Tuesday , July 23 2019
Breaking News
Home / ಟೆಕ್ನಾಲಜಿ / ಪ್ರತೀ ತಿಂಗಳು ಮೊಬೈಲ್ ವ್ಯಾಲಿಡಿಟಿಗೆ 35 ರೂ. ರೀಚಾರ್ಜ್ ಇದನ್ನು ಹೇಗೆ ತಪ್ಪಿಸಬಹುದು?

ಪ್ರತೀ ತಿಂಗಳು ಮೊಬೈಲ್ ವ್ಯಾಲಿಡಿಟಿಗೆ 35 ರೂ. ರೀಚಾರ್ಜ್ ಇದನ್ನು ಹೇಗೆ ತಪ್ಪಿಸಬಹುದು?

ಸಂದೇಶ ಇ-ಮ್ಯಾಗಝಿನ್: ಈ ಹಿಂದೆ ಮೊಬೈಲ್ ಕಂಪೆನಿಗಳು ಸಿಮ್ ಕಾರ್ಡ್ ಪರ್ಚೇಸ್ ಮಾಡುವಾಗ ಲೈಫ್ ಟೈಮ್ ವ್ಯಾಲಿಡಿಟಿ ಕೊಡುತ್ತಿದ್ದವು. ಆದರೆ ಕಳೆದ ತಿಂಗಳಿಂದ ಕೆಲವು ಮೊಬೈಲ್ ಕಂಪೆನಿಗಳು ಈ ಲೈಫ್ ಟೈಮ್ ವ್ಯಾಲಿಡಿಟಿಯನ್ನು ತೆಗೆದು ಹೊಸ ರೂಲ್ ಮಾಡಿದ್ದಾರೆ. ಈ ಮೊಬೈಲ್ ಕಂಪೆನಿಗಳ ಹೊಸ ನಿಯಮದ ತಿಂಗಳಿಗೆ 35 ರೂ. ರೀಚಾರ್ಜ್ ಮಾಡಿದರೆ ಮಾತ್ರ ನಿಮಗೆ ಒಂದು ತಿಂಗಳು ವ್ಯಾಲಿಡಿಟಿ ಸಿಗೋದು ಇಲ್ಲಾ ಅಂದ್ರೆ ನಿಮ್ಮ ವ್ಯಾಲಿಡಿಟಿ ಖತಂ. ನಿಮಗೆ ಒಳ ಬರುವ ಮತ್ತು ಹೊರ ಹೋಗುವ ಕರೆಗಳನ್ನು ಕಟ್ ಮಾಡುತ್ತಾರೆ.

ಇದೊಂದು ಹಗಲು ದರೋಡೆಯಾಗಿದ್ದು ಮೊಬೈಲ್ ಕಂಪೆನಿಗಳು ಗ್ರಾಹಕರನ್ನು ಬಲವಂತವಾಗಿ ರೀಚಾರ್ಜ್ ಮಾಡುವಂತೆ ಈ ಮೂಲಕ ಒತ್ತಾಯಿಸುತ್ತಿದೆ. ಅದಕ್ಕೆ ಕಾರಣವೂ ಇದೆ. ರಿಲಾಯನ್ಸ್ ಜಿಯೋ ಬಂದ ನಂತರ ಮೊಬೈಲ್ ಕಂಪೆನಿಗಳೆಲ್ಲವೂ ನಷ್ಟದಲ್ಲಿದೆ ಎಂದು ಹೇಳಲಾಗುತ್ತಿದೆ. ಅದೂ ಅಲ್ಲದೆ ಈಗ ವಾಟ್ಸಾಪ್ ಫೇಸ್ಬುಕ್ ನಂತಹ ಆಪ್ ಗಳು ಜನರಿಗೆ ಫ್ರೀಕಾಲ್ ಸೇವೆ ನೀಡುತ್ತಿದ್ದು, ಇವುಗಳೆಲ್ಲವುಗಳಿಂದಾಗಿ ಇದೀಗ ಮೊಬೈಲ್ ರೀಚಾರ್ಜ್ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕಾಗಿ ಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಈ ಹಿಂದೆ ನೀಡಲಾಗಿದ್ದ ಲೈಫ್ ಟೈಮ್ ವ್ಯಾಲಿಡಿಟಿಯನ್ನು ಮೋಸ ದಿಂದ ತೆಗೆದು ಹಾಕಿ ಒಂದು ತಿಂಗಳ ವ್ಯಾಲಿಡಿಟಿ ನಿಯಮ ಜಾರಿಗೆ ತಂದಿವೆ.

