Monday , August 26 2019
Breaking News
Home / ರಾಷ್ಟ್ರೀಯ / ಖಾವಿ ಧರಿಸಿದ ಕೂಡಲೇ ಯಾರೂ ಸಾಧ್ವಿಯಾಗಲ್ಲ-ನಟಿ ಸ್ವರಾ ಭಾಸ್ಕರ್

ಖಾವಿ ಧರಿಸಿದ ಕೂಡಲೇ ಯಾರೂ ಸಾಧ್ವಿಯಾಗಲ್ಲ-ನಟಿ ಸ್ವರಾ ಭಾಸ್ಕರ್

ಸಂದೇಶ ಇ-ಮ್ಯಾಗಝಿನ್: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ಬಿಜೆಪಿ ವಿರೋಧಿ ಹೇಳಿಕೆಗಳಿಂದಲೇ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಚರ್ಚೆಯಲ್ಲಿರುವಂತಹ ವ್ಯಕ್ತಿಯಾಗಿದ್ದಾರೆ. ಇದೀಗ ಭೋಪಾಲ್ ಬಿಜೆಪಿ ಅಭ್ಯರ್ಥಿ ಮಾಲೇಗಾಂವ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಬಗ್ಗೆ ನಟಿ ಸ್ವರ ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ. “ಪ್ರಜ್ಞಾಳಂತಹ ಜನರನ್ನು ಬಿಜೆಪಿ ತನ್ನ ಅಭ್ಯರ್ಥಿಯಾಗಿಸುತ್ತದೆ ಎಂದು ನಾಚಿಗೆ ಗೇಡಿಅನ್ ಸಂಗತಿಯಾಗಿದ್ದು, ಪ್ರಜ್ಞ ಖಾವಿ ಧರಿಸಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾರೆ. ಅವರ ಮೇಲೆ ಭಯೋತ್ಪಾದನೆಯ ಆರೋಪವಿದೆ. ಆದುದರಿಂದ ನಾನು ಅವರನ್ನು ಹಿಂದೂ ಭಯೋತ್ಪಾದನೆಯ ಆರೋಪಿ ಎಂದು ಹೆಸರಿಸಲು ಬಯಸುತ್ತೇನೆ. ಇಂತವರಿಗೆಲ್ಲಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡುತ್ತಾರೆ ಎಂಬುದು ಅತಿದೊಡ್ದ ವಿಪರ್ಯಾಸವಾಗಿದೆ ಎಂದು ಸ್ವರ ಹೇಳಿದ್ದಾರೆ.

ರೈತರು ನಮಗೆ ಅನ್ನಹಾಕುತ್ತಾರೆ. ಆದರೆ ಕೇಂದ್ರದಲ್ಲಿ ಕುಳಿತ ಸರಕಾರ ಅದನ್ನು ಮರೆತಂತಿದೆ. ದನ ನಮ್ಮ ತಾಯಿಯಾಗಿದ್ದಲ್ಲಿ, ರೈತ ನಮ್ಮ ತಂದೆಯಾಗಿದ್ದಾರೆ ಎಂದು ಯಾಕೆ ಒಪ್ಪಿಕೊಳ್ಳಲ್ಲ. ನಿಮಗೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲದಿದ್ದರೂ ಚಿಂತೆ ಇಲ್ಲ. ಅವರ ಮೇಲೆ ದೌರ್ಜನ್ಯ ಎಸಗಬೇಡಿ. ಪರ್ತಿವರ್ಷ 10-15 ಸಾವಿರ ರೈತರು ನಿಮ್ಮ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಖೇದಕರ ಸಂಗತಿ ಎಂದು ಸ್ವರ ಹೇಳಿದ್ದಾರೆ.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *