Friday , November 15 2019
Breaking News
Home / ಗಲ್ಫ್ ಸುದ್ದಿ / ಸೌದಿ: ತನ್ನ ಕಫೀಲ್ ಮಗಳನ್ನು ಮದುವೆಯಾಗಿ ಇಕ್ಕಟ್ಟಿಗೆ ಸಿಲುಕಿದ ಹೈದರಾಬಾದ್ ಯುವಕ

ಸೌದಿ: ತನ್ನ ಕಫೀಲ್ ಮಗಳನ್ನು ಮದುವೆಯಾಗಿ ಇಕ್ಕಟ್ಟಿಗೆ ಸಿಲುಕಿದ ಹೈದರಾಬಾದ್ ಯುವಕ

ಸಂದೇಶ ಇ-ಮ್ಯಾಗಝಿನ್: ತೆಲಂಗಾಣ ರಾಜ್ಯದ ನಿರ್ಮಲ್ ಜಿಲ್ಲೆಯ ಮೂಲದ ಅಜೀಮುದ್ದೀನ್ ಎಂಬ 30 ವರ್ಷದ ಯುವಕ ತನ್ನ ಕಫೀಲ್ (ಪ್ರಾಯೋಜಕ) ಮಗಳಾದ ಸೌದಿ ಹುಡುಗಿಯನ್ನು ಮದುವೆಯಾದ ಕಾರಣ ಜೈಲಲ್ಲಿ ಕೊಳೆಯಬೇಕಾಗಿ ಬಂದ ಅಪರೂಪದ ಪ್ರಕರಣ ವರದಿಯಾಗಿದೆ. ಜೆದ್ದಾದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ (ಸಿಜಿಐ) ಅಧಿಕಾರಿಗಳು ಕಫೀಲ್ ರನ್ನು ಸಂಪರ್ಕಿಸಿ ಅಜೀಮುದ್ದೀನ್ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಕೇಳಿಕೊಂಡರು. ಆದರೆ, ಕಫೀಲ್ ಅದನ್ನು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಾಂಧರ್ಭಿಕ ಚಿತ್ರ

ಸೌದಿ ಅರೇಬಿಯಾದಲ್ಲಿ ಹೌಸ್ ಡ್ರೈವರ್ ಆಗಿದ್ದ ಅಜೀಮುದ್ದೀನ್ ತನ್ನ ಕಫೀಲ್ (ಪ್ರಾಯೋಜಕ) ರ 27 ವರ್ಷದ ಮಗಳ ಪ್ರೀತಿಗೆ ಬಿದ್ದಿದ್ದ ಎನ್ನಲಾಗಿದೆ. 2018 ರ ಜನವರಿಯಲ್ಲಿ ಅಜೀಮುದ್ದೀನ್ ಭಾರತದ ತನ್ನ ಮನೆಗೆ ಬಂದಿದ್ದ. ಕೆಲವು ತಿಂಗಳುಗಳ ನಂತರ ಸೌದಿ ಯುವತಿ ಓಮಾನ್‌ಗೆ ಹೋಗುವುದಾಗಿ ಮನೆಯಲ್ಲಿ ಒಪ್ಪಿಗೆ ಪಡೆದು ನೇಪಾಳದ ವಿಮಾನಕ್ಕೆ ಹತ್ತಿ ನೇಪಾಳ ತಲುಪಿದ್ದಳು. ಆಕೆಯನ್ನು ನೇಪಾಳದಿಂದ ಭಾರತಕ್ಕೆ ಕರೆತಂದ ಅಜೀಮುದ್ದೀನ್ ಆ ಬಳಿಕ ಆಕೆಯನ್ನು ಮದುವೆಯಾಗಿದ್ದರು.

