Tuesday , April 7 2020
Breaking News
Home / ಇಸ್ಲಾಮಿಕ್ ಲೇಖನಗಳು / ಈ 6 ವಿಭಾಗದ ಜನರ ಪ್ರಾರ್ಥನೆಗಳನ್ನು ಅಲ್ಲಾಹನು ನಿರಾಕರಿಸಲಾರ ಎಂದು ಹದೀಸ್‌ಗಳಲ್ಲಿ ಬಂದಿದೆ

ಈ 6 ವಿಭಾಗದ ಜನರ ಪ್ರಾರ್ಥನೆಗಳನ್ನು ಅಲ್ಲಾಹನು ನಿರಾಕರಿಸಲಾರ ಎಂದು ಹದೀಸ್‌ಗಳಲ್ಲಿ ಬಂದಿದೆ

ಸರ್ವಶಕ್ತನಾದ ಅಲ್ಲಾಹನೊಂದಿಗೆ ದುವಾ ಮಾಡಲು ಅಂಗಶುದ್ಧಿಯ ಅಗತ್ಯವಿಲ್ಲ ಎಂದು ಹೆಚ್ಚಿನ ಧಾರ್ಮಿಕ ವಿದ್ವಾಂಸರು ಹೇಳಿದ್ದಾರೆ. ಆದರೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಹೃದಯದ ಶುದ್ಧತೆ ಮತ್ತು ಪದಗಳಲ್ಲಿನ ಪ್ರಾಮಾಣಿಕತೆ ಪ್ರಾರ್ಥನೆಗೆ ಅತೀ ಮುಖ್ಯವಾಗಿದೆ. ಪ್ರವಾದಿ ಮುಹಮ್ಮದ್ (ಸ) ಅವರು ಹೇಳುವ ಪ್ರಕಾರ ಒಬ್ಬ ಮುಸ್ಲಿಂ ಅವನು ಪಾಪ ಅಥವಾ ರಕ್ತಸಂಬಂಧದ ಸಂಬಂಧಗಳನ್ನು ಮುರಿಯುವಂತಹ ಯಾವುದನ್ನಾದರೂ ಪ್ರಾರ್ಥಿಸುವವರೆಗೆ ಆತ ತನ್ನ ಸೃಷ್ಟಿಕರ್ತನಾದ ಅಲ್ಲಾಹನೊಂದಿಗೆ ದುವಾ(ಪ್ರಾರ್ಥನೆ) ಮಾಡಿದಾಗಲೆಲ್ಲಾ, ಅವನು (ಅಲ್ಲಾಹನು) ತನ್ನ ದಾಸನ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ ಅಥವಾ ಅವನಿಗೆ ಸಂಭವಿಸ ಬಹುದಾದ ಯಾವುದಾದರೂ ರೀತಿಯ ತೊಂದರೆಗಳನ್ನು ತಪ್ಪಿಸುತ್ತಾನೆ. ಇಲ್ಲಿ ಈ 6 ವಿಭಾಗದ ಜನರ ಪ್ರಾರ್ಥನೆಯನ್ನು ಯಾವಾಗಲೂ ಅಲ್ಲಾಹನು ಸ್ವೀಕರಿಸುತ್ತಾನೆ ಎಂದು ಪ್ರವಾದಿ ವಚನಗಳಲ್ಲಿ ಬಂದಿದೆ. ಆ 6 ವಿಭಾಗದ ಜನರು ಯಾರೆಮ್ದು ನೋಡೋಣ ಬನ್ನಿ.

1. ಉಪವಾಸಿಗ ವ್ಯಕ್ತಿಯ ಪ್ರಾರ್ಥನೆ:
ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ; ಉಪವಾಸ ವೃತ ಮಾಡಿರುವ ವ್ಯಕ್ತಿಯು ತನ್ನ ಉಪವಾಸವನ್ನು ಮುರಿಯುವ ಸಮಯದಲ್ಲಿ ಮಾಡುವ ಪ್ರಾರ್ಥನೆಗಳನ್ನು ನಿರಾಕರಿಸಲಾಗುವುದಿಲ್ಲ.” (ಸುನಾನ್ ಇಬ್ನ್ ಮಾಜಾ ಪುಸ್ತಕ 7, ಹದೀಸ್ 1825)

