Sunday , January 26 2020
Breaking News
Home / ಪ್ರವಾದಿ ಚಿಕಿತ್ಸೆ / ಪಾರಿವಾಳದ ಮಾಂಸ- ಪ್ರವಾದಿ ಚಿಕಿತ್ಸೆ

ಪಾರಿವಾಳದ ಮಾಂಸ- ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ನಿಮಗೆ ಪಾರಿವಾಳ ತಿಳಿದಿದೆಯೇ? ಯಾರಿಗೆ ತಾನೆ ತಿಳಿದಿಲ್ಲ ಅಲ್ಲವೇ! ಈ ಪಕ್ಷಿ ನೋಡಲು ತುಂಬಾ ಸುಂದರವಾಗಿರುತ್ತದೆ. ತನ್ನ ವಿಶೇಷವಾದ ಮೋಡಿ, ಗೊಣಗುವಿಕೆಯಿಂದಾಗಿ ಈ ಪಕ್ಷಿಯನ್ನು ಎಲ್ಲಿ ಬೇಕಾದರೂ ಗುರುತಿಸಬಹುದು. ಇದನ್ನು ಶಾಂತಿಯ ಸಂಕೇತ ಎಂದು ಕರೆಯುತ್ತಾರೆ. ಅಕಶೇರುಕ ವರ್ಗಕ್ಕೆ ಸೇರಿದ ಈ ಪಕ್ಷಿ ಪ್ರಪಂಚದಾದ್ಯಂತ ಕಂಡುಬರುತ್ತದೆ. ಇದರ ಮಾಂಸ ಬಹಳ ರುಚಿಕರವಾದ ಮತ್ತು ಪೌಷ್ಟಿಕ ಆಹಾರವಾಗಿದೆ. ಪಾರಿವಾಳದ ಮಾಂಸದಲ್ಲಿ ಹಲವಾರು ವೈದ್ಯಕೀಯ ಲಾಭಗಳು ಅಡಕವಾಗಿದೆ. ಇದನ್ನು ಆಧುನಿಕ ವೈದ್ಯಕೀಯ ವಿಜ್ಞಾನ ಕೂಡ ದೃಢಪಡಿಸಿದೆ. ಪ್ರವಾದಿ ಮೊಹಮ್ಮದ್(ಸ)ರವರ ಹದೀಸ್‌ಗಳಲ್ಲೂ ಇದನ್ನು ಕಾಣಬಹುದು. ಇಮಾಮ್ ಇಬ್ನ್ ಅಲ್ ಕಯ್ಯಿಮ್ ಅಲ್ ಜವ್‌ಝಿಯ್ಯ(ರಹಿಮಹುಲ್ಲಾಹ್) ರವರು ರಚಿಸಿದ ‘ತಿಬ್ಬುನ್ನಬಿಯ್ಯ್ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮ್’ ಗ್ರಂಥದಲ್ಲಿ ಇದನ್ನು ವಿವರವಾಗಿ ತಿಳಿಸಲಾಗಿದೆ.

ಇಮಾಮ್ ಇಬ್ನ್ ಅಲ್ ಕಯ್ಯಿಮ್ ಅವರು ತಮ್ಮ ಗ್ರಂಥದಲ್ಲಿ ಹೇಳುವಂತೆ, “ಪಾರಿವಾಳದ ಮಾಂಸ ಬಿಸಿ ಮತ್ತು ತೇವವಾಗಿರುತ್ತದೆ. ಆದಾಗ್ಯೂ ಕಾಡು ಪಾರಿವಾಳದ ಮಾಂಸವು ಕಡಿಮೆ ಆರ್ದ್ರವಾಗಿರುತ್ತದೆ. ಪಾರಿವಾಳದ ಮರಿಗಳ ಮಾಂಸವು ಹೆಚ್ಚು ಆರ್ದ್ರತೆಯುಳ್ಳದ್ದಾಗಿರುತ್ತದೆ. ವಿಶೇಷವಾಗಿ ಸಾಕು ಪಾರಿವಾಳದ ಮರಿ. ಯುವ ಪಾರಿವಾಳಗಳು ಕಡಿಮೆ ಮಾಂಸಭರಿತವಾಗಿರುತ್ತದೆ ಆದರೆ ಇದು ಉತ್ತಮ ಆಹಾರ. ಗಂಡು ಪಾರಿವಾಳದ ಮಾಂಸವು ಮರಗಟ್ಟುವಿಕೆ, ಸಂವೇದನಾ ಶೂನ್ಯತೆ (ನರ್ಕೊಸಿಸ್), ಮಿದುಳು ಲಕ್ವ (ಅಪೊಪೆಕ್ಸಿ) ಮತ್ತು ಅಪಸ್ಮಾರ (ಕೊನ್‌ವಲ್ಸಿವ್) ಅಥವಾ ನಡುಕಗಳಿಗೆ ಉತ್ತಮ ಚಿಕಿತ್ಸೆಯಾಗಿದೆ. ಮರಿ ಪಾರಿವಾಳದ ಮಾಂಸವು ಲೈಂಗಿಕ ಚಟುವಟಿಕೆಗಳಿಗೆ ಮತ್ತು ಮೂತ್ರಪಿಂಡ(ಕಿಡ್ನಿ) ರೋಗಗಳಿಗೆ ಅನುಕೂಲಕರವಾಗಿದೆ ಮತ್ತು ಹೆಚ್ಚು ಹೆಚ್ಚು ರಕ್ತವನ್ನು ಉತ್ಪಾದಿಸುತ್ತದೆ.”

Check Also

ಬಾಳೆಹಣ್ಣು ಸೇವನೆಯ ಪ್ರಯೋಜನಗಳು -ಪ್ರವಾದಿ ಚಿಕಿತ್ಸೆ

ಸಂದೇಶ ಇ-ಮ್ಯಾಗಝಿನ್: ಬಾಳೆಹಣ್ಣು ಒಂದು ಉತ್ತಮ ಆಹಾರ ಇದರ ಸೇವನೆಯ ಆರೋಗ್ಯಕಾರಕ ಪ್ರಯೋಜನಗಳನ್ನು ಪ್ರವಾದಿ ಮುಹಮ್ಮದ್(ಸ)ರವರ ಹದೀಸ್ ಗಳಲ್ಲೂ ಹೇಳಲಾಗಿದೆ. …

Leave a Reply

Your email address will not be published. Required fields are marked *