Friday , May 24 2019
Breaking News
Home / ರಾಷ್ಟ್ರೀಯ / ಡಾ. ಕಫೀಲ್ ಖಾನ್ ಪರ ಯೋಗಿ ಸರಕಾರಕ್ಕೆ ಮಹತ್ವದ ಆದೇಶ ನೀಡಿದ ಸುಪ್ರಿಂ ಕೋರ್ಟ್

ಡಾ. ಕಫೀಲ್ ಖಾನ್ ಪರ ಯೋಗಿ ಸರಕಾರಕ್ಕೆ ಮಹತ್ವದ ಆದೇಶ ನೀಡಿದ ಸುಪ್ರಿಂ ಕೋರ್ಟ್

ಸಂದೇಶ ಇ-ಮ್ಯಾಗಝಿನ್: ಉತ್ತರಪ್ರದೇಶದ ಗೋರಖ್ ಪುರ್‌ನ ಬಿಆರ್‌ಡಿ ಮೆಡಿಕಲ್ ಕಾಲೇಜ್‌ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಶಿಶುಗಳ ಸಾಮೂಹಿಕ ಮರಣ ಪ್ರಕರಣದ ಆರೋಪಿ ಎಂದು ಸೇವೆಯಿಂದ ಅಮಾನತ್ತಾಗಿರುವ ಡಾ. ಕಫೀಲ್ ಅಹ್ಮದ್ ಖಾನ್ ಅವರಿಗೆ ಬಾಕಿ ಇರುವ ಸಂಬಳ ಪಾವತಿ ಮಾಡುವಂತೆ ಸುಪ್ರಿಂ ಕೋರ್ಟ್ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಆದೇಶ ನೀಡಿದೆ. ಇದೂ ಅಲ್ಲದೆ ತನ್ನ ಅಮಾನತ್ತಿನ ಆದೇಶದ ಕುರಿತು ಸುಪ್ರಿಂ ನಲ್ಲಿ ಮೇಲ್ಮನವಿ ಸಲ್ಲಿಸಿರುವ ಕಫೀಲ್ ಖಾನ್ ಅವರ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ 7 ಜೂನ್ ಒಳಗೆ ಡಾ. ಕಫೀಲ್ ಖಾನ್ ಅವರ ಅಮಾನತ್ತಿನ ಕುರಿತಾಗಿ ನಡೆಯುತ್ತಿರುವ ತನಿಖೆಯನ್ನು ಪೂರ್ತಿಗೊಳಿಸಬೇಕು ಎಂದು ನ್ಯಾಯಾಲಯವು ಆದೇಶ ಹೊರಡಿಸಿದೆ. ಘಟನೆ ನಡೆದ ಬಳಿಕ ಆಸ್ಪತ್ರೆಯ ನೂಡಲ್ ಅಧಿಕಾರಿಯಾಗಿದ್ದ ಕಫೀಲ್ ಖಾನ್ ಅವರನ್ನು ಯೋಗಿ ಸರಕಾರ ಅಮಾನತ್ತು ಮಾಡಿತ್ತು. ಕಳೆದ ಎರಡು ವರ್ಷಗಳಿಂದ ಅಮಾನತ್ತಿನಲ್ಲಿರುವ ಕಫೀಲ್ ಖಾನ್ ಕಾನೂನು ಹೋರಾಟ ಮಾಡುತ್ತಲೇ ಬಂದಿದ್ದಾರೆ.

ಈ ಘಟನೆಯಲ್ಲಿ ಸುಮಾರು 30 ಮಕ್ಕಳು ಸಾವನ್ನಪ್ಪಿದ್ದು, ಘಟನೆ ನಡೆದ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೀರೋ ತರ ಬಿಂಬಿತವಾಗಿದ್ದ ಕಫೀಲ್ ಖಾನ್ ಅವರ ಮೇಲೆ ಬಳಿಕ ಯೋಗಿ ಸರಕಾರ ಘಟನೆಯ ಹೊಣೆಯನ್ನು ಹೊರಿಸಿತ್ತು. ಆ ನಂತರ ನಡೆದ ತನಿಖೆಯಲ್ಲಿ ಮಕ್ಕಳ ಸಾವಿಗೆ ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಸರಬರಾಜು ಮಾಡುತ್ತಿದ್ದ ಕಂಪೆನಿ ಹನ ಪಾವತಿ ಬಾಕಿ ಇದ್ದ ಕಾರಣ ಸಿಲಿಂಡರ್ ಪೂರೈಕೆ ಮಾಡದೇ ಇದ್ದುದೇ ಕಾರಣ ಎಂದು ತಿಳಿದು ಬಂದಿದೆ. ಸಿಲಿಂಡರ್ ಕಂಪೆನಿಯ ಮಾಲಿಕನ ಸಹಿತ ಹಲವರನ್ನು ಬಂಧಿಸಲಾಗಿತ್ತು.

Check Also

ಕಾಂಗ್ರೇಸ್ ವಿರುದ್ಧದ 5000 ಕೋಟಿ ರೂ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯಲು ಅನಿಲ್ ಅಂಬಾನಿ ನಿರ್ಧಾರ

000ಸಂದೇಶ ಇ-ಮ್ಯಾಗಝಿನ್: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್ ತಯಾರಿಸಲು ಸಿದ್ಧವಾಗಿರುವ ರಾಫೆಲ್ ಫೈಟರ್ ಜೆಟ್ ವಿವಾದದ ಬಗ್ಗೆ ಲೇಖನ …

Leave a Reply

Your email address will not be published. Required fields are marked *