ್ಕೆ ಆಸರೆ ಒದಗಿಸಿ ಸುದ್ದಿಯಾಗಿದ್ದಾರೆ. ಮೊನ್ನೆ ತಮ್ಮ 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಕ್ಕಮ್ಮಾ, ಅದೇ ದಿನ ಮನೆಯಿಲ್ಲದೆ ಕಂಗಾಲಾಗಿದ್ದ ರೆಮಾ ಹಾಗೂ ಅವರ ಮಗಳಿಗೆ ತಮ್ಮದೇ ಹಣದಲ್ಲಿ ನಿರ್ಮಿಸಿದ ಮನೆಯನ್ನು ಹಸ್ತಾಂತರ ಮಾಡಿದ್ದಾರೆ. ರೆಮಾ ಅವರ ಪತಿ ನಿಧನರಾಗಿದ್ದು, ಅವರು ಮತ್ತು ಅವರ ಮಗಳು ಒಂದೇ ಕೋಣೆಯ ಶೆಡ್‌ನಲ್ಲಿ ವಾಸಿಸುತ್ತಿದ್ದರು. ಅಕ್ಕಮ್ಮ ಅವರು ತಮ್ಮ ಹುಟ್ಟು ಹಬ್ಬದ ದಿನದಂದು ರೆಮಾ ಅವರ ಕುಟುಂಬಕ್ಕೆ ಮನೆ ನಿರ್ಮಿಸಲು 3.5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಟ್ಟಿದ್ದಾರೆ.

ಸಮಾಜ ಸೇವಕ ಸುನೀಲ್ ಅವರು ಅಕ್ಕಮ್ಮನಿಗೆ ರೆಮಾ ಅವರ ಕುಟುಂಬದ ಕರುಣಾಜನಕ ಜೀವನದ ಬಗ್ಗೆ ತಿಳಿಸಿದ್ದು, ಆ ನಂತರ ಅಕ್ಕಮ್ಮಾ ಈ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ಮನೆ ಎರಡು ಮಲಗುವ ಕೋಣೆ ಅಡಿಗೆ ಕೋಣೆ ಹಾಗೂ ಸ್ನಾನದ ಗೃಹವನ್ನು ಹೊಂದಿದ್ದು, ಸೂರಿಲ್ಲದೆ ಕಂಗಾಲಾಗಿದ್ದ ರೆಮಾ ಮತ್ತು ಅವರ ಮಗಳಿಗೆ ಒಂದು ಆಸರೆಯಾಗಿದೆ. ಸಮಾಜ ಸೇವಕ ಡಾ. ಸುನಿಲ್ ಅವರ ನೇತೃತ್ವದಲ್ಲಿ ನಿರ್ಮಿಸಲಾದ 142 ನೇ ಮನೆ ಇದಾಗಿದೆ.

Check Also

ನನ್ನಿಂದ ಇಷ್ಟೇ ಸಾಧ್ಯ ಇದರಿಂದ ಆ ಅನಾಥ ಮಕ್ಕಳಿಗೆ ಏನಾದರೂ ಖರೀದಿಸಿಕೊಡು

ಸಂದೇಶ ಇ-ಮ್ಯಾಗಝಿನ್: ನನ್ನನ್ನು ಅಪಾರವಾಗಿ ಕಾಡಿದ ಈ ವ್ಯಕ್ತಿಯ ಬಗ್ಗೆ ಬರೆಯಬೇಕು ಅಂತ ಬಯಸಿದೆ. ಇವರ ಹೆಸರು ಬಾಷಾ, 82 …

Leave a Reply

Your email address will not be published. Required fields are marked *