ಮದುವೆಯಾಗಿ ಕೆಲವು ತಿಂಗಳುಗಳ ನಂತರ ಯುವತಿ ತನ್ನ ಹೆತ್ತವರನ್ನು ಭೇಟಿಯಾಗಲು ಸೌದಿ ಅರೇಬಿಯಾಕ್ಕೆ ಹಿಂದಿರುಗಿದಳು. ನಂತರ, ಅಲ್ಲಿ ಹೋದ ನಂತರ ಆಕೆ ಅಜೀಮುದ್ದೀನ್‌ಗೆ ವೀಸಾ ಕಳುಹಿಸಿದಳು. ಮದುವೆಗೆ ವಿರುದ್ಧವಾಗಿದ್ದ ಯವತಿಯ ಪೋಷಕರು ಸೌದಿ ಅರೇಬಿಯಾದಲ್ಲಿ ಅಜೀಮುದ್ದೀನ್ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದರು. ಯುವತಿ ಕಳುಹಿಸಿದ ವಿಸಾದಲ್ಲಿ ಸೌದಿ ತಲುಪಿದ ಅಜೀಮುದ್ದೀನ್‌ರನ್ನು ಜಿದ್ದಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ಸಾಂಧರ್ಭಿಕ ಚಿತ್ರ

ಈಗ ಅಜೀಮುದ್ಧೀನ್ ವಿರುದ್ಧದ ಅಪಹರಣ ಪ್ರಕರಣವನ್ನು ಹಿಂಪಡೆಯಲು ಯುವತಿಯ ತಂದೆ ಕಫೀಲ್ ನಿರಾಕರಿಸಿದ್ದಾರೆ. ಇತ್ತ ಮದುವೆಯಾದ ಪತ್ನಿಯೂ ಇಲ್ಲ…ಅತ್ತ ಊರಿಗೂ ಬರಲಾಗದೆ, ಅಜೀಮುದ್ಧೀನ್ ಇದೀಗ ಸೌದಿಯಲ್ಲಿ ಜೈಲು ಪಾಲಾಗಿದ್ದು, ಅಜೀಮುದ್ಧೀನ್ ತಾಯಿ ಜೆದ್ದಾದ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿ ಅಮ್ಜದುಲ್ಲಾಹ್ ಖಾನ್ ಅವರಿಗೆ ಮನವಿ ಮಾಡಿ ಅಜೀಮುದ್ಧೀನ್ ಬಿಡುಗಡೆಗೆ ಸಹಕರಿಸುವಂತೆ ವಿನಂತಿಸಿದ್ದರು. ಅದರಂತೆ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಅಧಿಕಾರಿಗಳು ಪ್ರಯತ್ನಿಸಿದರೂ ಯಾವುದೇ ಫಲ ನೀಡಲಿಲ್ಲ. ಆದಾಗ್ಯೂ ಯುವಕನ ಬಿಡುಗಡೆಗೆ ಎಲ್ಲಾ ಸಾಧ್ಯ ಪ್ರಯತ್ನಗಳನ್ನು ಮಾಡುವುದಾಗಿ ಅಮ್ಜದುಲ್ಲಾಹ್ ಖಾನ್ ತಿಳಿಸಿದ್ದಾರೆ.

Check Also

ಕ್ರೈಸ್ಟ್ ಚರ್ಚ್ ದಾಳಿ ಸಂತ್ರಸ್ತರ 200 ಕುಟುಂಬಸ್ಥರಿಗೆ ದೊರೆ ಸಲ್ಮಾನ್ ರಿಂದ ಹಜ್ ಕೊಡುಗೆ

ಸಂದೇಶ ಇ-ಮ್ಯಾಗಝಿನ್: ಕ್ರೈಸ್ಟ್‌ಚರ್ಚ್ ಭಯೋತ್ಪಾದಕ ದಾಳಿಯ ಸಂತ್ರಸ್ತರ 200 ಕುಟುಂಬ ಸದಸ್ಯರಿಗೆ ಈ ಬಾರಿಯ ಹಜ್ ಆತಿಥ್ಯ ವಹಿಸುವಂತೆ ಸೌದಿ …

Leave a Reply

Your email address will not be published. Required fields are marked *