ಕೆಲವರು ಮನೆಯಲ್ಲಿ ಕಾಲ್ ರಿಸೀವ್ ಮಾಡುವ ಸಲುವಾಗಿ ಮಾತ್ರ ಲ್ಯಾಂಡ್ ಲೈನ್ ಕಟ್ ಮಾಡಿ ಮೊಬೈಲ್ ಇಟ್ಟಿರುತ್ತಾರೆ. ಅಂತಹವರಿಗೆ ಇಂತಹ ನಿಯಮಗಳಿಂದ ತುಂಬಾ ಕಿರಿಕಿರಿಯಾಗಿದೆ. ಮೊಬೈಲ್ ನಲ್ಲಿ ಎರಡೆರಡು ಸಿಮ್ ಬಳಸುವವರು ಅದರಲ್ಲಿ ಒಂದನ್ನು ಮಾತ್ರ ರೀಚಾರ್ಜ್ ಮಾಡುತ್ತಿದ್ದವರು ಇದೀಗ ಬಲವಂತವಾಗಿ ಎರಡಕ್ಕೂ ರೀಚಾರ್ಜ್ ಮಾಡುವಂತಾಗಿದೆ. ಇದು ಒಂದು ರೀತಿಯ ಮೋಸ ಅಂತಾನೆ ಹೇಳಬಹುದು.

ಇದನ್ನು ತಪ್ಪಿಸಲು ಗ್ರಾಹಕರು ಏನು ಮಾಡಬೇಕು ಎಂಬುದು ಪ್ರಶ್ನೆ. ಒಂದೇ ದಾರಿ ಇರುವುದು ಅದೇನೆಂದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ರಿಲಾಯನ್ಸ್ ಜಿಯೋ ಅಥವಾ ಬಿಎಸ್‌ಎನ್‌ಎಲ್‍ಗೆ ಪೋರ್ಟ್ ಮಾಡಿ ಈ ಸಮಸ್ಯೆಯನ್ನು ತಪ್ಪಿಸಬಹುದು. ಏಕೆಂದರೆ ಸದ್ಯಕ್ಕೆ ಈ ಎರಡು ಕಂಪೆನಿಗಳಲ್ಲಿ ಈ ಹೊಸ ನಿಯಮ ಜಾರಿಯಾಗಿಲ್ಲ.

Check Also

ನಡೆದಾಡಲು ಸಾಧ್ಯವಾಗದ ಪತ್ನಿಗಾಗಿ ಆತ ನಿರ್ಮಿಸಿದ ರಿಮೋಟ್ ಕಂಟ್ರೋಲ್ ಬೆಡ್

001ಸಂದೇಶ ಇ-ಮ್ಯಾಗಝಿನ್: ರೋಗದಿಂದಾಗಿ ನಡೆದಾಡಲು ಸಾಧ್ಯವಾಗದ ತನ್ನ ಪತ್ನಿಗಾಗಿ ತಮಿಳುನಾಡಿನ ವ್ಯಕ್ತಿಯೋರ್ವ ರಿಮೋಟ್ ಕಂಟ್ರೋಲ್ ಬೆಡ್ ನಿರ್ಮಿಸಿದ್ದಾರೆ. ಈ ಒಂದು …

Leave a Reply

Your email address will not be published. Required fields are marked *