Saturday , April 4 2020
Breaking News
Home / ರಿಯಲ್ ಹೀರೋಸ್ / ಮಾಮ ನಮಗೊಂದು ಮನೆ ಕಟ್ಟಿಕೊಡು ಪ್ಲೀಸ್ ಎಂದು ಫೋನ್ ಮಾಡಿ ಅಳವತ್ತುಕೊಂಡಳು ರಾಹಿಮಾ

ಮಾಮ ನಮಗೊಂದು ಮನೆ ಕಟ್ಟಿಕೊಡು ಪ್ಲೀಸ್ ಎಂದು ಫೋನ್ ಮಾಡಿ ಅಳವತ್ತುಕೊಂಡಳು ರಾಹಿಮಾ

ಸಂದೇಶ ಇ-ಮ್ಯಾಗಝಿನ್: ಕೇರಳದ ಸುಶಾಂತ್ ನಿಲಂಬೂರ್ ಬಗ್ಗೆ ನಿಮಗೆ ಗೊತ್ತಿರಬಹುದು. ರಿಕ್ಷಾ ಚಾಲಕನಾಗಿರುವ ಸುಶಾಂತ್ ಫೆಸ್ಬುಕ್ , ವಾಟ್ಸಾಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮಾಡಿ ಹಲವಾರು ಬಡ ಕುಟುಂಬಗಳಿಗೆ, ರೋಗಿಗಳಿಗೆ ಸಹಾಯ ಮಾಡಲು ವಿಶ್ವದಾದ್ಯಂತ ಇರುವ ಮಲಯಾಳಿಗಳಿಂದ ದೇಣಿಗೆ ಸಂಗ್ರಹಿಸಿ ಕೊಡುತ್ತಾ ಸಮಾಜ ಸೇವೆ ಮಾಡುವ ಒಬ್ಬ ಸಹೃದಯಿ ಯುವಕ.

ಮೊನ್ನೆ ಸುಶಾಂತ್‌ಗೆ ಒಂದು ಫೋನ್ ಕರೆ ಬರುತ್ತದೆ. ಫೋನ್ ರಿಸೀವ್ ಮಾಡಿದಾಗ ಯುವತಿಯೊಬ್ಬಳು ಇದು ಸುಶಾಂತ್ ಮಾಮ ಅಲ್ವ ಅಂತ ಮಾತು ಪ್ರಾರಂಭಿಸಿ, ನಾನು ಪಾಲಕ್ಕಾಡ್ ಜಿಲ್ಲೆಯ ಕೂವಂಗಾಡ್ ಕುಮ್ಮನರಿ ಎಂಬ ಸ್ಥಳದಿಂದ ಕರೆ ಮಾಡುತ್ತಿದ್ದೇನೆ. ನಾನು ಪ್ಲಸ್ ಟೂ ವಿದ್ಯಾರ್ಥಿನಿ. ನನ್ನ ತಾಯಿ ಒಬ್ಬರು ಮಾನಸಿಕ ರೋಗಿಯಾಗಿದ್ದು, ನನ್ನ ತಂದೆ ರಬ್ಬರ್ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅವರ ಸಂಪಾದನೆ ತಾಯಿಯ ಚಿಕಿತ್ಸೆಗೆ ಸಾಕಾಗುತ್ತಿಲ್ಲ. ನಮಗೊಂದು ಮನೆಯಿಲ್ಲ…ಮಾಮ. ಪ್ಲೀಸ್ ನಮಗೊಂದು ಮನೆಕಟ್ಟಿಕೊಡು. ಇಲ್ಲಾ ಎನ್ನಬೇಡ ಎಂದು ಅಳವತ್ತು ಕೊಂಡಲು.

ಕರೆ ಮಾಡಿದ ಆ ಯುವತಿಯ ಹೆಸರು ರಾಹಿಮಾ ಎಂದಾಗಿತ್ತು. ಸುಶಾಂತ್ ಅವರ ಸಮಾಜ ಸೇವೆಯ ಕಾರ್ಯಗಳು ಈಗಾಗಲೇ ಕೇರಳದಲ್ಲಿ ಮನೆ ಮಾತಾಗಿದ್ದು, ನನ್ನ ಕುಟುಂಬಕ್ಕೂ ಇವರಿಂದ ಸಹಾಯ ಸಿಗಬಹುದು ಎಂಬ ಆಸೆಯಿಂದ ಆಕೆ ಕರೆ ಮಾಡಿದ್ದಳು.

ರಾಹಿಮಾಳ ತಾಯಿ ಮಾನಸಿಕ ರೋಗಿಯಾಗಿದ್ದು, ತಂದೆ ಕೂಲಿ ಕೆಲಸ ಮಾಡಿ ಕುಟುಂಬವನ್ನೂ ಸಾಕಬೇಕು. ತಾಯಿಯ ರೋಗಕ್ಕೆ ಮದ್ದೂ ಮಾಡಬೇಕು. ಇಬ್ಬರು ಹೆಣ್ಣು ಮಕ್ಕಳು. ರಾಹಿಮಾ ಮತ್ತು ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಆಕೆಯ ತಂಗಿ. ಒಬ್ಬರು ಪ್ರಾಯದ ಅಜ್ಜಿ ಮನೆಯಲ್ಲಿದ್ದಾರೆ.