2. ಅನಾರೋಗ್ಯ ಪೀಡಿತ ವ್ಯಕ್ತಿಯ ಪ್ರಾರ್ಥನೆ:
ಉಮರ್ ಬಿನ್ ಅಲ್-ಖತ್ತಾಬ್ ಹೀಗೆ ಹೇಳಿದರು: “ಪ್ರವಾದಿ (ಸ) ಅವರು ನನಗೆ ಹೀಗೆ ಹೇಳಿದರು:’ “ನೀವು ಅನಾರೋಗ್ಯದಿಂದ ಬಳಲುತ್ತಿರುವವರ ಬಳಿ ಹೋದಾಗ, ನಿಮಗಾಗಿ ಪ್ರಾರ್ಥಿಸಲು ಹೇಳಿ, ಏಕೆಂದರೆ ಅವರ ಪ್ರಾರ್ಥನೆಯು ದೇವಚರರ ಪ್ರಾರ್ಥನೆಯಂತಿದೆ. (ಸುನಾನ್ ಇಬ್ನ್ ಮಾಜಾ)

3. ತನ್ನ ಮಕ್ಕಳಿಗಾಗಿ ತಂದೆಯ ಪ್ರಾರ್ಥನೆ:
ಪ್ರವಾದಿ ಮುಹಮ್ಮದ್ (ಸ) ಹೀಗೆ ಹೇಳಿದರು ಎಂದು ಅಬು ಹುರೈರಾ(ರ) ವಿವರಿಸಿದ್ದಾರೆ: “ಮೂರು ಪ್ರಾರ್ಥನೆಗಳನ್ನು ಸ್ವೀಕರಿಸಲಾಗುವುದು, ಅವುಗಳಲ್ಲಿ ಯಾವುದೇ ಸಂದೇಹವಿಲ್ಲ. ಅನ್ಯಾಯಕ್ಕೊಳಗಾದವರ ಪ್ರಾರ್ಥನೆ, ಪ್ರಯಾಣಿಕರ ಪ್ರಾರ್ಥನೆ ಮತ್ತು ತನ್ನ ಮಗನಿಗಾಗಿ ತಂದೆಯ ಪ್ರಾರ್ಥನೆ . (ಜಾಮೀ ತಿರ್ಮಿಧಿ 1905)

4. ಅನ್ಯಾಯಕ್ಕೊಳಗಾದವನ ಪ್ರಾರ್ಥನೆ:
ಅನ್ಯಾಯಕ್ಕೊಳಗಾದವರ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸುತ್ತಾನೆ ಎಂದು ಹಲವಾರು ಹದೀಸ್ ಗಳಲ್ಲಿ ಬಂದಿದೆ. ಆಯಿಷಾ(ರ) ಹೀಗೆ ಹೇಳಿದರು: ಅಲ್ಲಾಹನ ಸಂದೇಶ ವಾಹಕರು (ಸ) ಹೇಳಿದರು: “ತನಗೆ ಅನ್ಯಾಯ ಮಾಡಿದವನ ವಿರುದ್ಧ ಯಾರು ಬೇಡಿಕೊಂಡರೂ ಅವರ ಪ್ರಾರ್ಥನೆಯನ್ನು ಅಲ್ಲಾಹನು ನಿರಾಕರಿಸಲಾರ. (ಜಾಮೀ ತಿರ್ಮಿಧಿ 3552)

5. ಮುಸ್ಲಿಮನೊಬ್ಬ ಇನ್ನೊಬ್ಬ ಮುಸ್ಲಿಮನ ಅನುಪಸ್ಥಿತಿಯಲ್ಲಿ ಅವನಿಗಾಗಿ ಮಾಡುವ ಪ್ರಾರ್ಥನೆ:
ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮುಸ್ಲಿಂ ಸಹೋದರನಿಗೆ ಮಾಡುವ ಪ್ರಾರ್ಥನೆಯನ್ನು ಎಂದಿಗೂ ಹಿಂದಿರುಗಿಸಲಾಗುವುದಿಲ್ಲ. ಅದಕ್ಕೆ ಖಂಡಿತವಾಗಿಯೂ ಉತ್ತರಿಸಲಾಗುವುದು ಎಂದು ಹಲವಾರು ಹದೀಸ್ ಗಳಲ್ಲಿ ಬಂದಿದೆ.

