Monday , August 26 2019
Breaking News
Home / ರಾಷ್ಟ್ರೀಯ / ರಂಝಾನ್‌ನಲ್ಲಿ ಮತದಾನದ ಸಮಯದಲ್ಲಿ ಬದಲಾವಣೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರಿಂ ಕೋರ್ಟ್‌ನಲ್ಲಿ ವಜಾ

ರಂಝಾನ್‌ನಲ್ಲಿ ಮತದಾನದ ಸಮಯದಲ್ಲಿ ಬದಲಾವಣೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರಿಂ ಕೋರ್ಟ್‌ನಲ್ಲಿ ವಜಾ

ಸಂದೇಶ ಇ-ಮ್ಯಾಗಝಿನ್: ಈ ಬಾರಿಯ ಲೋಕಸಭಾ ಚುನಾವಣೆ ಮುಸ್ಲಿಮರ ಪವಿತ್ರ ರಂಝಾನ್ ತಿಂಗಳಲ್ಲಿ ಬಂದಿರುವ ಕಾರಣ ತೀವ್ರವಾದ ಸೆಖೆಯಿರುವ ಕಾರಣ ಮುಸ್ಲಿಮ್ ಮತದಾರರಿಗೆ ಅನುಕೂಲವಾಗುವಂತೆ ಮತದಾನದ ಸಮಯವನ್ನು ಅದಲು ಬದಲು ಮಾಡಬೇಕು ಎಂದು ಸುಪ್ರಿಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನೈಕ ಹಿತಾಸಕ್ತಿಯ ಅರ್ಜಿಯನ್ನು ಸುಪ್ರಿಮ್ ಪೀಠವು ಇಂದು ವಜಾಗೊಳಿಸಿತು. ಜೊತೆಗೆ ಸುಪ್ರಿಂ ಕೋರ್ಟ್ ಈ ಬಗ್ಗೆ ಯಾವುದೇ ಆದೇಶ ನೀಡುವುದಕ್ಕೂ ನಿರಾಕರಿಸಿತು. ನ್ಯಾಯವಾದಿ ಮೊಹಮ್ಮದ್ ನಿಝಾಮುದ್ಧೀನ್ ಪಾಷಾ ಹಾಗೂ ಅಸದ್ ಹಯಾತ್ ಎಂಬ ಇಬ್ಬರು ಈ ಅರ್ಜಿಯನ್ನು ಸಲ್ಲಿಸಿದ್ದು, ವಿಚಾರಣೆಗೆ ಮುನ್ನ ಸುಪ್ರಿಂ ಕೋರ್ಟ್ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಯೋಚಿಸಿ ನಿರ್ಧಾರ ಕೈಗೊಳ್ಳಲು ಸೂಚಿಸಿತ್ತು. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಮತದಾನದ ಸಮಯ 7 ಬೆಳಗ್ಗೆ 7 ರ ಬದಲು ಬೆಳಗ್ಗೆ 4:30 ಅಥವಾ 5:00 ಕ್ಕೆ ಪ್ರಾರಂಭಿಸುವಂತೆ ಕೋರಿದ್ದರು. ತೀವ್ರ ಸೆಖೆ ಇರುವ ಕಾರಣ ರಂಝಾನ್ ‌ನಲ್ಲಿ ಮುಸ್ಲಿಮರಿಗೆ ಮಧ್ಯಾಹ್ನದ ಸಮಯಕ್ಕೆ ಮತದಾನ ಮಾಡಲು ಕಷ್ಟವಾಗುತ್ತೆ ಎಂದು ತಿಳಿಸಲಾಗಿತ್ತು.

ಸುಪ್ರಿಂ ಆದೇಶದ ಈ ಬಗ್ಗೆ ಸಕಲ ಸೌಲಭ್ಯಗಳನ್ನೂ ಆಧರಿಸಿ ನೋಡಿದ ಚುನಾವಣಾ ಆಯೋಗವು ಮತದಾನದ ಸಮಯದಲ್ಲಿ ಬದಲಾವಣೆ ಅಸಾಧ್ಯ ಎಂದು ತಿಳಿಸಿತ್ತು. ಸುಪ್ರಿಂ ಕೋರ್ಟ್ ಪೀಠವು ಈ ಅರ್ಜಿಯನ್ನು ವಜಾ ಗೊಳಿಸುವ ಮುನ್ನ ಸಮಾಜದ ಪ್ರತಿಯೊಂದು ವರ್ಗಕ್ಕೂ ಅನುಕೂಲವಾಗಲೆಂದೇ ಮತದಾನದ ಅವಧಿಯನ್ನು 8 ಗಂಟೆಯಿಂದ 11 ಗಂಟೆಗೆ ಏರಿಸಲಾಗಿದೆ ಎಂದು ತಿಳಿಸಿದೆ.

Check Also

ಕೈರಾನಾ: ಬಿಜೆಪಿ ವರ್ತಕರನ್ನು ಬಹಿಷ್ಕರಿಸುವಂತೆ ಮುಸ್ಲಿಮರನ್ನು ಒತ್ತಾಯಿಸಿದ ಎಸ್ಪಿ ಮುಖಂಡ

000ಸಂದೇಶ ಇ-ಮ್ಯಾಗಝಿನ್: ಉತ್ತರ ಪ್ರದೇಶದ ಕೈರಾನಾದ ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ನಹೀದ್ ಹಸನ್ ಅವರು ಈ ಪ್ರದೇಶದಲ್ಲಿ ವಾಸಿಸುವ …

Leave a Reply

Your email address will not be published. Required fields are marked *