ಕಷ್ಟದಲ್ಲೇ ದಿನ ದೂಡುತಿರುವ ಈ ಕುಟುಂಬಕ್ಕೆ ಮನೆ ಕಟ್ಟುವ ವಿಚಾರವಂತೂ ಯೋಚಿಸುವ ಹಾಗೇ ಇಲ್ಲ. ಯಾರೋ ದಾನವಾಗಿ ಕೊಟ್ಟ ಜಾಗದಲ್ಲಿ ಊರವರು ಟಾರ್ಪಲ್‌ನಲ್ಲಿ ಒಂದು ಜೋಪಡಿ ನಿರ್ಮಿಸಿ ಕೊಟ್ಟಿದ್ದಾರೆ. ಇದೇ ಕಾರಣದಿಂದಾಗಿ ಅಸಹಾಯಕ ಕುಟುಂಬದ ಹೆಣ್ಣು ಮಗಳು ರಾಹಿಮಾ ನಮಗೊಂದು ಸಣ್ಣ ಮನೆ ನಿರ್ಮಿಸಿ ಕೊಡು ಮಾಮಾ ಎಂದು ಅಳವತ್ತುಕೊಂಡಿದ್ದಾಳೆ.

ಸಹಾಯ ಮಾಡುವಾಗ ಜಾತಿ ಧರ್ಮ ನೋಡದ ಸುಶಾಂತ್ ಆ ಅಸಹಾಯಾಕ ಕುಟುಂಬದ ವೇದನೆಯ ಕಥೆ ಕೇಳಿ ಕೂಡಲೇ ಕಾರ್ಯಪ್ರವೃತ್ತರಾಗುತ್ತಾರೆ. ಬಳಿಕ ರಾಹಿಮಾಳ ಮನೆಗೆ ಭೇಟಿ ನೀಡಿ ಎಂದಿನಂತೆ ತಮ್ಮ ಶೈಲಿಯಲ್ಲಿ ವೀಡಿಯೋ ಮಾಡಿ ಅಸಹಾಯಕ ಕುಟುಂಬಕ್ಕೆ ಮನೆ ನಿರ್ಮಿಸಲು ಸಹಾಯ ಮಾಡುವಂತೆ ಮಲಯಾಳಿಗಳಲ್ಲಿ ವಿನಂತಿ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ರಾಹಿಮಾ ಸುಶಾಂತ್ ಮನಮಿಡಿಯುವ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ಹಲವಾರು ಮಂದಿ ಅಸಹಾಯಕ ಕುಟುಂಬಕ್ಕೆ ಮನೆ ನಿರ್ಮಿಸಲು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ.

Please #help and #shareഞാൻ ഇന്ന് ഈ മോളുടെ വീട്ടിൽ പോയിരുന്നു. വീട് എന്ന് പറയാൻ പറ്റുമോ അറിയില്ല, ഷീറ്റ് കൊണ്ട് മറച്ച കാറ്റടിച്ചാൽ പറന്നു പോവുന്ന ചെറിയ ഒരു കൂര 😭 ആ കൂരയിൽ തീരാ സങ്കടങ്ങൾ മനസ്സിൽ ഒതുക്കി ആരോടും പരിഭവം പറയാതെ കഴിയുകയാണ് ഈ കുടുംബം.കോടികൾ മുടക്കി അമ്പലവും പള്ളിയും ദേവാലയങ്ങളും നിർമ്മിക്കുന്ന നമ്മുടെ നാട്ടിൽ ദാനം കിട്ടിയ ഈ മൂന്നു സെന്റ് സ്ഥലത്ത് ഈ മോൾക്ക്‌ ഒരു വീട് നിർമ്മിച്ചു നൽകാൻ സഹായിക്കാമോ 🙏ഈ മോളുടെ സംസാരം കേട്ടപ്പോൾ കണ്ണു നിറഞ്ഞു പോയി 😭നമ്മൾ എല്ലാവരും ഒന്ന് ശ്രമിച്ചാൽ ഈ കുഞ്ഞിന്റെ വീട് എന്ന സ്വപ്നം എത്രയും പെട്ടന്ന് നിറവേറ്റാൻ ആവും. മാനസിക രോഗി ആയ ഉമ്മയും, പ്രായം ചെന്ന ഉമ്മൂമ്മയും വല്ലിപ്പയും അനിയത്തിക്കും തല ചായ്ക്കാൻ ഒരു വീട് വേണം. കഴിയുന്ന പോലെ സഹായിക്കാമോ 🙏Customer name :Rahima shoukkathaliAccount number :33143669281IFSC code :SBIN0014966State Bank of India Kongad branchMOB 9961457459

Posted by Sushanth Nilambur on Thursday, 2 May 2019

Check Also

ಅಮೇರಿಕಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಶಸ್ತಿ ಪಡೆದ 10 ವರ್ಷದ ಹಫೀಜ್-ಎ-ಕುರಾನ್

ಸಂದೇಶ ಇ-ಮ್ಯಾಗಝಿನ್: ಕ್ಯಾವಿಟಿ ಕ್ರಷರ್ ಅನ್ನು ಕಂಡುಹಿಡಿದಿದ್ದಕ್ಕಾಗಿ 10 ವರ್ಷದ ಪಾಕಿಸ್ತಾನಿ ಮಗು ಮತ್ತು ಅವರ ಕುಟುಂಬದೊಂದಿಗೆ ಅಮೆರಿಕದಲ್ಲಿ ಎಐ …

Leave a Reply

Your email address will not be published. Required fields are marked *