ಉಮ್ ದರ್ದಾ(ರ) ವರದಿ ಮಾಡಿದ ಹದೀಸ್: ಅಲ್ಲಾಹನ ಸಂದೇಶವಾಹಕರು (ಸ) ಹೀಗೆ ಹೇಳಿದ್ದನ್ನು ನನ್ನ ಪತಿ ಕೇಳಿದ್ದಾರೆಂದು ನನ್ನ ಬಳಿ ಹೇಳಿದ್ದಾರೆ: ತನ್ನ ಮುಸ್ಲಿಮ್ ಸಹೋದರನಿಗೆ ಅವನ ಅನುಪಸ್ಥಿತಿಯಲ್ಲಿ ಪ್ರಾರ್ಥಿಸುವವನ ಪ್ರಾರ್ಥನೆಗೆ ದೇವಚರರು ಆಮೀನ್ ಹೇಳುತ್ತಾರೆ. ಈ ಪ್ರಾರ್ಥನೆ ಇಬ್ಬರಿಗೂ ಫಲ ನೀಡುತ್ತದೆ. (ಸಹೀಹ್ ಮುಸ್ಲಿಂ 2732)

6. ಪ್ರಯಾಣಿಕನ ಪ್ರಾರ್ಥನೆ:
ಮೇಲೆ ಉಲ್ಲೇಖಿಸಿದ ಹದೀಸ್‌ನಲ್ಲಿ ವಿವರಿಸಿರುವಂತೆ ಪ್ರಯಾಣದಲ್ಲಿರುವವರ ಪ್ರಾರ್ಥನೆಯನ್ನು ಅಲ್ಲಾಹನು ಯಾವಾಗಲೂ ಸ್ವೀಕರಿಸುತ್ತಾನೆ ಎಂದು ಇನ್ನೂ ಹಲವಾರು ಹದೀಸ್ ವರದಿಗಳಲ್ಲಿ ಉಲ್ಲೇಖಿತವಾಗಿದೆ.

ಇವುಗಳಲ್ಲದೆ ಅಲ್ಲಾಹನೊಂದಿಗೆ ಮಾಡುವ ಪ್ರಾರ್ಥನೆಗಳಿಗೆ ಅಲ್ಲಾಹನು ಉತ್ತರಿಸುವ ಕೆಲವು ಸಮಯಗಳು ಹದೀಸಿನಲ್ಲಿ ಉಲ್ಲೇಖಿಸಲಾಗಿದೆ. ರಾತ್ರಿಯ ಕೊನೆಯ ಸಮಯದಲ್ಲಿ, ಮುಂಜಾನೆಯ ಮೊದಲು, ನಮಾಝ್‌ಗಾಗಿ ಕರೆ ನೀಡಿದ ನಂತರ ಇಕಾಮಾ ಕೊಡುವವರೆಗಿನ ಸಮಯ, ಝಮ್ ಝಮ್ ನೀರು ಕುಡಿಯುವಾಗ, ಶುಕ್ರವಾರದ ಒಂದು ನಿರ್ದಿಷ್ಟ ಘಳಿಗೆಯಲ್ಲಿ(ಆ ಘಳಿಗೆ ಯಾವುದೆಂದು ಸರಿಯಾಗಿ ಉಲ್ಲೇಖಿಸಲ್ಪಟ್ಟಿಲ್ಲ).

Check Also

ನಾನೆಂದಿಗೂ ಅನ್ಯಪುರುಷರನ್ನು ನೋಡಿಲ್ಲ-ಪ್ರವಾದಿ ಪುತ್ರಿಯ ಅಂತಿಮ ಇಚ್ಛೆ

ಪ್ರವಾದಿ ಮುಹಮ್ಮದ್(ಸ.ಅ)ರವರ ಪ್ರೀತಿಯ ಮಗಳು ಹಾಗೂ ಹಝ್ರತ್ ಅಲಿ(ರ.ಅ)ರವರ ಪ್ರೀತಿಯ ಮಡದಿಯಾಗಿದ್ದಾರೆ ಪ್ರಪಂಚದ ಸರ್ವ ಸ್ರೀಯರಿಗೂ ಮಾದರಿಯಾದ ಮಹಿಳಾಮಣಿ ಫಾತಿಮಾ …

Leave a Reply

Your email address will not be published. Required fields are marked *