Tuesday , April 7 2020
Breaking News
image credit: scroll.in
Home / ರಾಜ್ಯ / ರಾಜ್ಯದ ಏಕೈಕ ಬಿಎಸ್ಪಿ ಶಾಸಕ ಎನ್. ಮಹೇಶ್ ಪಕ್ಷದಿಂದ ಉಚ್ಛಾಟನೆ

ರಾಜ್ಯದ ಏಕೈಕ ಬಿಎಸ್ಪಿ ಶಾಸಕ ಎನ್. ಮಹೇಶ್ ಪಕ್ಷದಿಂದ ಉಚ್ಛಾಟನೆ

ಸಂದೇಶ ಇ-ಮ್ಯಾಗಝಿನ್: ಕರ್ನಾಟಕದ ಮೈತ್ರಿ ಸರಕಾರದ ಪರ ಮತ ಹಾಕದೆ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾರಣ ರಾಜ್ಯದ ಏಕೈಕ ಬಿಎಸ್ಪಿ ಶಾಸಕ ಎನ್. ಮಹೇಶ್ ಅವರನ್ನು ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ. “ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರವನ್ನು ಬೆಂಬಲಿಸಿ ಮತ ಚಲಾಯಿಸುವ ಪಕ್ಷವು ಹೈಕಮಾಂಡ್ ನಿರ್ದೇಶನವನ್ನು ಎನ್. ಮಹೇಶ್ ಉಲ್ಲಂಘಿಸಿದ್ದಾರೆ. ಇದನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದೆ. ಇದರಿಂದಾಗಿ ತಕ್ಷಣಕ್ಕೆ ಜಾರಿಯಾಗುವಂತೆ ಎನ್.ಮಹೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ” ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ. ಕೊಳ್ಳೆಗಾಲದ ಶಾಸಕರಾಗಿರುವ ಎನ್. ಮಹೇಶ್ ಸದನಕ್ಕೆ ಗೈರಾಗಿದ್ದು, ವಿಶ್ವಾಸಮತಯಾಚನೆಯಿಂದ ದೂರ ಉಳಿದಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಸಿ ಎಸ್ ದ್ವಾರಕನಾಥ್, “ಎನ್. ಮಹೇಶ್ ಅವರು ಇಂದು ಸದನಕ್ಕೆ ಹಾಜರಾಗಿ ಕಾಂಗ್ರೇಸ್, ಜೆಡಿಎಸ್ ಮತ್ತು ಬಿಜೆಪಿ ಮೂರೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂದು ಕೊನೆಯವರೆಗೂ ಕಾದೆ, ಆದರೆ ಅವರು ಕೊನೆಗೂ ಬರಲೇ ಇಲ್ಲ. ಅವರು ಯಾವ ಕಾರಣಕ್ಕೆ ಗೈರು ಹಾಜರಾದರೆಂದು ತಿಳಿದಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Check Also

ಅಪಘಾತವಾದರೂ ಹನಿ ನೀರು ಕುಡಿಯದೆ ಮೃತಪಟ್ಟ ಉಪವಾಸಿಗ ಶಿಕ್ಷಕ

ಸಂದೇಶ ಇ-ಮ್ಯಾಗಝಿನ್: ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಶಾಲಾ ಶಿಕ್ಷಕರೊಬ್ಬರು ಅಪಘಾತವಾದರೂ ಉಪವಾಸ ಮುರಿಯುತ್ತೆ ಎಂದು ಹನಿ ನೀರು ಮುಟ್ಟದೆ …

Leave a Reply

Your email address will not be published. Required fields are marked *