Tuesday , April 7 2020
Breaking News
Home / ಟೆಕ್ನಾಲಜಿ / ನಡೆದಾಡಲು ಸಾಧ್ಯವಾಗದ ಪತ್ನಿಗಾಗಿ ಆತ ನಿರ್ಮಿಸಿದ ರಿಮೋಟ್ ಕಂಟ್ರೋಲ್ ಬೆಡ್

ನಡೆದಾಡಲು ಸಾಧ್ಯವಾಗದ ಪತ್ನಿಗಾಗಿ ಆತ ನಿರ್ಮಿಸಿದ ರಿಮೋಟ್ ಕಂಟ್ರೋಲ್ ಬೆಡ್

ಸಂದೇಶ ಇ-ಮ್ಯಾಗಝಿನ್: ರೋಗದಿಂದಾಗಿ ನಡೆದಾಡಲು ಸಾಧ್ಯವಾಗದ ತನ್ನ ಪತ್ನಿಗಾಗಿ ತಮಿಳುನಾಡಿನ ವ್ಯಕ್ತಿಯೋರ್ವ ರಿಮೋಟ್ ಕಂಟ್ರೋಲ್ ಬೆಡ್ ನಿರ್ಮಿಸಿದ್ದಾರೆ. ಈ ಒಂದು ಅದ್ಭುತ ಸಂಶೋಧನೆಗಾಗಿ ಸರವಣ ಮುತ್ತು ಅವರಿಗೆ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ವತಿಯಿಂದ ಪ್ರಶಸ್ತಿ ಕೂಡ ಲಭಿಸಿದೆ. ಸರವಣ ಮುತ್ತು ಅವರ ಪತ್ನಿಗೆ ರೋಗ ಕಾರಣದಿಂದಾಗಿ ಮಲಗಿದ್ದಲ್ಲಿಂದ ಎದ್ದೇಳಲು ಸಾಧ್ಯವಾಗದಂತಹ ಅವಸ್ಥೆ ಇದ್ದು, ಇದಕ್ಕಾಗಿ ಸರವಣ ಮುತ್ತು ಅವರು ರಿಮೋಟ್ ಚಾಲಿತ ಟಾಯ್ಲೆಟ್ ಬೆಡ್ ನಿರ್ಮಿಸಿದರು. ಈ ಬೆಡ್‌ನಲ್ಲಿ ಮೂರು ಬಟನ್ ಗಳಿದ್ದು, ಒಂದು ಬಟನ್ ಒತ್ತುವಾಗ ಬೆಡ್‌ನ ತಳಭಾಗ ತೆರೆದುಕೊಳ್ಳುತ್ತದೆ. ಇನ್ನೊಂದು ಬಟನ್ ಒತ್ತುವಾಗ ಕ್ಲೋಸೆಟ್ ತೆರೆದುಕೊಳ್ಳುತ್ತದೆ. ಮತ್ತು ಮೂರನೇ ಬಟನ್ ಒತ್ತುವಾಗ ಟಾಯ್ಲೆಟ್‌ನ ಫ್ಲೆಶ್ ತೆರೆದುಕೊಳ್ಳುತ್ತದೆ.

ಸಂದರ್ಭದ ಮುಂದೆ ಸೋಲೊಪ್ಪಿಕೊಳ್ಳದ ಮುತ್ತು ಈ ಕಾರಣದಿಂದಾಗಿ ಇಂದು ಇಂತಹ ಒಂದು ಸಾಧನೆ ಮಾಡಿದ್ದಾರೆ. ಮಾಜಿ ರಾಷ್ಟ್ರ ಪತಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ತಮ್ಮ ಗುರು ಎನ್ನುವ ಸರವಣ ಮುತ್ತು. ಅವರನ್ನು ಭೇಟಿಯಾಗಿದ್ದಾಗ ನನಗೆ ಏನಾದರೂ ಸಾಧನೆ ಮಾಡಬೇಕು ಅಂತ ಆಸೆಯಾಗಿತ್ತು ಎಂದಿದ್ದಾರೆ.

Check Also

ಅಚಾತುರ್ಯದಿಂದ ಡಿಸೇಲ್ ಕಾರಿ‌ಗೆ ಪೆಟ್ರೋಲ್ ತುಂಬಿಸಿದಾಗ ಈ ರೀತಿ ಮಾಡಿ ನಿಮ್ಮ ವಾಹನವನ್ನು ರಕ್ಷಿಸಿ

ಸಂದೇಶ ಇ-ಮ್ಯಾಗಝಿನ್: ಇವತ್ತಿನ ದಿನಗಳಲ್ಲಿ ನಗರದಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ನೀವು ಪೆಟ್ರೋಲ್ ಪಂಪ್‌ಗೆ ಹೋದರೆ ಅಲ್ಲಿರುವ …

Leave a Reply

Your email address will not be published. Required fields are marked *