Tuesday , April 7 2020
Breaking News
Home / ಪ್ರವಾಸ / ಶ್ರೀಲಂಕಾದ ಆದಂ ಮಲೆಯ ಹಿಂದಿನ ಧಾರ್ಮಿಕ ಹಿನ್ನಲೆ

ಶ್ರೀಲಂಕಾದ ಆದಂ ಮಲೆಯ ಹಿಂದಿನ ಧಾರ್ಮಿಕ ಹಿನ್ನಲೆ

-ಎಸ್.ಎ.ರಹಿಮಾನ್ ಮಿತ್ತೂರು.

ದಕ್ಷಿಣ ಶ್ರೀಲಂಕಾದ ರತ್ನಪುರ ಜಿಲ್ಲೆಯಲ್ಲಿರುವ ಅತೀದೊಡ್ಡ ಶಿಖರವಾಗಿದೆ ಆ್ಯಡಮ್ಸ್ ಪೀಕ್ ಅಥವಾ ಆದಂ ಮಲೆ. 2243 ಮೀಟರ್ ಎತ್ತರವಿರುವ ಈ ಆದಂ ಮಲೆಯ ತುತ್ತ ತುದಿಯಲ್ಲಿ ಸುಮಾರು 6 ಅಡಿ ಉದ್ದ ಹಾಗೂ 2.5 ಅಡಿ ಅಗಲವಿರುವ ಒಂದು ಹೆಜ್ಜೆಯ ಗುರುತು ಇದೆ. ಈ ಹೆಜ್ಜೆಯ ಗುರುತು ಮನುಕುಲದ ಪಿತ ಆದಂ ನೆಬಿ(ಅ.ಸ) ರವರ ಪಾದದ ಗುರುತಾಗಿದೆ ಎಂದು ಹೇಳಲಾಗುತ್ತಿದೆ. ಮುಸಲ್ಮಾನರು ಹಾಗೂ ಕ್ರೈಸ್ತರು ಇದನ್ನು ಆದಮ್ ಹೆಜ್ಜೆಯ ಗುರುತು ಎಂದು ಹೇಳಿದರೆ ಬೌದ್ಧರು ಇದನ್ನು ಗೌತಮ ಬುದ್ಧನ ಪಾದದ ಗುರುತು ಎಂದು ಹೇಳುತ್ತಾರೆ. ಬೌದ್ಧರು ಇದನ್ನು ಶ್ರೀಪಾದ ಎಂದೂ ಕರೆಯುತ್ತಾರೆ.

ಸ್ವರ್ಗದಲ್ಲಿದ್ದ ಆದಂ ಹಾಗೂ ಹವ್ವಾ(ರ) ದಂಪತಿಗಳಲ್ಲಿ ಸರ್ವಶಕ್ತನಾದ ಅಲ್ಲಾಹನು ಸ್ವರ್ಗದ ಎಲ್ಲಾ ವಸ್ತುಗಳನ್ನು ನೀವು ತಿನ್ನಿರಿ ಆದರೆ ಒಂದು ಮರದ ಹಣ್ಣನ್ನು ನೀವು ತಿನ್ನ ಬೇಡಿ ಎಂದು ಆದೇಶಿಸುತ್ತಾನೆ. ಆದರೆ ಶೈತಾನ್ ಇಬ್ಲೀಸನ ಕೆಡುಕಿಗೆ ಪ್ರಚೋದಿತರಾಗಿ ಆದಂ ಹಾಗೂ ಅವ್ವಾ ನಿಷೇಧಿಸಲ್ಪಟ್ಟ ಆ ಹಣ್ಣನ್ನು ತಿನ್ನುವುದರೊಂದಿಗೆ ಅವರನ್ನು ಸ್ವರ್ಗದಿಂದ ಭೂಲೋಕಕ್ಕೆ ಕಳುಹಿಸಲಾಗುತ್ತದೆ.

ಭೂಲೋಕಕ್ಕೆ ಆದಂ(ಅ.ಸ)ರವರು ಪಾದಾರ್ಪಣೆ ಮಾಡಿದ ಸ್ಥಳವೇ ಆದಂ ಮಲೆ ಎಂಬ ಪ್ರತೀತಿ ಇದೆ. ಮಾತ್ರವಲ್ಲ ಈ ಆದಂ ಮಲೆಯಲ್ಲಿ ದೊರೆಯುವ ಬೆಲೆಬಾಳುವ ರತ್ನಗಳು, ಮಾಣಿಕ್ಯಗಳು ಹಾಗೂ ನೀಲಮಣಿಗಳು ವಿಶ್ವದಾದ್ಯಂತ ಬಹಳ ಖ್ಯಾತಿಯನ್ನು ಪಡೆದಿದೆ.

Leave a Reply

Your email address will not be published. Required fields are marked *